ಪ್ರಾಗ್ : ವಿಶ್ವ ಚಾಂಪಿಯನ್ ಡಿ.ಗುಕೇಶ್ ಅವರು ಪ್ರಾಗ್ ಅಂತರರಾಷ್ಟ್ರೀಯ ಚೆಸ್ ಉತ್ಸವದ ಮೂರನೇ ಸುತ್ತಿನಲ್ಲಿ ಹಾಲೆಂಡ್ನ ಆಟಗಾರ ಜೋರ್ಡನ್ ವಾನ್ ಫೋರಿಸ್ಟ್ ಕೈಲಿ ಆಘಾತ ಅನುಭವಿಸಿದರು. ಭಾರತದ ಇನ್ನೊಬ್ಬ ಆಟಗಾರ ಅರವಿಂದ ಚಿದಂಬರಮ್ ಅವರು ಇರಾನ್ನ ಪರ್ಹಾಮ್ ಮಘಸೂಡ್ಲು ಜೊತೆ ಡ್ರಾ ಮಾಡಿಕೊಂಡರು.

ಶುಕ್ರವಾರ ನಡೆದ ಪಂದ್ಯದಲ್ಲಿ ಬಿಳಿ ಕಾಯಿಗಳಲ್ಲಿ ಆಡಿದ ಡಚ್ ಆಟಗಾರ 48 ನಡೆಗಳಲ್ಲಿ ಜಯಗಳಿಸಿದರು. ಈ ಟೂರ್ನಿಯ ಮೊದಲ ಎರಡು ಸುತ್ತುಗಳಲ್ಲಿ ಗುಕೇಶ್ ಎದುರಾಳಿಗಳ ವಿರುದ್ಧ ಡ್ರಾ ಮಾಡಿಕೊಂಡಿದ್ದರು.

ಫಾರೀಸ್ಟ್, ಉಜ್ಬೇಕಿಸ್ತಾನದ ನಾದಿರ್ಬೆಕ್ ಯಾಕುಬೊಯೆವ್ ಮತ್ತು ನಾದಿರ್ಬೆಕ್ ಅಬ್ದುಸತ್ತಾರೋವ್, ಸ್ಥಳೀಯ ಫೇವರಿಟ್ ಡೇವಿಡ್ ನವಾರ ಅವರು ತಲಾ ಎರಡು ಅಂಕಗಳನ್ನು ಗಳಿಸಿದ್ದು ಅಗ್ರಸ್ಥಾನ ಹಂಚಿಕೊಂಡಿದ್ದಾರೆ.

ಇನ್ನೂ ಆರು ಸುತ್ತಿನ ಪಂದ್ಯಗಳು ಉಳಿದಿವೆ. ಟೂರ್ನಿಯಲ್ಲಿ ಹತ್ತು ಆಟಗಾರರು ಭಾಗವಹಿಸುತ್ತಿದ್ದು, ಒಂಬತ್ತು ಸುತ್ತುಗಳನ್ನು ಹೊಂದಿದೆ.

ಗುಕೇಶ್, ಅಗ್ರ ಶ್ರೇಯಾಂಕದ ವಿನ್ಸೆಂಟ್ ಕೀಮರ್, ಅಮೆರಿಕದ ಹ್ಯಾನ್ಸ್ ನೀಮನ್, ಇರಾನ್ ಮಘಸೂಡ್ಲು – ಈ ಎಲ್ಲ ಆಟಗಾರರು ತಲಾ ಒಂದು ಅಂಕ ಗಳಿಸಿದ್ದಾರೆ. ಅರವಿಂದ ಚಿದಂಬರಮ್ 1.5 ಅಂಕ ಸಂಗ್ರಹಿಸಿದ್ದಾರೆ.

ಚಾಲೆಂಜರ್ಸ್ ವಿಭಾಗದಲ್ಲಿ ಕಣದಲ್ಲಿದ್ದ ಭಾರತದ ಇಬ್ಬರೂ ಸೋಲನುಭವಿಸಿದರು. ಅನುಭವಿ ಆಟಗಾರ ಸೂರ್ಯಶೇಖರ ಗಂಗೂಲಿ (0.5) ಅವರು ಝೆಕ್ ರಿಪಬ್ಲಿಕ್ನ ಜೇಕಿಮ್ ನೆಮೆಕ್ (2) ಜೊತೆ ಡ್ರಾ ಮಾಡಿಕೊಂಡರೆ, ವಿಶ್ವಕಪ್ ವಿಜೇತೆ ದಿವ್ಯಾ ದೇಶಮುಖ್ (1) ಅವರು ಚೀನಾದ ಜಿನೆರ್ ಝು (1) ಅವರಿಗೆ ಮಣಿದರು. ಆತಿಥೇಯ ದೇಶದ (ಝೆಕ್ ರಿಪಬ್ಲಿಕ್) ಫಿನೆಕ್ ವಾಂಗ್ಲಾವ್ ಎರಡು ಅಂಕ ಸಂಗ್ರಹಿಸಿ ಈ ವಿಭಾಗದಲ್ಲಿ ಮುನ್ನಡೆಯಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.