ಚಿಂತಾಮಣಿ: ಬಸವ ವಸತಿ ಯೋಜನೆ ಅಡಿಯಲ್ಲಿ ವಸತಿ ರಹಿತರಿಗೆ ವಸತಿ ಕಲ್ಪಿಸಲು ಜಾಗೃತಿ ಸಮಿತಿಯು ರಾಜ್ಯದಲ್ಲಿಯೇ ಮಾದರಿಯಾಗಿ ಕಾರ್ಯ ನಿರ್ವಹಿಸಬೇಕು ಎಂದು ಶಾಸಕ ಡಾ.ಎಂ.ಸಿ.ಸುಧಾಕರ್ ತಿಳಿಸಿದರು.
ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಈಚೆಗೆ ನಡೆದ ಜಾಗೃತಿ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಅರ್ಹರಿಗೆ ವಸತಿ ನೀಡಲು ಪ್ರಾಮಾಣಿಕವಾಗಿ ಅಂತಿಮ ಪಟ್ಟಿ ಸಿದ್ಧಪಡಿಸಬೇಕು ಎಂದರು.

ಚಿಂತಾಮಣಿ ಕ್ಷೇತ್ರದಲ್ಲಿ ಅರ್ಹರಿಗೆ ವಸತಿ ಕಲ್ಪಿಸಲು ಶ್ರಮ ವಹಿಸಿದ್ದೀರಿ. ಮತ್ತಷ್ಟು ವಸತಿ ಮಂಜೂರು ಮಾಡಲು ಸಿದ್ಧನೆಂದು ವಸತಿ ಸಚಿವರು ಭರವಸೆ ನೀಡಿದ್ದಾರೆ. ಮೂರು ಸಾವಿರ ಮನೆಗಳ ನಿರ್ಮಾಣಕ್ಕೆ ಪಟ್ಟಿ ಸಿದ್ಧಗೊಂಡಿದೆ. ಹೆಚ್ಚಿನ ಮನೆಗಳನ್ನು ನೀಡಲು ಕೇಳಿದರೆ ಸಚಿವರು ಒಪ್ಪಿಕೊಳ್ಳುತ್ತಾರೆ ಎಂದರು.

ಲೋಕಾಯುಕ್ತ ವರದಿಯನ್ನು ಗಮನದಲ್ಲಿಟ್ಟುಕೊಂಡು ಬಿಪಿಎಲ್ ಕಾರ್ಡ್ದಾರರಿಗೆ ಆದ್ಯತೆ ನೀಡಬೇಕು. ಸರ್ಕಾರಿ ಸುತ್ತೋಲೆಯಂತೆ ಕಾರ್ಯನಿರ್ವಹಿಸಬೇಕು, ಅಪೂರ್ಣ ಮಾಹಿತಿಯನ್ನು ನೀಡಿರುವ ಗ್ರಾಮ ಪಂಚಾಯ್ತಿಗಳ ಪಟ್ಟಿಗಳಿಗೆ ಅನುಮತಿ ನೀಡುವುದಿಲ್ಲ. ಕಾನೂನಿನಂತೆ ಗ್ರಾಮ ಸಭೆಯ ಮೂಲಕ ಆಯ್ಕೆಯಾಗಿ ನಂತರ ಪರಿಶೀಲನೆ ನಡೆಸಿ ಅರ್ಹರನ್ನು ಯಾವುದೇ ಕಾರಣಕ್ಕೂ ಕೈ ಬಿಡಬಾರದು.

ಮನೆಗಳ ಪೋಟೋ ಮತ್ತು ದಾಖಲೆಗಳನ್ನು ಕಡ್ಡಾಯವಾಗಿ ನೀಡಬೇಕು. ಕೆಲವು ಗ್ರಾಮ ಪಂಚಾಯಿತಿಗಳ ಅಧ್ಯಕ್ಷರು ಸಹಿ ಹಾಕದಿದ್ದರೂ ಜಾಗೃತಿ ಸಭೆಗೆ ಇರುವ ಕಾರ್ಯ ವ್ಯಾಪ್ತಿಯಲ್ಲಿ ಪಟ್ಟಿ ಮಾಡಲಾಗುವುದು. ಅನರ್ಹರಿಗೆ ಮತ್ತು ಪಕ್ಷಪಾತದಿಂದ ಮನೆಗಳನ್ನು ನೀಡುವುದಿಲ್ಲ ಎಂದರು.

ತಾ.ಪಂ. ಅಧ್ಯಕ್ಷ ರೆಡ್ಡೆಪ್ಪ, ಉಪಾಧ್ಯಕ್ಷೆ ಪದ್ಮಮ್ಮ, ಜಿ.ಪಂ. ಸದಸ್ಯರಾದ ಚಿನ್ನಪ್ಪ, ವೀಣಾ ಗಂಗುಲಪ್ಪ, ಶೇಖ್ಮೌಲ, ತಾ.ಪಂ.ಇ.ಓ. ಬಸವರಾಜು, ಸದಸ್ಯರಾದ ಸುಲ್ತಾನ್ ಷರೀಫ್, ಹಾದಿಗೆರೆ ಚೌಡರೆಡ್ಡಿ, ವೀಣಾ ಶ್ರಿರಾಮರೆಡ್ಡಿ, ಮಂಜುಳಮ್ಮ, ವಸತಿ ಯೋಜನೆ ನೋಡಲ್ ಅಧಿಕಾರಿ ವೆಂಕಟೇಶ್, ಪಿಡಿಓಗಳು, ಕಾರ್ಯದರ್ಶಿಗಳು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.