ಶುಕ್ರವಾರ, ಮೇ 29, 2020
27 °C

ವಾರ್ತಾಧಿಕಾರಿ ನಿವೃತ್ತಿ; ಬೀಳ್ಕೊಡುಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಪ್ಪಳ: ಜಿಲ್ಲಾ ವಾರ್ತಾಧಿಕಾರಿ ಬಸವರಾಜ ಆಕಳವಾಡಿ ಅವರು ಸೇವಾ ನಿವೃತ್ತಿ ಹೊಂದಿದ ಹಿನ್ನೆಲೆಯಲ್ಲಿ ಮಂಗಳವಾರ ಜಿಲ್ಲಾ ವಾರ್ತಾ ಮತ್ತು ಪ್ರಚಾರ ಇಲಾಖೆಯಲ್ಲಿ ಅವರನ್ನು ಸನ್ಮಾನಿಸಿ, ಬೀಳ್ಕೊಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಸಂಗಣ್ಣ ಕರಡಿ, ಬಸವರಾಜ ಆಕಳವಾಡಿ ಅವರ ನಿವೃತ್ತ ಜೀವನ ಸುಖ-ಸಂತೋಷದಿಂದ ತುಂಬಿರಲಿ ಎಂದು ಹಾರೈಸಿದರು.ನಂತರ, ಕೊಪ್ಪಳ ಮೀಡಿಯಾ ಕ್ಲಬ್, ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಬಸವರಾಜ ಆಕಳವಾಡಿ ಅವರು, ತಮ್ಮ 34 ವರ್ಷಗಳ ಸೇವಾವಧಿಯ ದಿನಗಳನ್ನು ನೆನಪಿಸಿಕೊಂಡರು.ಪ್ರಭಾರ ವಾರ್ತಾಧಿಕಾರಿ ಬಿ.ವಿ.ತುಕಾರಾಂ, ಪತ್ರಕರ್ತರಾದ ಬಿ.ಎಸ್.ಪಾಟೀಲ, ಸೋಮರಡ್ಡಿ ಅಳವಂಡಿ, ಸಾದಿಕ್ ಅಲಿ, ಬಸವರಾಜ ಆಕಳವಾಡಿ ಪತ್ನಿ ಮಲ್ಲಿಕಾ ಆಕಳವಾಡಿ ವೇದಿಕೆ ಮೇಲೆ ಉಪಸ್ಥಿತರಿದ್ದರು.

ಪತ್ರಕರ್ತರಾದ ಶರಣಪ್ಪ ಬಾಚಲಾಪೂರ, ಸಂತೋಷ ದೇಶಪಾಂಡೆ, ಎನ್.ಎನ್.ಮೂರ್ತಿ ಪ್ಯಾಟಿ, ದೋಡ್ಡೇಶ ಎಲಿಗಾರ, ಶರಣು ಹಂಪಿ, ಗಂಗಾಧರ ಬಂಡಿಹಾಳ, ನಾಭಿರಾಜ, ಸಿದ್ದಪ್ಪ ಹಂಚಿನಾಳ, ಹನುಮಂತ ಹಳ್ಳಿಕೇರಿ ಮತ್ತಿತರರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.