ವಿಜಯಪುರ: ಪಟ್ಟಣ ಮತ್ತು ದೇವನಹಳ್ಳಿಯಲ್ಲಿ ಉದ್ಯಾನವನಗಳಿಗಾಗಿ ಹಲವೆಡೆ ಸ್ಥಳ ಮೀಸಲಾಗಿದ್ದು, ಕೂಡಲೇ ಹೊಸ ಉದ್ಯಾನವನಗಳನ್ನು ಅಭಿವೃದ್ಧಿಗೊಳಿಸಬೇಕೆಂದು ದೇವನಹಳ್ಳಿ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಬೀಡಿಗಾನಹಳ್ಳಿ ಶಿವಪ್ಪ ಒತ್ತಾಯಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆಯನ್ನು ನೀಡಿರುವ ಅವರು, ವಿಜಯಪುರ ಪಟ್ಟಣದಲ್ಲಿ ಈಗಾಗಲೇ ಕೆಲವು ಉದ್ಯಾನವನಗಳನ್ನು ಅಭಿವೃದ್ಧಿಗೊಳಿಸುತ್ತಿದ್ದು, ದೇವನಹಳ್ಳಿ ಪಟ್ಟಣದಲ್ಲಿಯೂ ಪಾರ್ಕ್ಗಳನ್ನು ನಿರ್ಮಿಸ ಬೇಕೆಂದು ಅವರು ಆಗ್ರಹಿಸಿದ್ದಾರೆ.

ಉದ್ಯಾನವನ ನಿರ್ಮಾಣ ಕಾರ್ಯ ನೆನೆಗುದಿಗೆ ಬಿದ್ದಿರುವುದರಿಂದ ವೃದ್ಧರಿಗೆ, ಹಿರಿಯ ನಾಗರಿಕರು, ವಾಯು ವಿಹಾರಿಗಳಿಗೆ ತೊಂದರೆಯಾಗಿದೆ. ಕಳೆದ 15-20 ವರ್ಷಗಳ ಹಿಂದೆಯೇ ಅನೇಕ ಮಂದಿ ಖಾಸಗಿಯವರು ಅಭಿವೃದ್ಧಿಪಡಿಸಿದ ಲೇಔಟ್ಗಳಲ್ಲಿ ಉದ್ಯಾನವನ ನಿರ್ಮಿಸಲು ತಮ್ಮ ಜಮೀನಿನಲ್ಲಿ ಜಾಗವನ್ನು ಮೀಸಲಿರಿಸಿದ್ದಾರೆ. ಅಷ್ಟೂ ವರ್ಷಗಳಿಂದಲೂ ಉದ್ಯಾನವನ ನಿರ್ಮಿಸುವುದಕ್ಕೆ ಅಡಿಗಲ್ಲು ಹಾಕದೇ, ಕಾಂಪೌಂಡ್ ನಿರ್ಮಿಸದೇ ಬೀಡುಬಿದ್ದಿದೆ. ಕೂಡಲೇ ಉದ್ಯಾನವನಗಳನ್ನು ನಿರ್ಮಿಸಲು ಸರ್ಕಾರ, ಸ್ಥಳೀಯ ಪುರಸಭೆಗಳು ಮುಂದಾಗಬೇಕು ಎಂದು ಆಗ್ರಹಿಸಿದ್ದಾರೆ.

ಈ ಭಾಗದಲ್ಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಯೋಜನೆಯಿಂದಾಗಿ ಜಮೀನಿನ ಬೆಲೆ ಗಗನಕ್ಕೇರಿದ್ದು, ಉದ್ಯಾನವನ ನಿರ್ಮಾಣವಾಗದೇ ಪಾಳು ಬಿದ್ದಿರುವ ಜಮೀನಿನ ದಾನಿಗಳು, ಮಾಲೀಕರು ತಮ್ಮ ಜಾಗಗಳನ್ನು ವಾಪಸ್ ಕೊಡುವಂತೆ ಒತ್ತಾಯಿಸುತ್ತಿದ್ದಾರೆ. ಇದರಿಂದಾಗಿ ಜಾಗದ ಸೂಕ್ತ ಬಳಕೆಯಿಂದಾಗಿ ಕೂಡಲೇ ಪಾರ್ಕ್ಗಳನ್ನು ನಿರ್ಮಿಸಲು ಸಂಬಂಧಪಟ್ಟವರು ಶೀಘ್ರ ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದ್ದಾರೆ.

ದೇವನಹಳ್ಳಿ ಪಟ್ಟಣದಲ್ಲಿ ಪಾರಿವಾಳ ಗುಡ್ಡದಂತಹ ಸರ್ಕಾರಿ ಜಮೀನಿನ ತಪ್ಪಲಿನಲ್ಲಿ ಬೃಹತ್ ಉದ್ಯಾನವನವೊಂದನ್ನು ನಿರ್ಮಿಸಲು ಯೋಜನೆ ರೂಪಿಸಬೇಕು. ಇದರಿಂದ ಸಾರ್ವಜನಿಕರಿಗೆ ಅನುಕೂಲ ವಾಗುವುದಲ್ಲದೇ ಪರಿಸರವನ್ನು ಸ್ವಚ್ಚವಾಗಿಡಲು ಅನುಕೂಲವಾಗುವುದು ಎಂದು ಅವರು ವಿವರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.