ಗುರುವಾರ , ಜೂನ್ 24, 2021
29 °C
‘ಒಂಟಿ ಜೀವನ ಸಾಕಾಗಿದೆ: ಬದಲಾವಣೆ ಕಾಲಬಂದಿದೆ’

ವರ್ಷಾಂತ್ಯಕ್ಕೆ ಸಲ್ಮಾನ್‌ ಮದುವೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ ತಮಗೆ ಒಂಟಿ ಜೀವನ ಸಾಕಾಗಿದೆ ಎಂದು ಹೇಳುವ ಮೂಲಕ ವರ್ಷಾಂತ್ಯದಲ್ಲಿ ಮದುವೆಯಾಗುವ ಸೂಚನೆ ನೀಡಿದ್ದಾರೆ.2014 ರ ಇಂಡಿಯಾ ಟುಡೇ ಸಮಾವೇಶದಲ್ಲಿ ಮಾತನಾಡಿದ ನಟ ಸಲ್ಮಾನ್‌ ಖಾನ್‌,  ಬಹುದಿನಗಳ  ಗೆಳತಿ ರುಮೇನಿಯಾದ ಇಲಿಯಾ ವಂತೂರ್‌ ಅವರನ್ನು ಮದುವೆಯಾಗುವ ಸಂಬಂಧ ಪ್ರಶ್ನೆಗಳು ಬಂದಾಗ ಆ ವಿಷಯವನ್ನು ತಳ್ಳಿಹಾಕಿಲ್ಲ.‘ನಾನೀಗ ಬದಲಾವಣೆಯ ಕಾಲಘಟ್ಟದಲ್ಲಿದ್ದೇನೆ ಬಹುಬೇಗ ನನ್ನ ಜೀವನದಲ್ಲಿ ಹೊಸ ಗಳಿಗೆ ಬರಲಿದೆ’ ಎಂದು ಹೇಳಿದ್ದಾರೆ.ನಾನು ಮುನುಷ್ಯ ಧರ್ಮ, ಮುಸ್ಲಿಂ ಧರ್ಮ, ಕ್ರಿಶ್ಚಿಯನ್‌ ಧರ್ಮ ಎಲ್ಲವನ್ನೂ ಪಾಲಿಸುತ್ತೇನೆ. ನನ್ನ ತಂದೆ ಪಠಾಣ್‌, ತಾಯಿ ಹಿಂದು, ಚಿಕ್ಕಮ್ಮ ಕ್ಯಾಥೋಲಿಕ್‌, ಸಹೋದರಿಯ ಪತಿ ಪಂಜಾಬಿ, ಹೆಂಡತಿ...... ಹೊರಗಿನಿಂದ ಬಂದವರಾಗಿರಲಿ ಎಂದು ಸಲ್ಮಾನ್‌ ಹೇಳಿದ್ದಾರೆ.‘ಮಾಜಿ ಗೆಳತಿಯರು ನನಗೆ ನೀನು ಒಳ್ಳೆಯ ಪ್ರೇಮಿಯಲ್ಲ, ಆದರೆ ಒಳ್ಳೆಯ ಸ್ನೇಹಿತ ಎಂದು ಹೇಳಿದ್ದಾರೆ’ ಎಂದು ಸಲ್ಮಾನ್‌ ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.