ಅಮುದನ್ ಮತ್ತೊಂದು ವಿಕಿರಣ ಕಥನದ ಜೊತೆಗೆ ಬೆಂಗಳೂರಿಗೆ ಬಂದಿದ್ದಾರೆ. ಕಳೆದ ಹದಿನಾರು ವರ್ಷಗಳಲ್ಲಿ ಹದಿನೆಂಟು ಸಾಕ್ಷ್ಯಚಿತ್ರಗಳನ್ನು ನಿರ್ಮಿಸಿರುವ ಅಮುದನ್ ಅವರ ಮೂರನೇ ವಿಕಿರಣ ಕಥನ ಇದು. ಮಾರ್ಚ್ 17ರ ಶನಿವಾರ ಸಂಜೆ ಮಿಶನ್ ರಸ್ತೆಯ ಎರಡನೇ ಕ್ರಾಸ್ನ ಸಿಎಸ್ಐ ಆವರಣದಲ್ಲಿರುವ ಎಸ್ಸಿಎಂ ಹೌಸ್ನಲ್ಲಿ ಪೆಡಸ್ಟ್ರಿಯನ್ ಪಿಕ್ಚರ್ `ರೇಡಿಯೇಷನ್ ಸ್ಟೋರೀಸ್-3~ರ ಪ್ರದರ್ಶನವನ್ನು ಏರ್ಪಡಿಸಿದೆ. ಚಿತ್ರ ನಿರ್ಮಾತೃ ಆರ್.ಪಿ. ಅಮುದನ್ ಕೂಡ ಪ್ರದರ್ಶನಾನಂತರದ ಚರ್ಚೆಯಲ್ಲಿ ಭಾಗವಹಿಸುತ್ತಾರೆ.

ಕನ್ಯಾಕುಮಾರಿ ಜಿಲ್ಲೆಯ ತೀರ ಪ್ರದೇಶದಲ್ಲಿ ಮಾನವ ನಿರ್ಮಿತ `ವಿಕಿರಣಾವಸ್ಥೆ~ಯ ಮೇಲೆ ಬೆಳಕು ಚೆಲ್ಲುವ `ರೇಡಿಯೇಷನ್ ಸ್ಟೋರೀಸ್-1~ ಸಮಸ್ಯೆಯ ಹಲವು ಆಯಾಮಗಳನ್ನು ಬಿಚ್ಚಿಡುತ್ತದೆ. ವಿಕಿರಣದ ಭೀಕರ ಆಯಾಮಗಳನ್ನು ಸಾಕ್ಷೀಕರಿಸುತ್ತಾ ಸಾಗುವ ಈ ಚಿತ್ರ ವಿಕಿರಣಕ್ಕೆ ಕಾರಣವಾಗುತ್ತಿರುವ ಉದ್ದಿಮೆಯೇ ಸ್ಥಳೀಯ ಬದುಕಿನ ಆಧಾರವೂ ಆಗಿಬಿಟ್ಟಿರುವ ವಿಚಿತ್ರ ವ್ಯಂಗ್ಯವನ್ನು ಬಹಳ ಪರಿಣಾಮಕಾರಿಯಾಗಿ ಕಟ್ಟಿಕೊಡುತ್ತದೆ.

ವಿಕಿರಣಶೀಲ ಮರಳನ್ನು ಹೊತ್ತೊಯ್ಯುವ ಲಾರಿಗಳು ಇಡೀ ಪ್ರದೇಶದ ರಸ್ತೆ, ನದಿ, ಗಿಡ, ಮರಗಳು, ಭೂಮಿ ಅಷ್ಟೇಕೆ ಈ ಸಾಕ್ಷ್ಯಚಿತ್ರವನ್ನು ಚಿತ್ರೀಕರಿಸುತ್ತಿರುವ ಕ್ಯಾಮೆರಾವನ್ನೂ ವಿಕಿರಣಶೀಲಗೊಳಿಸಿರಬಹುದು ಎನ್ನುವ ಅಮುದನ್ ವಿವರಣೆ `ಈ ಚಿತ್ರವೂ ವಿಕಿರಣಶೀಲವಾಗಿರಬಹುದು~ ಎಂದು ಎಚ್ಚರಿಸುವ ಮೂಲಕ ಸಮಸ್ಯೆಯ ತೀವ್ರತೆಯನ್ನು ಹೃದಯಕ್ಕೆ ತಟ್ಟುವಂತೆ ಮಾಡುತ್ತದೆ.

