ಭವಿಷ್ಯದ ಉದ್ಯೋಗ ಕ್ರಾಂತಿಯಲ್ಲಿ ಭಾಷೆ ಕಲಿಸುವ ಪ್ಯಾಥೋಲಜಿಸ್ಟ್ ಹಾಗೂ ಆಡಿಯೋಲಜಿಗೆ ಬೇಡಿಕೆ ಹೆಚ್ಚಲಿದೆ ಎಂಬ ನಿರೀಕ್ಷೆ ವ್ಯಾಪಕವಾಗಿದೆ.

ಭವಿಷ್ಯದ ಔದ್ಯೋಗಿಕ ಕ್ಷೇತ್ರದ ಬೆಳವಣಿಗೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ನೋಡಿದಾಗ, ವಾಕ್ ಹಾಗೂ ಶ್ರವಣ ದೋಷ ಉಳ್ಳವರಿಗೆ ಭಾಷೆ ಕಲಿಸುವ ಪ್ಯಾಥೋಲಜಿಸ್ಟ್ ಹಾಗೂ ಆಡಿಯೋಲಜಿಸ್ಟ್ಗಳಿಗೆ ಉತ್ತಮ ಅವಕಾಶ ಗೋಚರಿಸುತ್ತಿವೆ.

ಜಾಗತಿಕ ಬೆಳವಣಿಗೆಯನ್ನು ಆಧರಿಸಿ ನೋಡುವುದಾದರೆ ಮುಂದಿನ ದಶಕಗಳಲ್ಲಿ ಇದು ಪ್ರಸ್ತುತ ಹಾಗೂ ಪ್ರಗತಿದಾಯಕ ಕ್ಷೇತ್ರವಾಗಿ ಗೋಚರಿಸುತ್ತಿದೆ. ಇತ್ತೀಚೆಗೆ ವೃತ್ತಿಪರ ಪ್ರಗತಿ ಕುರಿತು ನಡೆದ ಮಾಹಿತಿ ಸಂಗ್ರಹ ಕಾರ್ಯವೊಂದರಿಂದ ಇದು ದೃಢಪಟ್ಟಿದೆ.

ಯುಎಸ್ ಬ್ಯೂರೋ ಆಫ್ ಲೇಬರ್ ಸ್ಟ್ಯಾಟಿಸ್ಟಿಕ್ಸ್ (ಬಿಎಲ್ಎಸ್) ಸಂಸ್ಥೆಯ `ಆಕ್ಯುಪೇಷನಲ್ ಔಟ್ಲುಕ್ ಹ್ಯಾಂಡ್ಬುಕ್~ ಈ ಬಗ್ಗೆ ಮಾಹಿತಿ ನೀಡಿದೆ.ಮುಂದಿನ ದಶಕಗಳಲ್ಲಿ ಪ್ರಗತಿ ಕಾಣಬಹುದಾದ 700 ಉದ್ಯೋಗಾವಕಾಶ ಕ್ಷೇತ್ರಗಳಲ್ಲಿ, ಪ್ರಮುಖ 30 ರ್ಯಾಂಕ್ನಲ್ಲಿರುವ ಉದ್ಯೋಗಗಳನ್ನು ಆಯ್ಕೆ ಮಾಡಿಕೊಂಡು ಈ ಸಂಶೋಧನೆ ನಡೆಸಲಾಗಿದೆ.

ಇದರಲ್ಲಿ 2000- 2010ರ ನಡುವಿನ ಅವಧಿಯಲ್ಲಿ ಆಡಿಯೋಲಜಿ ಕ್ಷೇತ್ರದಲ್ಲಿಉದ್ಯೋಗಾವಕಾಶದ ಬೆಳವಣಿಗೆ ಮಟ್ಟ ಶೇ.45.

ಆಡಿಯಾಲಜಿಸ್ಟ್ಗಳಿಗೆ ಅಗತ್ಯ ಉದ್ಯೋಗ ಗುಣ:

ಕೇಳುವ ಸಾಮರ್ಥ್ಯ ಕಳೆದುಕೊಂಡವರನ್ನು ಸರಿಯಾಗಿ ಅಳೆಯುವುದು.

ಸೂಕ್ತವಾದ ಶ್ರವಣ ದೋಷ ಸಾಧನದ ಆಯ್ಕೆ.

ಶ್ರಮವಣದೋಷ ಉಳ್ಳ ವ್ಯಕ್ತಿಯ ವಿನ್ಯಾಸ ಹಾಗೂ ಅಳವಡಿಕೆಯ ಆಸಕ್ತಿ ಆಧರಿಸಿ ಪರಿಹಾರ ನೀಡುವುದು.

ಶ್ರವಣ ದೋಷಕ್ಕೆ ಕಾರಣವಾಗಬಲ್ಲ ಅಂಶಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುವುದು.

ಭಾಷೆ ಕಲಿಸುವ ಪ್ಯಾಥೋಲಜಿಸ್ಟ್ಗೆ ಅಗತ್ಯ ಉದ್ಯೋಗ ಗುಣ:

ಸಂವಹನ ಅಸಮಾನತೆಯಿಂದ ಉಂಟಾದ ಆಂತರಿಕ ಹಾಗೂ ಅಭಿವ್ಯಕ್ತಿ ತೊಂದರೆಯನ್ನು ಗುರುತಿಸುವುದು.

ಭಾಷೆ, ವಾಕ್, ಧ್ವನಿ ಹಾಗೂ ಇತರೆ ಅಸಮಾನತೆಯನ್ನು ಸೂಕ್ಷ್ಮವಾಗಿ ಗಮನಿಸಿ ಚಿಕಿತ್ಸೆಯ ಯೋಜನೆ ಅಳವಡಿಸುವುದು.

ತೊಂದರೆ ಇರುವವರ ಅಗತ್ಯ ಹಾಗೂ ಹೊಂದಾಣಿಕೆ ಆಧರಿಸಿ ಚಿಕಿತ್ಸೆಯ ವಿನ್ಯಾಸ ರೂಪಿಸಬೇಕು

ರೋಗಿಯ ವಯೋಮಾನ, ಸಮಸ್ಯೆ ಆಧರಿಸಿ ಚಿಕಿತ್ಸೆಗೆ ಮುಂದಾಗಬೇಕು.

ಯಾವ ಉದ್ಯೋಗಾವಕಾಶ ಲಭ್ಯ?
ಡಯಾಗ್ನಲ್ ಶ್ರವಣ ಸಾಧನ ತಂತ್ರಜ್ಞಾನ ಹಾಗೂ ಶ್ರವಣ ಸ್ಕ್ರೀನಿಂಗ್ ಕ್ಷೇತ್ರದಲ್ಲಿ ಆಗುತ್ತಿರುವ ಜಾಗತಿಕ ಬೆಳವಣಿಗೆಯಿಂದ ಈ ಕ್ಷೇತ್ರದಲ್ಲಿ ಉದ್ಯೋಗಾವಕಾಶವೂ ಅತ್ಯುತ್ತಮ ರೀತಿಯಲ್ಲಿ ಪ್ರಗತಿ ಕಾಣುತ್ತಿದೆ. ಈ ಮೇಲಿನ ಅಂಶಗಳೂ ಸೇರಿದಂತೆ ಆಡಿಯಾಲಜಿ ಕ್ಷೇತ್ರದಲ್ಲಿ ಅಗಾಧ ಬೆಳವಣಿಗೆಗಳು ಉಂಟಾಗುತ್ತಿದ್ದು, ಉತ್ತಮ ಭವಿಷ್ಯಕ್ಕೆ ಬುನಾದಿ ಹಾಕಿಕೊಳ್ಳಲು ಇದು ಸೂಕ್ತ.

ವಾಕ್ ಹಾಗೂ ಶ್ರವಣ ದೋಷಕ್ಕೆ ಒಳಗಾಗುವವರ ಸಂಖ್ಯೆ ದಿನದಿಂದ ದಿನಕ್ಕೆ ಸಮಾಜದಲ್ಲಿ ಹೆಚ್ಚುತ್ತಿದ್ದು, ಇದಕ್ಕೆ ಪರಿಹಾರ ಬಯಸಿ ಬರುವವರೂ ಹೆಚ್ಚುತ್ತಿದ್ದಾರೆ. ಅಲ್ಲದೇ ತಂತ್ರಜ್ಞಾನದ ಪ್ರಗತಿ, ಸಮಸ್ಯೆಯ ನಿವಾರಣೆ ಬಗ್ಗೆ ಜನರಲ್ಲಿ ಮೂಡಿದ ಆಸಕ್ತಿ ಇದಕ್ಕೆ ಕಾರಣ. ಇದರ ಹಿಂದೆ ಸಂಬಂಧಿಸಿದವರ ಜಾಗೃತಿ ಕಾರ್ಯವೂ ಕೆಲಸ ಮಾಡಿದೆ.

ಭವಿಷ್ಯದಲ್ಲಿ ಆಡಿಯಾಲಜಿಸ್ಟ್ಗಳ ಬೇಡಿಕೆ ಹೆಚ್ಚುವುದೇ?
ಈಗಿರುವ ಉದ್ಯೋಗ ಕ್ಷೇತ್ರದಲ್ಲಿ ಲಭ್ಯವಿರುವ ಅವಕಾಶಗಳ ಜತೆ ಆಡಿಯಾಲಜಿ ಕ್ಷೇತ್ರವನ್ನು ಹೋಲಿಸಿ ನೋಡಿದಾಗ ಇಲ್ಲಿರುವ ಅವಕಾಶ ಉಳಿದವುಗಳಿಗಿಂತ ಹೆಚ್ಚಿದೆ. ಉಳಿದ ಕ್ಷೇತ್ರ ಮಧ್ಯಮ ಪ್ರಮಾಣದ ಬೆಳವಣಿಗೆ ಹೊಂದಿದ್ದರೆ ಇದು ವೇಗವಾಗಿ ಬೆಳೆಯುತ್ತಿದೆ.

ಶಬ್ದ ಮಾಲಿನ್ಯ ಎಲ್ಲೆಡೆ ಹೆಚ್ಚುತ್ತಿದ್ದು, ಕಡಿಮೆ ವಯಸ್ಸಿಗೆ, ಅನುವಂಶಿಕವಾಗಿ ಶ್ರವಣ ಸಂಬಂಧಿ ಸಮಸ್ಯೆಗಳು ಹಲವರಲ್ಲಿ ಕಾಡುತ್ತಿವೆ. ಅದೂ ಅಕಾಲದಲ್ಲಿ, ಅತಿ ಕಡಿಮೆ ವಯಸ್ಸಿನಲ್ಲಿ. ಅಲ್ಲದೇ ಇಂದಿನ ಜೀವನ ಶೈಲಿಯೂ ಇದಕ್ಕೆ ಒಂದಿಷ್ಟು ಕೊಡುಗೆ ನೀಡುತ್ತಿದೆ. ಸದಾ ಸದ್ದಿನೊಂದಿಗೆ ಬೆರೆತುಹೋಗುವ ಉದ್ಯೋಗಿಗಳಲ್ಲಿ ಈ ಸಮಸ್ಯೆ ಬಹುಬೇಗ ಗೋಚರಿಸುತ್ತಿದೆ.

ಆರ್ಥಿಕ ಅನುಕೂಲ ಹೇಗಿದೆ?
ಇಂದು ಆಸ್ಪತ್ರೆಗಳು ಹಾಗೂ ಪುನರ್ವಸತಿ ಕೇಂದ್ರಗಳಲ್ಲಿ ಆಡಿಯಾಲಜಿಸ್ಟ್ ಹಾಗೂ ಮಾತು ತರಬೇತುದಾರರಿಗೆ ಸಾಕಷ್ಟು ಬೇಡಿಕೆ ಇದೆ. ಇಲ್ಲಿ ಹೆಚ್ಚಿನ ವೇತನದ ಅವಕಾಶವೂ ಇದೆ. ವೇತನ ಹಾಗೂ ಇತರೆ ಸೌಲಭ್ಯಗಳು ಸರ್ಕಾರಿ ಆಸ್ಪತ್ರೆಗಳಲ್ಲಿ ಉಳಿದ ವೈದ್ಯರು ಪಡೆಯುವಷ್ಟೇ ನೀಡಲಾಗುತ್ತಿದೆ.

ವಾಕ್ ಹಾಗೂ ಶ್ರವಣ ಕೇಂದ್ರವನ್ನು ಸ್ವಂತ ತೆರೆಯುವ ಮೂಲಕವೂ ಆಡಿಯಾಲಜಿಸ್ಟ್ಗಳು ತಮ್ಮ ಭವಿಷ್ಯ ಆರಂಭಿಸಬಹುದು. ಇಲ್ಲಿಯೇ ತಮ್ಮ ವೃತ್ತಿ ಜೀವನದ ಸೇವೆ ಆರಂಭಿಸಬಹುದಾಗಿದೆ. ಇದಲ್ಲದೇ ವಿಶೇಷ ಶಾಲೆ ತೆರೆಯುವ ಮೂಲಕವೂ ಭವಿಷ್ಯ ಕಟ್ಟಿಕೊಳ್ಳಬಹುದು. ಇವೆಲ್ಲವುಗಳ ಜತೆ ಆಡಿಯಲಜಿಸ್ಟ್ ಹಾಗೂ ಮಾತು ತರಬೇತುದಾರರಿಗೆ ವಿದೇಶಗಳಲ್ಲಿ ಅಪಾರ ಬೇಡಿಕೆ ಇದೆ. ಇಂದು ಹೆಚ್ಚಿನವರು ವಿದೇಶಕ್ಕೆ ತೆರಳಿ ತಮ್ಮ ಭವಿಷ್ಯ ರೂಪಿಸಿಕೊಳ್ಳಲು ಯೋಚಿಸುತ್ತಿದ್ದಾರೆ.

ಯಾವ ವಿಧದ ತರಬೇತಿ ಅಗತ್ಯ? ಏನು ಕಲಿತಿರಬೇಕು?
ಈ ಕ್ಷೇತ್ರದಲ್ಲಿ ಆಸಕ್ತಿ ಇರುವ ಯಾವುದೇ ಯುವಕ/ಯುವತಿಯರು ಕಲಿಯಬಹುದು. ಇದು ಪದವಿ ಕಲಿಕೆಯ ಸಮಾನಾಂತರ ತರಬೇತಿ ಆಗಿದೆ. ನಾಲ್ಕು ವರ್ಷ ಅವಧಿಯ ಬಿಎಸ್ಸಿ ಕಲಿಕೆ ಇದಾಗಿದೆ. ಪಿಯುಸಿ ವರೆಗಿನ ಕಲಿಕೆಯನ್ನು ವಿಜ್ಞಾನ ವಿಭಾಗದಲ್ಲಿ ಕಲಿತವರಿಗೆ ಇದು ಸೂಕ್ತ.

ತರಬೇತಿ ನಂತರ ಆಡಿಯಾಲಜಿ ಹಾಗೂ ಸ್ಪೀಚ್ ಪೆಥಾಲಜಿಯಲ್ಲಿ ಪದವಿ ಪಡೆದವರಿಗೆ ದೇಶದ ನಾನಾ ಭಾಗದಲ್ಲಿರುವ ಸಾಕಷ್ಟು ಶಿಕ್ಷಣ ಸಂಸ್ಥೆಗಳಲ್ಲಿ ಸೇರುವ ಅವಕಾಶ ಇದೆ. ಪದವಿ ತರಗತಿ ನಂತರ ಈ ಎರಡೂ ಕ್ಷೇತ್ರದಲ್ಲಿ ಯಾವುದೇ ಒಂದನ್ನು ಆಯ್ಕೆ ಮಾಡಿಕೊಂಡು ವಿಶೇಷ ತಜ್ಞತೆಯ ತರಬೇತಿಯನ್ನು ಸಹ ಪಡೆಯಬಹುದಾಗಿದೆ.

ಅಗತ್ಯ ನೈಪುಣ್ಯತೆ
ಆಡಿಯಾಲಜಿಸ್ಟ್ಗಳು ವೈದ್ಯ ವಿಜ್ಞಾನದ ಅಧ್ಯಯನ ಮಾಡಿರಲೇ ಬೇಕು. ಇದರೊಂದಿಗೆ ಅನಾಟಮಿ, ಮನಶಾಸ್ತ್ರ, ಫಿಜಿಕ್ಸ್, ಶ್ರವಣ ವಿಜ್ಞಾನ, ಕೆಮಿಸ್ಟ್ರಿ, ನ್ಯೂರೋ- ಮಸ್ಕ್ಯುಲರ್ ಸಿಸ್ಟಮ್ ಹಾಗೂ ಇತರೆ ಸಂಬಂಧಿ ವಿಷಯವನ್ನು ಕಲಿಯಬೇಕು.

ಜೊತೆಗೆ ಸಹೃದಯಿ ಆಗಿರಬೇಕು. ಏಕೆಂದರೆ ಸಮಸ್ಯೆ ಇರುವ ವ್ಯಕ್ತಿ ಹಾಗೂ ರೋಗಿಗಳೊಂದಿಗೆ ಇವರು ನೇರವಾಗಿ ಸಂವಹನ ಮಾಡಬೇಕು. ಸಾಮಾನ್ಯ ವ್ಯಕ್ತಿಗಿಂತ ಭಿನ್ನವಾಗಿರುವ ಈ ಸಮಸ್ಯೆ ಉಳ್ಳವರ ಸಮಸ್ಯೆ ಅರ್ಥ ಮಾಡಿಕೊಳ್ಳುವ, ಸಂಜ್ಞೆ ತಿಳಿಯುವ ಸಾಮರ್ಥ್ಯ ಉಳ್ಳವರಾಗಬೇಕು. ರೋಗಿಗಳನ್ನು ತಾಳ್ಮೆಯಿಂದ ಗಮನಿಸಿ ಪರಿಹಾರ ನೀಡುವ ಮತ್ತು ಕುಟುಂಬ ವರ್ಗದವರಿಗೆ ಇವರನ್ನು ನೋಡಿಕೊಳ್ಳುವ ರೀತಿಯನ್ನು ವಿವರಿಸುವ ಜಾಣ್ಮೆ ಉಳ್ಳವರು ಆಗಿರಬೇಕು.

ಆಡಿಯಾಲಜಿಸ್ಟ್ಗಳ ಎದುರಿರುವ ಸವಾಲು
ಈ ಕ್ಷೇತ್ರದಲ್ಲಿ ಮಕ್ಕಳೊಂದಿಗೆ ವ್ಯವಹರಿಸುವುದು ತುಂಬಾ ಕಠಿಣ. ತಮ್ಮಳಗಿರುವ ಎಲ್ಲಾ ವಿಧದ ನೈಪುಣ್ಯತೆಯನ್ನೂ ಇಲ್ಲಿ ವ್ಯಕ್ತಪಡಿಸಬೇಕಾಗಿ ಬರುತ್ತದೆ. ಪದವಿ ಕಲಿಕೆ ಸಂದರ್ಭದಲ್ಲಿ ಕಲಿಸಿದ ವಿಧಾನದ ಜತೆ ಇತರೆ ಕ್ಷೇತ್ರಗಳಿಂದ ಸಂಪಾದಿಸಿದ ಜಾಣ್ಮೆ ಯನ್ನು ಬಳಸಬೇಕಾಗುತ್ತದೆ.

