ಶುಕ್ರವಾರ, ಮಾರ್ಚ್ 5, 2021
30 °C

ವರ್ಷ ಪೂರೈಸಿದ ಬಾಷ್‌ ಕಾರ್ಮಿಕರ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವರ್ಷ ಪೂರೈಸಿದ ಬಾಷ್‌ ಕಾರ್ಮಿಕರ ಪ್ರತಿಭಟನೆ

ಬೆಂಗಳೂರು: ಕಾರಣವಿಲ್ಲದೆ ತಮ್ಮನ್ನು ಕೆಲಸದಿಂದ ತೆಗೆದು ಹಾಕಲಾಗಿದೆ ಎಂದು ಆರೋಪಿಸಿ ಬಾಷ್ ಕಂಪೆನಿ  ಆಡಳಿತ ಮಂಡಳಿ ವಿರುದ್ಧ ಕಾರ್ಮಿಕರು ನಡೆಸುತ್ತಿರುವ ಪ್ರತಿಭಟನೆ  ಭಾನುವಾರಕ್ಕೆ (ಆಗಸ್ಟ್‌ 14) ಒಂದು ವರ್ಷ ಪೂರೈಸಲಿದೆ. ಆಡುಗೋಡಿಯಲ್ಲಿರುವ ಕಂಪೆನಿ ಕಚೇರಿಯ ಬಾಗಿಲು ಬಳಿ ಅಹೋರಾತ್ರಿ ಪ್ರತಿಭಟನೆ ನಡೆಸಿದರೂ ಬೇಡಿಕೆ ಈಡೇರಿಸಲು ಆಡಳಿತ ಮಂಡಳಿ ಹಿಂದೇಟು ಹಾಕುತ್ತಿದೆ ಎಂದು ಕಾರ್ಮಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.‘2015ರ ಆಗಸ್ಟ್‌ 14ರಿಂದ ಪ್ರತಿಭಟನೆ ನಡೆಸುತ್ತಿದ್ದೇವೆ. ನಮ್ಮ ಯಾವುದೊಂದು ಬೇಡಿಕೆಯನ್ನೂ ಕಂಪೆನಿ ಅಧಿಕಾರಿಗಳು ಈಡೇರಿಸಿಲ್ಲ. ಅದರಿಂದಾಗಿ ಕೆಲಸ ಕಳೆದುಕೊಂಡಿರುವ ಕಾರ್ಮಿಕರ ಕುಟುಂಬಗಳು ಬೀದಿಪಾಲಾಗಿವೆ’ ಎಂದು ನೊಂದ ಕಾರ್ಮಿಕರು ಅಳಲು ತೋಡಿಕೊಂಡರು.‘ತಾಂತ್ರಿಕ ವಿಭಾಗದಲ್ಲಿ ಕೆಲಸ ಮಾಡುತ್ತಿರುವ 263 ಮಂದಿಯನ್ನು ಕಾಯಂ ಮಾಡಿಕೊಳ್ಳುವುದಾಗಿ  ಕಂಪೆನಿಯು ಭರವಸೆ ನೀಡಿತ್ತು. ಆದರೆ ಅದನ್ನು ಈಡೇರಿಸದ ಆಡಳಿತ ಮಂಡಳಿಯು ಏಕಾಏಕಿ ಕೆಲಸದಿಂದ ತೆಗೆದುಹಾಕಿದೆ’ ಎಂದು ಕಾರ್ಮಿಕ ಪ್ರಕಾಶ್‌ ದೂರಿದರು.‘ಕಂಪೆನಿಯು ನಷ್ಟದಲ್ಲಿದ್ದು, ಕಾರ್ಮಿಕರ ಸಂಖ್ಯೆ ಕಡಿಮೆ ಮಾಡುತ್ತಿದ್ದೇವೆ ಎಂದು ಕಂಪೆನಿಯವರು ಹೇಳುತ್ತಿದ್ದಾರೆ.  ಕಂಪೆನಿಯು ಲಾಭದಲ್ಲಿದ್ದು, ನಮ್ಮನ್ನು ಕಾಯಂ ಮಾಡಿದರೆ ಹೆಚ್ಚಿನ ಸವಲತ್ತು ಕೊಡಬೇಕಾಗುತ್ತದೆ ಎಂದು ಈ ರೀತಿ ಮಾಡಲಾಗುತ್ತಿದೆ’ ಎಂದು ತಿಳಿಸಿದರು.ಸಚಿವರ ಸಮ್ಮುಖದಲ್ಲಿ ಸಭೆ: ‘ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ಅವರು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಆಲಿಸಿದ್ದರು. ಅಲ್ಲದೆ, ಕೂಡಲೇ ಕಾರ್ಮಿಕರ ಸಮಸ್ಯೆಗಳನ್ನು ಬಗೆಹರಿಸುವಂತೆ ಕಂಪೆನಿ ಆಡಳಿತ ಮಂಡಳಿಗೆ ಸೂಚಿಸಿದ್ದರು. ಆದರೆ, ಅವರ ಮಾತಿಗೂ ಕಂಪೆನಿ ಬೆಲೆ ನೀಡುತ್ತಿಲ್ಲ’ ಎಂದು  ಪ್ರತಿಭಟನಾ ನಿರತ ಕಾರ್ಮಿಕರು ದೂರಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.