ಶುಕ್ರವಾರ, ಮೇ 20, 2022
20 °C

ವಿಂಡೀಸ್ ಎಗೆ ಮುನ್ನಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಿಂಗ್ಸ್‌ಟೌನ್: ವೀರಸ್ವಾಮಿ ಪೆರುಮಾಳ್ ಅವರ ಪರಿಣಾಮಕಾರಿ ಬೌಲಿಂಗ್ ಪ್ರದರ್ಶನದ ನೆರವಿನಿಂದ ವೆಸ್ಟ್‌ಇಂಡೀಸ್ `ಎ~ ತಂಡದವರು ಇಲ್ಲಿ ನಡೆಯುತ್ತಿರುವ ಟೆಸ್ಟ್ ಕ್ರಿಕೆಟ್ ಸರಣಿಯ ಎರಡನೇ ಪಂದ್ಯದಲ್ಲಿ ಭಾರತ `ಎ~ ತಂಡದ ವಿರುದ್ಧ  ಇನಿಂಗ್ಸ್ ಮುನ್ನಡೆ ಸಾಧಿಸಿದ್ದಾರೆ.ನಾಲ್ಕು ದಿನಗಳ ಈ ಪಂದ್ಯದ ಎರಡನೇ ದಿನ ಪ್ರವಾಸಿ ಭಾರತ ತನ್ನ ಮೊದಲ ಇನಿಂಗ್ಸ್‌ನಲ್ಲಿ 79.2 ಓವರ್‌ಗಳಲ್ಲಿ 202 ರನ್‌ಗಳಿಗೆ ಎಲ್ಲಾ ವಿಕೆಟ್ ಕಳೆದುಕೊಂಡಿತು. ಈ ಮೂಲಕ 15 ರನ್‌ಗಳ ಹಿನ್ನಡೆ ಕಂಡಿತು. ಆದರೆ ಚೇತೇಶ್ವರ ಪೂಜಾರ (67; 170 ಎಸೆತ) ತಾಳ್ಮೆಯ ಇನಿಂಗ್ಸ್ ಕಟ್ಟಿದರು. ಆತಿಥೇಯ ವಿಂಡೀಸ್ ತನ್ನ ಮೊದಲ ಇನಿಂಗ್ಸ್‌ನಲ್ಲಿ 90 ಓವರ್‌ಗಳಲ್ಲಿ 217 ರನ್ ಗಳಿಸಿತ್ತು.  ಸಂಕ್ಷಿಪ್ತ ಸ್ಕೋರ್: ವೆಸ್ಟ್ ಇಂಡೀಸ್ `ಎ~ ಮೊದಲ ಇನಿಂಗ್ಸ್: 90 ಓವರ್‌ಗಳಲ್ಲಿ 217 ಹಾಗೂ 4 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 6; ಭಾರತ `ಎ~ ಮೊದಲ ಇನಿಂಗ್ಸ್: 79.2 ಓವರ್‌ಗಳಲ್ಲಿ 202 (ಚೇತೇಶ್ವರ ಪೂಜಾರ 67, ಮನೋಜ್ ತಿವಾರಿ 23, ರೋಹಿತ್ ಶರ್ಮ 30; ವೀರಸ್ವಾಮಿ ಪೆರುಮಾಳ್ 58ಕ್ಕೆ5, ಡೆಲೋರ್ನ್ ಜಾನ್ಸನ್ 28ಕ್ಕೆ2).

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.