ಬುಧವಾರ, ಏಪ್ರಿಲ್ 14, 2021
23 °C

ವಚನ ಸಾಹಿತ್ಯಕ್ಕೆ ಹಳಕಟ್ಟಿ ಸೇವೆ ಅಪಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಂಪ್ಲಿ: ವಚನ ಸಾಹಿತ್ಯ ಸಂರಕ್ಷಿಸಿ ಪೋಷಿಸುವಲ್ಲಿ ಸಾಹಿತಿ ಫ.ಗು. ಹಳಕಟ್ಟಿಯವರ ಶ್ರಮ ಶ್ಲಾಘನೀಯ ಎಂದು ಮಲಪನಗುಡಿಯ ಬಸವ ಕೃಪಾನಿಧಿ ಆಶ್ರಮದ ಅಧ್ಯಕ್ಷ ಬಸವಕಿರಣ ಸ್ವಾಮಿ ಹೇಳಿದರು.ಪಟ್ಟಣದ ಕಲ್ಯಾಣಿ ಚೌಕಿ ಮಠದ ಆವರಣದಲ್ಲಿ ಶರಣ ಸಾಹಿತ್ಯ ಪರಿಷತ್ತು ಮತ್ತು ಚಿಕೇನಕೊಪ್ಪ ಚನ್ನವೀರ ಶರಣರ ಸೇವಾ ಸಮಿತಿ ಮಂಗಳವಾರ ಹಮ್ಮಿಕೊಂಡಿದ್ದ 24ನೇ ಮಹಾಮನೆ ಕಾರ್ಯಕ್ರಮದಲ್ಲಿ `ಪ್ರಸ್ತುತ ದಿನಮಾನಗಳಲ್ಲಿ ಶರಣರ ಚಿಂತನೆ~ ಕುರಿತು ಉಪನ್ಯಾಸ ನೀಡಿ ಅವರು ಮಾತನಾಡಿದರು.ಪುರಸಭೆ ಸದಸ್ಯ ಕೆ.ಎಂ. ಹೇಮಯ್ಯ ಸ್ವಾಮಿ ಮಾತನಾಡಿ, ಚಿಕೇನಕೊಪ್ಪ ಚನ್ನವೀರ ಶರಣರ ಆಚಾರ, ನಡೆ ನುಡಿ ವಿಚಾರಗಳು ಇಂದಿಗೂ ಪ್ರಸ್ತುತ ಎಂದರು.ಗುರು ದೊಡ್ಡ ಬಸವೇಶ್ವರ ಗುರುಕುಲ ಮಾದರಿ ಜ್ಯೋತಿಷ ಮತ್ತು ವೈದಿಕ ಪಾಠ ಶಾಲೆ ಪ್ರಾಚಾರ್ಯ ಬಸವರಾಜ ಶಾಸ್ತ್ರಿಗಳು ಅಧ್ಯಕ್ಷತೆ ವಹಿಸಿದ್ದರು. ಬೂದಗುಂಪಿ ವೀರಭದ್ರಪ್ಪ, ಹೂಗಾರ ಸಮಾಜದ ಅಧ್ಯಕ್ಷ ಜೀರು ರಮೇಶ್, ಚಿಕೇನಕೊಪ್ಪ ಚನ್ನವೀರ ಶರಣರ ಸೇವಾ ಸಮಿತಿ ಅಧ್ಯಕ್ಷ ಜೀರು ವಿರೂಪಾಕ್ಷಪ್ಪ, ಬಿ. ವೆಂಕೋಬಣ್ಣ, ಎಸ್.ಎಂ. ಮಹಾಬಲೇಶ್ವರ ಸ್ವಾಮಿ, ಮಾಟೂರು ಮಲ್ಲಪ್ಪ, ಬೂದಗುಂಪಿ ಹುಸೇನ್ ಸಾಬ್ ಹಾಜರಿದ್ದರು.ಅಧ್ಯಾತ್ಮ ಮತ್ತು ಧಾರ್ಮಿಕ ಕ್ಷೇತ್ರಗಳಲ್ಲಿನ ಸೇವೆ ಗುರುತಿಸಿ ಗುರು ಶಿವ ಶರಣರ ಅನುಭವ ಆಶ್ರಮದ ಅಧ್ಯಕ್ಷ ಬಿಂಗಿ ವೆಂಕೋಬಣ್ಣ ಅವರನ್ನು ಸನ್ಮಾನಿಸಲಾಯಿತು. ಗುರುಪೂರ್ಣಿಮೆ ನಿಮಿತ್ತ ಪಾಮಯ್ಯ ಶರಣರು ಬಸವೇಶ್ವರ ವಚನ ಪುಸ್ತಕಗಳನ್ನು ವಿತರಿಸಿದರು. ಮಡಿವಾಳರ ಹುಲುಗಪ್ಪ ಪ್ರಾರ್ಥಿಸಿ ದರು. ಬಂಗಿ ದೊಡ್ಡ ಮಂಜುನಾಥ್ ಸ್ವಾಗತಿಸಿ ನಿರೂಪಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.