ಅಲ್ಲದೇ ಡಯಾಗ್ನಾಸ್ಟಿಕ್ ಹಾಗೂ ಕೌನ್ಸೆಲಿಂಗ್ ನಡೆಸಬೇಕಾಗುತ್ತದೆ. ಸಕಲ ವಿಧದ ತಪಾಸಣೆಯನ್ನೂ ಅರಿತಿರಬೇಕು. ಆಡಿಯಾಲಜಿಸ್ಟ್ಗಳು ಮಕ್ಕಳ ಶ್ರವಣ ದೋಷಕ್ಕೆ ಕಾರಣ ಏನೆಂಬ ಅಂಶವನ್ನು ನಿಖರವಾಗಿ ಪಡೆದುಕೊಳ್ಳಬೇಕು. ಆನಂತರವೇ ಅಗತ್ಯ ಚಿಕಿತ್ಸೆ ಅಥವಾ ಸಲಹೆಗೆ ಮುಂದಾಗಬೇಕು. ಇವರು ವೈದ್ಯ ಹಾಗೂ ಶಿಕ್ಷಣ ವೃತ್ತಿಪರರ ತಂಡದ ಒಂದು ಭಾಗವಾಗಿರುತ್ತಾರೆ.

ಈ ಉದ್ಯೋಗದ ಗುಣಾತ್ಮಕ ಅಂಶ
ಇದೊಂದು ವಿಶಿಷ್ಟ ಸೇವೆ. ಏಕೆಂದರೆ ಸಮಾಜದ ಎಲ್ಲಾ ವರ್ಗದ, ಹಿನ್ನೆಲೆಯ, ವಯಸ್ಸಿನ ನಾಗರಿಕರೊಂದಿಗೆ ಬೆರೆಯುವ ಅವಕಾಶ ಸಿಗುತ್ತದೆ. ತುಂಬಾ ಭಿನ್ನ ಹಾಗೂ ವಿಶಿಷ್ಟ ವ್ಯಕ್ತಿಗಳೊಂದಿಗೆ ಕಳೆಯುವ ಅವಕಾಶ ಲಭಿಸುತ್ತದೆ. ಅವರೊಂದಿಗೆ ಸಂವಹನ ಸಾಧಿಸುವ ಸಂದರ್ಭ ಒದಗುತ್ತದೆ.

ಅಲ್ಲದೇ ಈ ಉದ್ಯೋಗ ಗೌರವಯುತವಾದುದು. ಪ್ರತಿಯೊಬ್ಬರೂ ಈ ಕಾರ್ಯದಲ್ಲಿ ನಿರತರಾದವರನ್ನು ಗೌರವಿಸುತ್ತಾರೆ. ಅನೇಕ ಸವಾಲುಗಳು ಹಾಗೂ ಸಮ್ಮೋನಗಳು ಇಲ್ಲಿ ಸಿಗುತ್ತವೆ. ಇಲ್ಲಿ ಹಲವು ವಿಧದ ತಜ್ಞತೆಯನ್ನು ಹೊಂದುವ ಸುವರ್ಣಾವಕಾಶ ಸಿಗುತ್ತದೆ.

ಇಲ್ಲಿ ಕಾರ್ಯ ನಿರ್ವಹಿಸುವವರು ತಮ್ಮ ವೃತ್ತಿಯನ್ನು ಮಾತ್ರವಲ್ಲ ವ್ಯಕ್ತಿಯ ಘನತೆಯನ್ನೂ ಹೆಚ್ಚಿಸುವ ಕಾರ್ಯವನ್ನು ಮಾಡುತ್ತಾರೆ. ವ್ಯಕ್ತಿಯ ಸಂವಹನ ನೈಪುಣ್ಯತೆ ವೃದ್ಧಿಸುತ್ತದೆ. ಅನ್ಯರಿಗಿಂತ ಒಂದು ಭಿನ್ನವಾದ ಗೌರವಯುತ ಬದುಕು ಬಾಳುತ್ತಿದ್ದೇನೆ ಎಂಬ ಹೆಮ್ಮೆ ಇರುತ್ತದೆ.

(ಆಡಿಯಾಲಜಿಸ್ಟ್ ಹಾಗೂ ನಿರ್ದೇಶಕ, ರಾಜನ್ಸ್ ವಾಕ್ ಹಾಗೂ ಶ್ರವಣ ಕೇಂದ್ರ ಬೆಂಗಳೂರು . ಹೆಚ್ಚಿನ ಮಾಹಿತಿಗೆ : ..rshc@satyam.net.in ; ಟೋಲ್ ಫ್ರೀ ಸಂಖ್ಯೆ 080- 41510404 ).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.