ಹತ್ತು ಸಾವಿರ ರೂಪಾಯಿಯಲ್ಲಿ ಒಂದು ಅತ್ಯುತ್ತಮ ಕೈಗಡಿಯಾರವನ್ನು ಕೊಂಡುಕೊಳ್ಳಬಹುದು. ಇನ್ನೂ ಅದಕ್ಕಿಂತ ದುಬಾರಿಯೆಂದರೆ 50 ಸಾವಿರ ರೂಪಾಯಿ. ಆದರೆ, ಕೇವಲ ಒಂದು ಕೈಗಡಿಯಾರಕ್ಕೆ 4 ಲಕ್ಷದಿಂದ 40 ಲಕ್ಷ ಎಂದರೆ ಎಂತಹವರು ಕೂಡ ಕೆಲಕ್ಷಣ ಹುಬ್ಬೇರಿಸಬಹುದು.

ಆದರೆ, ಇಷ್ಟೊಂದು ಬೆಲೆಬಾಳುವ ಕೈಗಡಿಯಾರವನ್ನು ಸ್ವಿರ್ಟ್ಜರ್ಲೆಂಡ್ ಮೂಲದ ರ್ಯಾಡೋ ಕಂಪೆನಿ ಇತ್ತೀಚೆಗೆ ಬೆಂಗಳೂರು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಹಾರ್ಡ್ಮೆಟಲ್, ಹೈಟೆಕ್ ಸೆರಾಮಿಕ್, ಲ್ಯಾಂಥಮ್, ಹೈಟೆಕ್ ಡೈಮಂಡ್ ಒಳಗೊಂಡಿರುವ ಗೋಲಾಕಾರ, ಅಂಡಾಕಾರದ ಈ ಸಫೈರ್ ಕ್ರಿಸ್ಟೈಲ್ಸ್ ರ್ಯಾಡೋ ಗಡಿಯಾರದ ಆರಂಭಿಕ ಬೆಲೆ 4 ಲಕ್ಷದಿಂದ ಶುರುವಾಗಿ 40 ಲಕ್ಷ ರೂ ವರೆಗೆ ಇದೆ.

ರ್ಯಾಡೋ ಕಂಪೆನಿ ಇಲ್ಲಿಯವರೆಗೆ 450 ಪ್ರಕಾರದ ಗಡಿಯಾರಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಇದರಲ್ಲಿ ರೀಜನಲ್ ಕಲೆಕ್ಷನ್ಸ್ ಬೆಲೆ 30 ಸಾವಿರ ಇದ್ದರೆ, ಇಂಟರ್ನ್ಯಾಷನಲ್ ಕಲೆಕ್ಷನ್ಸ್ ಬೆಲೆ 60 ಸಾವಿರ ರೂ. ಆದರೆ, ಈಗ ಬಿಡುಗಡೆ ಮಾಡಿರುವ ಚಿನ್ನಲೇಪಿತ ಕೈಗಡಿಯಾರ ಬೆಲೆ ಅನೇಕ ಪಟ್ಟು ಹೆಚ್ಚಿನದು.

`ಶೋಕಿ ಮಾಡುವವರಿಗೆ ಯಾವುದರ ಬೆಲೆ ಎಷ್ಟಿದ್ದರೇನು. ಅದನ್ನವರು ಲೆಕ್ಕಕ್ಕೆ ತೆಗೆದುಕೊಳ್ಳುವುದಿಲ್ಲ. ಗುಣಮಟ್ಟ ಹಾಗೂ ನೋಡಲು ಚೆನ್ನಾಗಿದ್ದರೆ ಅದನ್ನವರು ಖರೀದಿಸಿಯೇ ಖರೀದಿಸುತ್ತಾರೆ. ಇಂತಹ ಶೋಕಿ ಪ್ರಿಯರಿಗೆಂದೇ ಈ ಮಾದರಿಯ ಕೈಗಡಿಯಾರ ಮಾರುಕಟ್ಟೆಗೆ ತಂದಿದ್ದೇವೆ~ ಎಂದು ಹೇಳುತ್ತಾರೆ ರ್ಯಾಡೋ ವ್ಯವಸ್ಥಾಪಕ ನಿರ್ದೇಶಕ ಜಲೀಲ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.