ನವದೆಹಲಿ/ಚೆನ್ನೈ (ಐಎಎನ್ಎಸ್): ಅಗ್ಗದ ಬಡ್ಡಿದರದ ಸಾಲ ಜತೆಗೆ ಜನರ ವರಮಾನ ಮತ್ತು ಖರ್ಚು ಮಾಡುವ ಸಾಮರ್ಥ್ಯ ಹೆಚ್ಚಿರುವ ಹಿನ್ನೆಲೆಯಲ್ಲಿ ವಾಹನ ಉದ್ಯಮ ಕ್ಷೇತ್ರ ಪ್ರಗತಿ ಪಥದಲ್ಲಿ ಮುನ್ನಡೆಯುತ್ತಿದೆ. ಕಳೆದ ತಿಂಗಳಿಗೆ ಹೊಲಿಸಿದರೆ ಫೆಬ್ರುವರಿಯಲ್ಲಿ ದೇಶದ ಪ್ರಮುಖ ವಾಹನ ತಯಾರಿಕಾ ಕಂಪೆನಿಗಳಾದ ಮಾರುತಿ ಸುಜುಕಿ, ಟಾಟಾ ಮೋಟಾರ್ಸ್, ಫೋರ್ಡ್ ಇಂಡಿಯಾ ಲಾಭ ದಾಖಲಿಸಿವೆ. ಹುಂಡೈ ಮೋಟಾರ್ ಮಾತ್ರ ಅಲ್ಪ ಕುಸಿತ ಕಂಡಿದೆ. ದ್ವಿಚಕ್ರ ವಾಹನ ಕ್ಷೇತ್ರದಲ್ಲಿ ‘ಟಿವಿಎಸ್’ ಮೋಟಾರ್ ಮುನ್ನಡೆ ದಾಖಲಿಸಿದೆ.

ಮಾರುತಿ ಸುಜುಕಿ: ಶೇ 15ರಷ್ಟು ವೃದ್ಧಿಯೊಂದಿಗೆ 1,11,645 ವಾಹನಗಳನ್ನು ಮಾರಾಟ ಮಾಡುವಲ್ಲಿ ಕಂಪೆನಿ ಯಶಸ್ವಿಯಾಗಿದೆ.ದೇಶೀಯ ಮಾರುಕಟ್ಟೆಯಲ್ಲಿ ವೃದ್ಧಿ ದರ ಶೇ 19ನ್ನು ತಲುಪಿದೆ. ಆದರೆ, ರಫ್ತು ಶೇ 15 ರಷ್ಟು ಕುಸಿದಿದೆ. ‘ಎ-2’ ಸರಣಿಯ ಕಾರುಗಳಾದ ಆಲ್ಟೊ, ವ್ಯಾಗನ್-ಆರ್, ಜೆನ್, ಸ್ವಿಫ್ಟ್, ರಿಟ್ಜ್ ಮತ್ತು ಎ-ಸ್ಟಾರ್ ಬೇಡಿಕೆ ಗಣನೀಯವಾಗಿ ಹೆಚ್ಚಿದೆ.

ಟಾಟಾ ಮೋಟಾರ್ಸ್: ಶೇ 11ರಷ್ಟು ಪ್ರಗತಿಯೊಂದಿಗೆ 77,543 ವಾಹನಗಳನ್ನು ಮಾರಾಟ ಮಾಡಿರುವುದು ಈ ಅವಧಿಯ ಸಾಧನೆಯಾಗಿದೆ. ಪ್ರಯಾಣಿಕ ವಾಹನಗಳ ಕ್ಷೇತ್ರ ಶೇ 18ರಷ್ಟು ವೃದ್ಧಿ ಕಂಡಿದೆ. 4,504 ವಾಹನಗಳನ್ನು ಆಮದು ಮಾಡಲಾಗಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಇದು ಶೇ 39ರಷ್ಟು ಏರಿಕೆ ಕಂಡಿದೆ. ಅಗ್ಗದ ಕಾರು ‘ನ್ಯಾನೊ’ ಮತ್ತೊಮ್ಮೆ ಗರಿಷ್ಠ ಮಟ್ಟದ ಮಾರಾಟ ಕಂಡಿದ್ದು, ಶೇ 101ರಷ್ಟು ಪ್ರಗತಿ ಕಂಡಿದೆ. ‘ಇಂಡಿಗೊ’ ಮಾದರಿ ಶೇ 22 ರಷ್ಟು ಏರಿಕೆ ಕಂಡರೆ, ‘ಇಂಡಿಕಾ’ ಶೇ 12ರಷ್ಟು ಕುಸಿದಿದೆ.

ಹುಂಡೈ: ಚೆನ್ನೈ ಮೂಲದ ಪ್ರಮುಖ ವಾಹನ ತಯಾರಿಕಾ ಕಂಪೆನಿ ಹುಂಡೈ ಮೋಟಾರ್, ಶೇ 4ರಷ್ಟು ಹಿನ್ನೆಡೆ ದಾಖಲಿಸಿದೆ. ಕಳೆದ ತಿಂಗಳು 54,610 ವಾಹನಗಳು ಮಾರಾಟವಾಗಿದ್ದರೆ ಫೆಬ್ರುವರಿಯಲ್ಲಿ 52,007ಕ್ಕೆ ಇಳಿದಿದೆ. ದೇಶಿಯ ಮಾರಾಟ ಶೇ 5ರಷ್ಟು ಚೇತರಿಕೆ ಕಂಡಿದೆ. ಸಣ್ಣ ಕಾರುಗಳಾದ ಸ್ಯಾಂಟ್ರೊ, ಐ-10 ಮತ್ತು ಐ-20 ಬೇಡಿಕೆ ಹೆಚ್ಚಿದೆ. ರಫ್ತು ಶೇ 17ರಷ್ಟು ಇಳಿಕೆಯಾಗಿದೆ.

ಫೋರ್ಡ್ ಇಂಡಿಯಾ: ಸಣ್ಣ ಕಾರು ‘ಫಿಗೊ’ ಮತ್ತೆ ದಾಖಲೆ ನಿರ್ಮಿಸಿದೆ. ಕಂಪೆನಿಯ ಒಟ್ಟು ಮಾರಾಟ ಶೇ 108ರಷ್ಟು ಏರಿಕೆ ದಾಖಲಿಸಿದೆ. ಸೆಡಾನ್ ಆವೃತ್ತಿಯ ಹೊಸ ‘ಫಿಯೆಸ್ಟಾ’ ಶೀಘ್ರದಲ್ಲೇ ಮಾರುಕಟ್ಟೆ ಬರಲಿದೆ ಎಂದು ವ್ಯವಸ್ಥಾಪಕ ನಿರ್ದೇಶಕ ಮೈಕಲ್ ಬೊನ್ಹ್ಯಾಂ ತಿಳಿಸಿದ್ದಾರೆ.

ಟಿವಿಎಸ್: 1,774,12 ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡುವ ಮೂಲಕ ಟಿವಿಎಸ್ ಮೋಟಾರ್ ಶೇ 24ರಷ್ಟು ಮಾರಾಟ ಮುನ್ನಡೆ ಸಾಧಿಸಿದೆ. ಈ ಅವಧಿಯಲ್ಲಿ ಒಟ್ಟು 24,036 ವಾಹನಗಳು ರಫ್ತಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.