ವಿಜಯಪುರ: ರಸ್ತೆ ಕಾಮಗಾರಿ ಪೂರ್ಣಗೊಳಿಸಲು ಆಗ್ರಹ

7

ವಿಜಯಪುರ: ರಸ್ತೆ ಕಾಮಗಾರಿ ಪೂರ್ಣಗೊಳಿಸಲು ಆಗ್ರಹ

Published:
Updated:

ವಿಜಯಪುರ: ಇಲ್ಲಿಗೆ ಸಮೀಪದ ಬೂದಿಗೆರೆ ಗ್ರಾಮದಿಂದ ನಲ್ಲೂರು, ನಾಗನಾಯ್ಕನಹಳ್ಳಿ, ಚನ್ನರಾಯಪಟ್ಟಣ ಮಾರ್ಗವಾಗಿ ವಿಜಯಪುರ ಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಅಭಿವೃದ್ಧಿಪಡಿಸಿ ಡಾಂಬರೀಕರಣ ಮಾಡಿ ಅನೇಕ ವರ್ಷಗಳೇ ಕಳೆದಿದ್ದರೂ ಮಧ್ಯೆ ಅಲ್ಲಲ್ಲಿ ಅಪೂರ್ಣಗೊಂಡಿರುವ ರಸ್ತೆ ಕಾಮಗಾರಿಯನ್ನು ಶೀಘ್ರವೇ ಪೂರ್ಣಗೊಳಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.ವಿಜಯಪುರ ನಂದಿನಿ ಕಾಲೇಜು ಬಳಿ ಎರಡು ಕಡೆ, ಇರಿಗೇನಹಳ್ಳಿ ಗೇಟ್ ಬಳಿ ಹಾಗೂ ಚನ್ನರಾಯಪಟ್ಟಣ ಬಳಿಯಲ್ಲಿ ಮೋರಿ ನಿರ್ಮಿಸಲಾಗಿದ್ದು, ಸೇತುವೆ ನಿರ್ಮಿಸಿದ ಅನೇಕ ಕಡೆಯಲ್ಲಿ ಡಾಂಬರೀಕರಗೊಂಡಿಲ್ಲ. ಜಲ್ಲಿ ಹಾಕಿದ್ದು ಎದ್ದು ನಿಂತಿದ್ದು ಸಂಚಾರಕ್ಕೆ ಅಡ್ಡಿಯಾಗಿದೆ. ಕೂಡಲೇ ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸಬೇಕೆಂದು ಒತ್ತಾಯಿಸಲಾಗಿದೆ.ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry