ಗುರುವಾರ , ಮೇ 13, 2021
16 °C

ವರದಕ್ಷಿಣೆ ಪದ್ಧತಿ ತೊಡೆದುಹಾಕಲು ಕರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಡಿಕೇರಿ: ಮಹಿಳೆಯರು ಮನಸ್ಸು ಮಾಡಿದಾಗ ಮಾತ್ರ ಸಮಾಜದಲ್ಲಿರುವ ವರದಕ್ಷಿಣೆಯಂತಹ ಅನಿಷ್ಟ ಪದ್ಧತಿಗಳನ್ನು ತೊಡೆದುಹಾಕಲು ಸಾಧ್ಯ ಎಂದು   ನ್ಯಾಷನಲ್ ವಿಮೆನ್ ಫ್ರಂಟ್‌ನ ರಾಜ್ಯ ಕಾರ್ಯದರ್ಶಿ ಫಾತಿಮ ನಸೀಮಾ ಹೇಳಿದರು.ನಗರದ ಕಮ್ಯುನಿಟಿ ಹಾಲ್‌ನಲ್ಲಿ ಬುಧವಾರ ನ್ಯಾಷನಲ್ ವಿಮೆನ್ ಫ್ರಂಟ್ ಹಮ್ಮಿಕೊಂಡ ವರದಕ್ಷಿಣೆ ವಿರೋಧಿ ಜನಜಾಗೃತಿ ಅಭಿಯಾನದಲ್ಲಿ ಅವರು ಮಾತನಾಡಿದರು.ಇಸ್ಲಾಂ ಧರ್ಮದಲ್ಲಿ ವರದಕ್ಷಿಣೆ ಎನ್ನುವುದು ಇಲ್ಲ. ಇದು ಹೊರಗಡೆಯಿಂದ ಬಂದಿರುವಂತಹ ಅನಿಷ್ಟ ಪದ್ಧತಿಯಾಗಿದೆ.ಇಂತಹ ಅನಿಷ್ಟ ಪದ್ಧತಿಯಿಂದಾಗಿ ಬಡ ಕುಟುಂಬಗಳ ಯುವತಿಯರಿಗೆ ಮದುವೆ ಹೊರೆಯಾಗಿ ಪರಿಣಮಿಸಿದೆ. ಇದರ ವಿರುದ್ಧ ಪುರುಷರು- ಮಹಿಳೆಯರು ಎಲ್ಲರೂ ಸೇರಿ ಒಗ್ಗಟ್ಟಾಗಿ ಹೋರಾಡಬೇಕಾಗಿದೆ ಎಂದು ಅವರು ಕರೆ ನೀಡಿದರು.ಮೂಲತಃ ಇಸ್ಲಾಂ ಧರ್ಮದಲ್ಲಿ ಹೆಣ್ಣಿಗೆ ಅತ್ಯಂತ ಎತ್ತರದ ಸ್ಥಾನ ನೀಡಲಾಗಿದೆ. ಆದರೆ, ಇಂದು ಹೆಣ್ಣನ್ನು ಸಮಾಜವು ಮಾರಾಟದ ವಸ್ತುವನ್ನಾಗಿ ನೋಡುತ್ತಿದೆ. ಸಿಮೆಂಟ್ ಕಂಪೆನಿಯೊಂದರ ಜಾಹೀರಾತಿನಲ್ಲಿಯೂ ಯುವತಿಯರನ್ನು ತೋರಿಸಲಾಗುತ್ತಿದೆ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದರು.ಸಭೆಯಲ್ಲಿ ಶಿಕ್ಷಕಿ ನಿಶಾತ್ ಸುಲ್ತಾನ್, ಫ್ರಂಟ್‌ನ ಕೊಡಗು ಜಿಲ್ಲಾ ಕಾರ್ಯದರ್ಶಿ ಜಾಕಿಯಾ, ಆಶಿಕಾ, ಮೈಮುನಾ, ಸೇರಿದಂತೆ ಇತರರು ಭಾಗವಹಿಸಿದ್ದರು. ಜನಜಾಗೃತಿ ಅಭಿಯಾನದಲ್ಲಿ ಹಲವು ಮಹಿಳೆಯರು ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.