ಶುಕ್ರವಾರ, ಆಗಸ್ಟ್ 7, 2020
28 °C

ವರುಣ ದೇವತೆಗೆ ಮಾಧುರಿ ದೀಕ್ಷಿತ್ ಪ್ರಾರ್ಥನೆ: ಛಕ್ ಧುಮ್ ಧುಮ್ ಹಾಡು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವರುಣ ದೇವತೆಗೆ ಮಾಧುರಿ ದೀಕ್ಷಿತ್ ಪ್ರಾರ್ಥನೆ: ಛಕ್ ಧುಮ್ ಧುಮ್ ಹಾಡು

ಪುಣೆ (ಪಿಟಿಐ): ನೀರಿನ ಅಭಾವದಿಂದ ಕಂಗೆಟ್ಟಿರುವ ನಗರದಲ್ಲಿ ಹೆಚ್ಚು ಮಳೆ ಸುರಿಸುವಂತೆ ಕೋರಿ ವರುಣ ದೇವತೆಗೆ ಸೋಮವಾರ ಪ್ರಾರ್ಥನೆ ಸಲ್ಲಿಸಿದ ಪುಣೆ ಮಂದಿಯ ಜೊತೆಗೂಡಿದ ಖ್ಯಾತ ಬಾಲಿವುಡ್ ನಟಿ ಮಾಧುರಿ ದೀಕ್ಷಿತ್  ತಾವು ನಟಿಸಿದ ~ದಿಲ್ ತೊ ಪಾಗಲ್ ಹೈ~ ಚಿತ್ರದ ಮಳೆಹಾಡಿನ ಕೆಲವು ಸಾಲುಗಳನ್ನು ಹಾಡಿ ಮಳೆಗಾಗಿ ಪ್ರಾರ್ಥನೆ ಮಾಡಿದರು.ಮಾಧುರಿ ದೀಕ್ಷಿತ್ ಅವರು ಚಲನಚಿತ್ರದ ~ಕೋಯಿ ಲಡ್ಕಿ ಹೈ, ಜಬ್ ವೊ ಹಂಸ್ತಿ ಹೈ, ಬಾರಿಶ್ ಹೋತಿ ಹೈ...ಛಕ್ ಧುಮ್ ಧುಮ್...~ ಹಾಡನ್ನು ಹಾಡಿದರು. ಮಾಧುರಿ ಪತಿ ಡಾ. ಶ್ರೀರಾಮ್ ನೇನೆ ಪ್ರೇಕ್ಷಕಕ ಮಧ್ಯೆ ಕುಳಿತು ಮಾಧುರಿ ಹಾಡನ್ನು ಆಲಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.