ದಿನ ಭವಿಷ್ಯ: ಈ ರಾಶಿಯ ಔಷಧಿ ವ್ಯಾಪಾರಿಗಳಿಗೆ ಲಾಭ ಹೆಚ್ಚುವುದು..
Published 27 ಫೆಬ್ರುವರಿ 2026, 23:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ರಕ್ತ ಸಂಬಂಧಿ ಕಾಯಿಲೆ ಹೊಂದಿದವರು ರಕ್ತ ಪರೀಕ್ಷೆ ಮಾಡಿಸುವುದು ಒಳ್ಳೆಯದು. ಸತ್ಯ ಮಾರ್ಗದಿಂದ ಕಾರ್ಯ ಪ್ರವೃತ್ತರಾದಲ್ಲಿ ಅಭಿವೃದ್ಧಿ ಅನುಭವಕ್ಕೆ ಬರಲಿದೆ.
27 ಫೆಬ್ರುವರಿ 2026, 23:30 IST
ವೃಷಭ
ವ್ಯವಹಾರದಲ್ಲಿ ಅನಗತ್ಯ ವಿಷಯಗಳತ್ತ ಗಮನಹರಿಸದೆ ಇರುವಂಥ ತೀರ್ಮಾನ ತೆಗೆದುಕೊಳ್ಳುವುದು ಉತ್ತಮ. ದಾಂಪತ್ಯದಲ್ಲಿ ಹೊಂದಾಣಿಕೆಯ ಮನೋಭಾವದಿಂದ ಸಾಮರಸ್ಯ ವೃದ್ಧಿ.
27 ಫೆಬ್ರುವರಿ 2026, 23:30 IST
ಮಿಥುನ
ಆಲೋಚಿಸಿದಂತೆ ಕೆಲಸ ನಡೆಯದೇ ಸೋಲು, ಹಿನ್ನಡೆ ಎಂಬಂತೆ ಮನಸ್ಸಿಗೆ ಬರಬಹುದು. ದೇವರ ಆಶೀರ್ವಾದ ನಿಮ್ಮ ಮೇಲಿರುವುದರಿಂದ ಸರಿಯಾದ ಸಮಯಕ್ಕೆ ಕೆಲಸಗಳು ಪೂರ್ಣಗೊಳ್ಳುತ್ತವೆ.
27 ಫೆಬ್ರುವರಿ 2026, 23:30 IST
ಕರ್ಕಾಟಕ
ವೃತ್ತಿ ಬದುಕಿನಲ್ಲಿ ಅಭಿಪ್ರಾಯಗಳಿಗೆ ವಿರೋಧ ಬರಲಿದೆ. ವಿಶ್ವಾಸದಲ್ಲಿ ಯಾವುದೇ ರೀತಿಯ ಸಲಹೆ ಸೂಚನೆ ನೀಡಬೇಡಿ. ಬರಬೇಕಾಗಿದ್ದ ಹಣ ವಸೂಲು ಮಾಡಿಕೊಳ್ಳಲು ನಿಷ್ಠುರವಾಗಿ ವರ್ತಿಸಬೇಕಾಗುವುದು.
27 ಫೆಬ್ರುವರಿ 2026, 23:30 IST
ಸಿಂಹ
ಪ್ರಕೃತಿ ವಿಕೋಪದ ಕಾರಣದಿಂದ ಮನೆಯಲ್ಲಿ ಸಣ್ಣ-ಪುಟ್ಟ ರಿಪೇರಿ ಕೆಲಸ ಮಾಡಿಸಬೇಕಾದ ಅನಿವಾರ್ಯವಾಗುವುದು. ದೈವಾನುಗ್ರಹದಿಂದ ಸಾಹಸ ಕಾರ್ಯಗಳು ಕೈಗೂಡಲಿವೆ.
27 ಫೆಬ್ರುವರಿ 2026, 23:30 IST
ಕನ್ಯಾ
ನಂಬಿರುವ ವ್ಯಕ್ತಿಗಳ ಬಗ್ಗೆ ನಿಲುವುಗಳನ್ನು ಬದಲಾಯಿಸಿಕೊಳ್ಳಬೇಕೆನಿಸಿದರೂ ಹಾಗೆ ಮಾಡದಿರಿ. ಜಾಣತನದಿಂದ ನಿಮ್ಮ ಕೆಲಸವನ್ನು ಪೂರ್ಣಗೊಳಿಸುವಲ್ಲಿ ಯಶಸ್ವಿಯಾಗುವಿರಿ.