ಕನ್ಯಾಕುಮಾರಿ ಜಿಲ್ಲೆಯ `ನೈಸರ್ಗಿಕ ವಿಕಿರಣಶೀಲತೆ~ಯ ಕಥೆಯ ನಂತರ ಅಮುದನ್ ಕೈಗೆತ್ತಿಕೊಂಡದ್ದು ಕಲ್ಪಾಕಂ ಅಣು ವಿದ್ಯುತ್ ಸ್ಥಾವರದ ಸುತ್ತಮುತ್ತಲಿನ ಪ್ರದೇಶದ ಸಮಸ್ಯೆಗಳನ್ನು. `ರೇಡಿಯೇಷನ್ ಸ್ಟೋರೀಸ್-2~ರಲ್ಲಿ ದಾಖಲಾಗಿರುವ ಈ ಕಥನದಲ್ಲಿ ಡಾ.ಪುಗಳೇಂದಿಯವರ ಹೋರಾಟ ವಿವಿಧ ಆಯಾಮಗಳೂ ಇವೆ. ಕಳೆದ ಇಪ್ಪತ್ತು ವರ್ಷಗಳಿಂದ `ಅಣು ವಿದ್ಯುತ್ ಮೂಲಭೂತವಾದಿ~ಗಳಿಗೆ ಸವಾಲು ಹಾಕುತ್ತಿರುವ ಪುಗಳೇಂದಿ ಅವರು ಮೂಲಕ ಈ ಸಾಕ್ಷ್ಯಚಿತ್ರದಲ್ಲಿ ಅನಾವರಣಗೊಳ್ಳುತ್ತಾ ಹೋಗುವ ಮಾಹಿತಿಗಳು ಅನೇಕ. ಎಲ್ಲದಕ್ಕಿಂತ ಮುಖ್ಯವಾದುದು ಕಲ್ಪಾಕಂನ ಸುತ್ತಮುತ್ತಲಿನ ಮೀನುಗಾರರು ಎದುರಿಸುತ್ತಿರುವ ಸಮಸ್ಯೆಗಳು. ಅಣು ವಿದ್ಯುತ್ನ `ವೈಜ್ಞಾನಿಕ ಪ್ರತಿಪಾದನೆ~ ಮರೆಮಾಡಿರುವ ಸಾಮಾನ್ಯ ಜನತೆಯ ಸಂಕಷ್ಟವನ್ನು ಇದು ವಿವರಿಸುತ್ತದೆ.

ಅವರ ಇತ್ತೀಚಿನ ವಿಕಿರಣ ಕಥನವಾದ `ರೇಡಿಯೇಷನ್ ಸ್ಟೋರೀಸ್-3~ ಕೂಡಂಕುಳಂನ ಕಥೆಯನ್ನು ಹೇಳುತ್ತದೆ. ಸರ್ಕಾರ ಆರೋಪಿಸುತ್ತಿರುವ ವಿದೇಶೀ ಕೈವಾಡದಿಂದ ಆರಂಭಿಸಿ ಇದ್ದಕ್ಕಿದ್ದಂತೆ ಹೋರಾಟ ತಲೆಯೆತ್ತಿದೆ ಎಂಬ ಹೇಳಿಕೆಗಳ ತನಕದ ಎಲ್ಲ ಆರೋಪಗಳ ಸತ್ಯಾಸತ್ಯತೆಯನ್ನು ಇದು ಪರಿಶೀಲಿಸುತ್ತಿದೆ. ಅಮುದನ್ ಇಲ್ಲಿಯ ತನಕ ನಿರ್ಮಿಸಿದ ಹದಿನೆಂಟು ಸಾಕ್ಷ್ಯಚಿತ್ರಗಳಲ್ಲಿ ವಿಕಿರಣದ ಕಥನವನ್ನು ಮುಂದಿಡುವ ಮೂರೂ ಚಿತ್ರಗಳು ಭಿನ್ನ. ಉಳಿದ ಹದಿನೈದು ಚಿತ್ರಗಳೂ ಹೊರಜಗತ್ತಿಗೆ ಅರಿವಿಲ್ಲದ ವಿಷಯವೊಂದನ್ನು ಅನಾವರಣಗೊಳಿಸುತ್ತಿದ್ದರೆ ಇದು ಎಲ್ಲರಿಗೂ ತಿಳಿದಿರುವ ಸತ್ಯಗಳ ಮತ್ತೊಂದು ಮುಖವನ್ನು ಅನಾವರಣಗೊಳಿಸುತ್ತಿದೆ.

ಬೆಂಗಳೂರಿನಲ್ಲಿ ನಡೆಯುತ್ತಿರುವ `ರೇಡಿಯೇಷನ್ ಸ್ಟೋರೀಸ್-3~ರ ಪ್ರದರ್ಶನಕ್ಕೆ ಮುಕ್ತ ಪ್ರವೇಶಾವಕಾಶವಿದೆ. ಹೆಚ್ಚಿನ ವಿವರಗಳಿಗೆ ಪೆಡೆಸ್ಟ್ರಿಯನ್ ಪಿಕ್ಚರ್ಸ್ನ ದೀಪು ಅಥವಾ ಯುವರಾಜ್ ಅವರನ್ನು ಈ ಕೆಳಗಿನ ದೂರವಾಣಿ ಸಂಖ್ಯೆಗಳಲ್ಲಿ ಸಂಪರ್ಕಿಸಬಹುದು. ದೂರವಾಣಿ ಸಂಖ್ಯೆ: 7353770203, 9448371389.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.