ವಿಜಯಪುರ: ಬುದ್ಧಿಮಾಂದ್ಯರು, ಅಬಲೆಯರು ಮತ್ತು ವಯೋವೃದ್ಧರಿಗೆ ಕೇವಲ ಅನುಕಂಪ ತೋರದೆ ಅವರಲ್ಲಿರುವ ಸಾಮರ್ಥ್ಯ ಗುರುತಿಸಿ ಅವಕಾಶ ನೀಡಬೇಕು ಎಂದು ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಪ್ರದೇಶ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಷಣ್ಮುಗಪ್ಪ ಹೇಳಿದರು.

ಇಲ್ಲಿನ ಅಂಕತಟ್ಟಿ ಗೇಟ್ ಬಳಿ ಶುಕ್ರವಾರ ಆಯೋಜಿಸಿದ್ದ ಬುದ್ಧಿಮಾಂದ್ಯ, ಅಂಗವಿಕಲ ಮತ್ತು ವಯೋವೃದ್ಧರ ವಸತಿ ನಿಲಯದ ಮಹಿಳೆಯರಿಗೆ ಉಚಿತ ಬಟ್ಟೆ ವಿತರಿಸುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಉಳ್ಳವರು ಅಸಹಾಯಕರಿಗೆ ನೆರವು ನೀಡಬೇಕು. ಅಗತ್ಯ ಸೌಕರ್ಯಗಳನ್ನು ಕಲ್ಪಿಸುವ ಜತೆಗೆ ಮಾನಸಿಕ ಸ್ಥೈರ್ಯವನ್ನು ತುಂಬಿ ಎಲ್ಲರಂತೆ ಬದುಕಲು ಅನುವು ಮಾಡಿಕೊಡಬೇಕು ಎಂದರು.

ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಪಿಳ್ಳಮುನಿಶಮಪ್ಪ, ನಿರ್ಲಕ್ಷ್ಯಕ್ಕೆ ಒಳಗಾದ ಬುದ್ಧಿಮಾಂದ್ಯ, ಅಂಗವಿಕಲ ಮತ್ತು ಅಶಕ್ತರನ್ನು ಸಂಸ್ಥೆಗಳು ಮಾನವೀಯತೆಯಿಂದ ಪೋಷಿಸುತ್ತಿದೆ.

ಇವರಿಗೆ ಆರ್ಥಿಕ ಸಹಾಯವೂ ದೊರೆತರೆ ಉತ್ತಮ ಎಂದು ಅವರು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ವಿಜಯಪುರ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ವಿ.ಮಂಜುನಾಥ್ ಮಾತನಾಡಿ, ನಮ್ಮ ಆದಾಯದ ಸ್ವಲ್ಪ ಭಾಗವನ್ನು ಸಾಮಾಜಿಕ ಸೇವೆಗೆ ಮೀಸಲಿಡಬೇಕು ಎಂದು ಹೇಳಿದರು.

ಕೃಷಿಕ ಸಮಾಜದ ಅಧ್ಯಕ್ಷ ಶ್ರಿನಿವಾಸಗೌಡ, ಪುರಸಭಾ ಸದಸ್ಯ ಎಂ.ಸತೀಶ್ಕುಮಾರ್ ಮಾತನಾಡಿದರು. ಬೆಂ.ಗ್ರಾ.ಜಿ.ಕಾ.ನಿ.ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಪರಮಶಿವಯ್ಯ, ಜ್ಯೋತೀಶ್ವರಪ್ಪ, ಪುರಸಭಾ ಅಧ್ಯಕ್ಷೆ ಮಂಜುಳ ನಾರಾಯಣಸ್ವಾಮಿ, ಉಪಾಧ್ಯಕ್ಷ ಎಂ.ಎಲ್. ಕೃಷ್ಣಪ್ಪಗೌಡ, ತಾ.ಪಂ.ಸದಸ್ಯ ಲಕ್ಷ್ಮಣಗೌಡ, ಭಾರತ ಜನ ಜಾಗೃತಿ ಸೇನೆ ರಾಜ್ಯ ಘಟಕದ ಅಧ್ಯಕ್ಷ ಮುನಿಯಪ್ಪ, ಸಮಾಜ ಸೇವಕ ಗೋಪಾಲ್ ಇತರರ ಉಪಸ್ಥಿತರಿದ್ದರು.

ಸರ್ವೋದಯ ಸರ್ವೀಸ್ ಸೊಸೈಟಿಯ ಪ್ರಧಾನ ಕಾರ್ಯದರ್ಶಿ ಗೋಪಾಲ್ರಾವ್ ವರದಿ ಓದಿದರು. ಡಿ.ಸಿ.ಶಂಕರ್ ನಿರೂಪಿಸಿದರು, ಐಶ್ವರ್ಯ ಮತ್ತು ಕಾವ್ಯ ಪ್ರಾರ್ಥಿಸಿದರು, ಎಂ.ಎನ್.ಶಂಕರ್ ಸ್ವಾಗತಿಸಿದರು, ಲಕ್ಷ್ಮಣರೆಡ್ಡಿ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.