ಶುಕ್ರವಾರ, ಜನವರಿ 24, 2020
21 °C
ಕ್ರಿಕೆಟ್‌: ರಾಮ್ದಿನ್‌ ಶತಕ

ವಿಂಡೀಸ್‌ ಉತ್ತಮ ಮೊತ್ತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹ್ಯಾಮಿಲ್ಟನ್‌ (ಎಎಫ್‌ಪಿ): ದೆನೇಶ್‌ ರಾಮ್ದಿನ್‌ (107) ಹಾಗೂ ಶಿವನಾರಾ ಯಣ ಚಂದ್ರಪಾಲ್‌ (ಬ್ಯಾಟಿಂಗ್‌ 94) ಅವರ ನೆರವಿನಿಂದ ವೆಸ್ಟ್‌ಇಂಡೀಸ್‌ ತಂಡದವರು ಗುರುವಾರ ಇಲ್ಲಿ ಆರಂಭ ವಾದ ನ್ಯೂಜಿಲೆಂಡ್‌ ವಿರುದ್ಧದ ಟೆಸ್ಟ್‌ ಕ್ರಿಕೆಟ್‌ ಸರಣಿಯ ಮೂರನೇ ಪಂದ್ಯ ದಲ್ಲಿ ಉತ್ತಮ ಮೊತ್ತ ಗಳಿಸಿದ್ದಾರೆ.ಸೆಡಾನ್‌ ಪಾರ್ಕ್‌ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಪ್ರವಾಸಿ ವಿಂಡೀಸ್‌ ತನ್ನ ಪ್ರಥಮ ಇನಿಂಗ್ಸ್‌ನಲ್ಲಿ ಮೊದಲ ದಿನದಾಟದ ಅಂತ್ಯಕ್ಕೆ 90 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 289 ರನ್‌ ಗಳಿಸಿದೆ.ಟಾಸ್‌ ಗೆದ್ದ ಆತಿಥೇಯ ತಂಡದ ನಾಯಕ ಬ್ರೆಂಡನ್‌ ಮೆಕ್ಲಮ್‌ ಮೊದಲು ಫೀಲ್ಡ್‌ ಮಾಡಲು ಮುಂದಾ ದರು. ಮೊದಲು ಬ್ಯಾಟ್‌ ಮಾಡಿದ ಕೆರಿಬಿಯನ್‌ ಬಳಗ ಉತ್ತಮ ಆರಂಭ ಪಡೆಯಿತು. ಕ್ರೇಗ್‌ ಬ್ರಾಥ್‌ವೇಟ್‌ ಹಾಗೂ ಕೀರನ್‌ ಪೊವೆಲ್‌ ಮೊದಲ ವಿಕೆಟ್‌ಗೆ 41 ರನ್‌ ಗಳಿಸಿದರು. ಆದರೆ ಬಿರುಸಿನ ಆಟಕ್ಕೆ ಮುಂದಾದ ಪೊವೆಲ್‌ ವಿಕೆಟ್‌ ಒಪ್ಪಿಸಿದರು. ಈ ವಿಕೆಟ್‌ ಪತನದ ಬಳಿಕ ವಿಂಡೀಸ್‌ ಆಘಾತಕ್ಕೆ ಒಳಗಾಯಿತು. ಏಕೆಂದರೆ 45 ರನ್‌ಗಳ ಅಂತರದಲ್ಲಿ ಮತ್ತೆ ನಾಲ್ಕು ವಿಕೆಟ್‌ ಪತನಗೊಂಡವು.ಈ ಹಂತದಲ್ಲಿ ಜೊತೆಗೂಡಿದ್ದು ಚಂದ್ರಪಾಲ್‌ ಹಾಗೂ ರಾಮ್ದಿನ್‌. ಇವರಿಬ್ಬರು ಆರನೇ ವಿಕೆಟ್‌ಗೆ ಭರ್ತಿ 200 ರನ್‌ ಸೇರಿಸಿದರು. ಚಂದ್ರಪಾಲ್‌ ಎಚ್ಚರಿಕೆಯ ಆಟಕ್ಕೆ ಮುಂದಾದರು.ಸಂಕ್ಷಿಪ್ತ ಸ್ಕೋರ್‌: ವೆಸ್ಟ್‌ಇಂಡೀಸ್‌: ಮೊದಲ ಇನಿಂಗ್ಸ್‌ 90 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 289 (ಕ್ರೇಗ್‌ ಬ್ರಾಥ್‌ವೇಟ್‌ 45, ಕೀರನ್‌ ಪೊವೆಲ್‌ 26, ಶಿವನಾರಾಯಣ ಚಂದ್ರಪಾಲ್‌ ಬ್ಯಾಟಿಂಗ್‌ 94, ದೆನೇಶ್‌ ರಾಮ್ದಿನ್‌ 107; ಟಿಮ್‌ ಸೌಥಿ 56ಕ್ಕೆ2, ಕೋರಿ ಜೆ.ಆ್ಯಂಡರ್ಸನ್‌ 25ಕ್ಕೆ3).

ಪ್ರತಿಕ್ರಿಯಿಸಿ (+)