ನವದಹೆಲಿ: ಎದುರಾಳಿ ತಂಡಗಳನ್ನು ಸದೆಬಡಿಯುತ್ತಿರುವ ದಕ್ಷಿಣ ಆಫ್ರಿಕಾ, ಭಾನುವಾರ ಇಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಸೂಪರ್ ಎಂಟರ ಹಂತದ ತನ್ನ ಕೊನೆಯ ಪಂದ್ಯವನ್ನು ಉತ್ಸಾಹಿ ಜಿಂಬಾಬ್ವೆ ವಿರುದ್ಧ ಆಡಲಿದ್ದು, ಅಜೇಯ ಓಟವನ್ನು ಮುಂದುವರಿಸುವ ತವಕದಲ್ಲಿದೆ.

ದಕ್ಷಿಣ ಆಫ್ರಿಕಾ ಈಗಾಗಲೇ ಸೆಮಿಫೈನಲ್ ತಲುಪಿರುವ ಮತ್ತು ಜಿಂಬಾಬ್ವೆ ಈ ಪಂದ್ಯಕ್ಕೆ ಮೊದಲೇ ಹೊರಬಿದ್ದಿರುವ ಕಾರಣ ಈ ಹಣಾಹಣಿಯು ಅಂಥ ಮಹತ್ವ ಪಡೆದಿಲ್ಲ.

ಹಾಲಿ ವಿಶ್ವಕಪ್ನಲ್ಲಿ ಅಜೇಯವಾಗಿರುವ ದಕ್ಷಿಣ ಆಫ್ರಿಕಾ ತಂಡಕ್ಕೆ ಹೋರಾಟ ನೀಡಬೇಕಾದರೆ ಜಿಂಬಾಬ್ವೆ ತಂಡವು ಸುಧಾರಿತ ಬೌಲಿಂಗ್ ಪ್ರದರ್ಶನ ನೀಡಬೇಕಾಗುತ್ತದೆ. ಈ ಹಿಂದಿನ ಎರಡು ಪಂದ್ಯಗಳಲ್ಲಿ ವೆಸ್ಟ್ ಇಂಡೀಸ್ ಮತ್ತು ಭಾರತ ತಂಡದ ಎದುರು ಅದು 250ಕ್ಕಿಂತ ಹೆಚ್ಚು ರನ್ಗಳನ್ನು ಒತ್ತಡಕ್ಕೆ ಸಿಲುಕಿತ್ತು.

ಸೂಪರ್ ಎಂಟರ ಹಂತದ ಪಂದ್ಯಗಳಲ್ಲಿ ಜಿಂಬಾಬ್ವೆ ತಂಡವು ಬೌಲಿಂಗ್ನಲ್ಲಿ ಶಿಸ್ತು ಕಾಪಾಡಿರರಲಿಲ್ಲ. ಲೀಗ್ ಹಂತದಲ್ಲಿ ಅಜೇಯವಾಗಿದ್ದ ಈ ತಂಡ, ತನ್ನೆಲ್ಲಾ ಪಂದ್ಯಗಳನ್ನು ನಿಧಾನಗತಿಯ ಪಿಚ್ಗಳಿರುವ ಶ್ರೀಲಂಕಾದಲ್ಲಿ ಆಡಿತ್ತು. ಆದರೆ ಸೂಪರ್ ಎಂಟರ ಹಂತದಲ್ಲಿ ಭಾರತದ ಬ್ಯಾಟಿಂಗ್ ಸ್ನೇಹಿ ಪಿಚ್ಗಳಲ್ಲಿ ಆಡುವಾಗ ತಂಡ ಪರದಾಡಿತು.

ದಕ್ಷಿಣ ಆಫ್ರಿಕಾ ಕಡೆ ಮಾರ್ಕೊ ಯಾನ್ಸೆನ್ ಮತ್ತು ಲುಂಗಿ ಎನ್ಗಿಡಿ (ತಲಾ 11 ವಿಕೆಟ್) ಯಶಸ್ವಿ ಬೌಲರ್ಗಳೆನಿಸಿದ್ದಾರೆ. ಅವರಿಗೆ ಅನುಭವಿ ಕಗಿಸೊ ರಬಾಡ, ಸ್ಪಿನ್ನರ್ ಕೇಶವ ಮಹಾರಾಜ್ ಬೆಂಬಲವೂ ಇದೆ. ಅಗ್ರ ಮೂವರು ಬ್ಯಾಟರ್ಗಳಾದ ಏಡನ್ ಮರ್ಕರಂ, ಕ್ವಿಂಟನ್ ಡಿಕಾಕ್, ರಿಯಾನ್ ರಿಕೆಲ್ಟನ್ ಉತ್ತಮ ಲಯದಲ್ಲಿದ್ದಾರೆ. ಡೇವಿಡ್ ಮಿಲ್ಲರ್, ಟ್ರಿಸ್ಟನ್ ಸ್ಟಬ್ಸ್ ಮತ್ತು ಡೆವಾಲ್ಡ್ ಬ್ರೆವಿಸ್ ಇರುವ ಮಧ್ಯಮ ಕ್ರಮಾಂಕವೂ ಬಲಿಷ್ಠವಾಗಿದೆ. ಆದರೆ ಈ ತಂಡವು ಆಡಿರುವ ಐದು ಪಂದ್ಯಗಳಲ್ಲಿ ಒಮ್ಮೆ ಮಾತ್ರ 200+ ರನ್ (ನಮೀಬಿಯಾ ವಿರುದ್ಧ 209) ಗಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.