ಮಂಗಳವಾರ, ಜನವರಿ 21, 2020
27 °C

ವರ್ತೂರು ವಾರ್ಡ್‌ಗೆ 3.75 ಕೋಟಿ ವಿಶೇಷ ಅನುದಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಹದೇವಪುರ: ರಾಜ್ಯ ಸರ್ಕಾರದ ವಿಶೇಷ ಅನುದಾನದಡಿ ವರ್ತೂರು ವಾರ್ಡ್ ವ್ಯಾಪ್ತಿಯಲ್ಲಿ ಒಟ್ಟು 3.75 ಕೋಟಿ ರೂ. ವೆಚ್ಚದಲ್ಲಿ ಕೈಗೊಳ್ಳಲಿರುವ ಅಭಿವೃದ್ಧಿ ಕಾಮಗಾರಿಗಳಿಗೆ ಇತ್ತೀಚೆಗೆ ಚಾಲನೆ ನೀಡಲಾಯಿತು.ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಅರವಿಂದ ಲಿಂಬಾವಳಿ, `ರಾಜಶ್ರೀ ಬಡಾವಣೆ, ಮುನೇಶ್ವರ ಬಡಾವಣೆ, ಭುವನೇಶ್ವರಿ ಬಡಾವಣೆಯಲ್ಲಿನ ಅಡ್ಡರಸ್ತೆ, ಮುನ್ನೆಕೊಳಾಲ ಪ್ರದೇಶದ ರಸ್ತೆಗಳು ಹಾಗೂ ಚರಂಡಿ ನಿರ್ಮಾಣ ಕಾಮಗಾರಿಗೆ ಒಟ್ಟು 1.20 ಕೋಟಿ ರೂಪಾಯಿ ಅನುದಾನ ಬಿಡುಗಡೆಯಾಗಿದೆ. ಹಾಗೆಯೇ 50 ಲಕ್ಷ ರೂ. ವೆಚ್ಚದಲ್ಲಿ ಸೊರಹುಣಸೆ ಗ್ರಾಮದ ರಸ್ತೆ ಹಾಗೂ ರಸ್ತೆಬದಿಯ ಚರಂಡಿ ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಳ್ಳಲಾಗವುದು~ ಎಂದರು.ಗುಂಜೂರು ಮತ್ತು ವರ್ತೂರು ಗ್ರಾಮದಲ್ಲಿರುವ ಶಾಲಾ-ಕಾಲೇಜು ಆಟದ ಮೈದಾನಗಳ ದುರಸ್ತಿ ಕಾಮಗಾರಿಗೆ ತಲಾ 20 ಲಕ್ಷ ರೂಪಾಯಿ ಬಿಡುಗಡೆಯಾಗಿದೆ ಎಂದು ಅವರು ಹೇಳಿದರು.ಬಿಬಿಎಂಪಿ ಸದಸ್ಯ ಎಸ್.ಉದಯಕುಮಾರ್, ಮಹದೇವಪುರ ಕ್ಷೇತ್ರದ ಬಿಜೆಪಿ ಘಟಕದ ಅಧ್ಯಕ್ಷ ಜಯಚಂದ್ರರೆಡ್ಡಿ, ತಾ. ಪಂ. ಮಾಜಿ ಸದಸ್ಯ ವಿ.ಟಿ.ಬಿ.ವೆಂಕಟಸ್ವಾಮಿ ರೆಡ್ಡಿ, ಸೊರಹುಣಸೆ ಬಾಬುರೆಡ್ಡಿ ಇತರರು ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)