27 ಫೆಬ್ರುವರಿ 2026, 23:30 IST
ತುಲಾ
ಧಾರ್ಮಿಕ ನಾಯಕರಿಗೆ ಮರೆಯಲಾಗದ ಘಟನೆಯೊಂದು ಸುತ್ತಮುತ್ತಲಿನಲ್ಲಿ ನಡೆಯುವುದು. ಅವಲಂಬಿಸಿರುವರನ್ನು ನೋಡಿಕೊಳ್ಳುವ ಜವಾಬ್ದಾರಿ ಹೆಚ್ಚಲಿದೆ. ಸಂತಾನಾಪೇಕ್ಷಿಗಳು ಫಲವನ್ನು ಪಡೆಯುವಿರಿ.
27 ಫೆಬ್ರುವರಿ 2026, 23:30 IST
ವೃಶ್ಚಿಕ
ಕಟ್ಟಡ ಕಾರ್ಮಿಕರಿಗೆ ಮತ್ತು ದಿನಕೂಲಿಗಾರರಿಗೆ ಅಭಿವೃದ್ಧಿಯ ಬದುಕಿಗೆ ಬೇಕಾದ ಅವಕಾಶಗಳು ಸಿಗಲಿವೆ. ಸಾಧು ಸಂತರ ಭೇಟಿಯಿಂದ ಮನಸ್ಸಿಗೆ ಸಮಾಧಾನವನ್ನು ಕಂಡುಕೊಳ್ಳಬಹುದು.
27 ಫೆಬ್ರುವರಿ 2026, 23:30 IST
ಧನು
ನಿಮ್ಮಿಂದ ಉತ್ಪಾದಿತ ವಸ್ತುಗಳಿಗೆ ಮಾರುಕಟ್ಟೆಯಲ್ಲಿ ಭದ್ರ ನೆಲೆ ಸಿಕ್ಕಿ ಮನಸ್ಸಿಗೆ ನೆಮ್ಮದಿಯಾಗಲಿದೆ. ಪ್ರತಿ ಹೆಜ್ಜೆಯು ಆತ್ಮಸಾಕ್ಷಿಗೆ ಒಪ್ಪುವಂತೆ ಇರಲಿ. ಔಷಧಿ ವ್ಯಾಪಾರಿಗಳಿಗೆ ಲಾಭ ಹೆಚ್ಚುವುದು.
27 ಫೆಬ್ರುವರಿ 2026, 23:30 IST
ಮಕರ
ವ್ಯವಹಾರದಲ್ಲಿ ಮಾತಿಗಿಂತ ಕೃತಿ ಮುಖ್ಯ ಎನ್ನುವ ರೀತಿಯಲ್ಲಿ ಸಾಮರ್ಥ್ಯ ತೋರಿಸುವ ಬಗ್ಗೆ ನಿಮ್ಮ ಶ್ರಮವಿರಲಿ. ಸಹಾಯ ಹಸ್ತಗಳ ಮುಖಾಂತರವಾಗಿ ಅಪೂರ್ಣ ಕೆಲಸ ಕಾರ್ಯಗಳು ಪೂರ್ಣಗೊಳ್ಳಲಿವೆ.
27 ಫೆಬ್ರುವರಿ 2026, 23:30 IST
ಕುಂಭ
ವರಮಾನವನ್ನು ಪಡೆಯುವ ಮುಖ್ಯ ಆಕಾಂಕ್ಷೆಯಿಂದ ಸುಲಭದ ಮತ್ತು ಹತ್ತಿರದ ಕೆಲಸ ತಿರಸ್ಕರಿಸಬೇಡಿ. ವ್ಯಾಪಾರ ಮಾರುಕಟ್ಟೆ ವಿಸ್ತರಿಸಲು ಬೇಕಾದ ತಯಾರಿ ಮಾಡಿಕೊಳ್ಳಿರಿ. ರಿಪೇರಿಗಾಗಿ ಖರ್ಚು ಸಂಭವಿಸಲಿದೆ.
27 ಫೆಬ್ರುವರಿ 2026, 23:30 IST
ಮೀನ
ವ್ಯವಹಾರಕ್ಕೆ ಸಂಬಂಧಿಸಿದ ಹಾಗೆ ಮಧ್ಯವರ್ತಿಗಳ ಮಾತನ್ನು ನಿರ್ಲಕ್ಷಿ ಸುವುದು ಸಮಂಜಸವೆಂಬುವುದು ಅನಿಸಿಕೆ. ಸ್ವಂತ ಸಮಸ್ಯೆಗಳನ್ನು ನೀವೇ ನಿವಾರಿಸಿಕೊಳ್ಳುವಂತೆ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಿ.
27 ಫೆಬ್ರುವರಿ 2026, 23:30 IST