ವಾರ್ತಾ ಅಧಿಕಾರಿಯಾಗಿ ಅಧಿಕಾರ ಸ್ವೀಕಾರ

7

ವಾರ್ತಾ ಅಧಿಕಾರಿಯಾಗಿ ಅಧಿಕಾರ ಸ್ವೀಕಾರ

Published:
Updated:
ವಾರ್ತಾ ಅಧಿಕಾರಿಯಾಗಿ ಅಧಿಕಾರ ಸ್ವೀಕಾರ

ಯಾದಗಿರಿ: ಜಿಲ್ಲೆಯ ವಾರ್ತಾ ಇಲಾಖೆ ಸಹಾಯಕ ನಿರ್ದೇಶಕರ ಹೆಚ್ಚುವರಿ ಪ್ರಭಾರವನ್ನು ಗುಲ್ಬರ್ಗದ ಹಿರಿಯ ಸಹಾಯಕ ನಿರ್ದೇಶಕ ಜಿ. ಚಂದ್ರಕಾಂತ ಬುಧವಾರ ವಹಿಸಿ ಕೊಂಡರು.

ಇಲ್ಲಿಯ ವಾರ್ತಾ ಇಲಾಖೆ ಕಚೇರಿ ಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಧಿಕಾರ ವಹಿಸಿಕೊಂಡ ಚಂದ್ರಕಾಂತ ಅವರನ್ನು ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ವತಿಯಿಂದ ಸನ್ಮಾನಿಸಿ, ಅಭಿನಂದಿಸಲಾಯಿತು.

 

ಸಂಘದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಅನಿಲ ದೇಶಪಾಂಡೆ ಮಾತನಾಡಿ, ಜಿಲ್ಲೆಯಲ್ಲಿ ಬಹುದಿನ ಗಳಿಂದ ವಾರ್ತಾ ಅಧಿಕಾರಿಗಳ ಬೇಡಿಕೆ ಇತ್ತು. ಸರ್ಕಾರ ಹೆಚ್ಚುವರಿ ಪ್ರಭಾರ ಅಧಿಕಾರಿಗಳಾಗಿ  ಜಿ. ಚಂದ್ರಕಾಂತ ಅವರನ್ನು ನಿಯೋಜಿಸಿರುವುದು ಸಂತಸದ ವಿಷಯ ಎಂದರು. ಈ ಸಂದರ್ಭದಲ್ಲಿ ಮಾತನಾಡಿದ ವಾರ್ತಾ ಇಲಾಖೆ ಹಿರಿಯ ಸಹಾ ಯಕ ನಿರ್ದೇಶಕ ಜಿ. ಚಂದ್ರಕಾಂತ, ಇಲಾಖೆಯ, ಸರ್ಕಾರ ಕಾರ್ಯಕ್ರಮಗಳು ಸೇರಿದಂತೆ ಪತ್ರಕರ್ತರಿಗೆ ಅವಶ್ಯಕವಾಗಿರುವ ಎಲ್ಲ ಸೌಲಭ್ಯ ಗಳನ್ನು ಒದಗಿಸ ಲಾಗುವುದು. ಒಳ್ಳೆಯ ಕಾರ್ಯ ಮಾಡಲು ತಮ್ಮ ಸಹಕಾರ ಅಗತ್ಯ ಎಂದರು. ಈ ಸಂದರ್ಭದಲ್ಲಿ ಪತ್ರಕರ್ತರ ಸಂಘದ ಸದಸ್ಯರು, ಇಲಾಖೆಯ ಸಿಬ್ಬಂದಿ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry