ದಾಂಡೇಲಿ: ನಿತ್ಯಜೀವನದಲ್ಲಿ ವಿಜ್ಞಾನ ದ ಅರಿವು ಅಗತ್ಯವಿದೆ ಎಂದು ಹಳಿ ಯಾಳ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಸ್. ನಾಯ್ಕ ಹೇಳಿದರು.

ಅವರು ಇಲ್ಲಿಯ ಸೇಂಟ್ಮೈಕಲ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಮುಂಜಾನೆ ಏರ್ಪಡಿಸಿದ್ದ `ಇನ್ಸ್ಪೈಯರ್ಡ್ ಅವಾರ್ಡ್ ವಸ್ತು ಪ್ರದರ್ಶನ~ ಉದ್ಘಾಟನಾ ಕಾರ್ಯ ಕ್ರಮದ ಅಧ್ಯಕ್ಷತೆ ವಹಿಸಿ ಮಾತ ನಾಡಿದರು.

ಇಂದು ವಿಶ್ವದಲ್ಲಿ ಅನೇಕ ವೈಜ್ಞಾನಿಕ ಆವಿಷ್ಕಾರಗಳು ನಡೆದಿವೆ. ಅವುಗಳ ಅರಿವನ್ನು ನಿತ್ಯಪಾಠದೊಂದಿಗೆ ಶಾಲಾ ಮಕ್ಕಳಿಗೆ ಒದಗಿಸಿ ಅವರಲ್ಲಿ ವಿಜ್ಞಾನದ ಆಸಕ್ತಿಯನ್ನು ಹೆಚ್ಚಿಸಬೇಕಾಗಿದೆ. ಅದಕ್ಕಾಗಿ ಇಂತಹ ವಸ್ತು ಪ್ರದ ರ್ಶನಗಳು ಉತ್ತಮ ವೇದಿಕೆಗಳಾಗಿದ್ದು, ಇದರ ಲಾಭವನ್ನು ಶಿಕ್ಷಕರು ಪಡೆದು ಕೊಳ್ಳಬೇಕೆಂದು ಸಲಹೆ ನೀಡಿದರು.
ಎರಡು ದಿನಗಳ ಕಾಲ ನಡೆಯುವ ವಸ್ತು ಪ್ರದರ್ಶನದ ಉದ್ಘಾಟನೆಯನ್ನು ಜೋಯಿಡಾ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ ಪಟಗಾರ ನೆರವೇರಿದರು.

ವಿಶ್ವದ ಹಿರಿಯ ವಿಜ್ಞಾನಿಗಳು ಹಾಗೂ ಅವರ ಆವಿಷ್ಕಾರಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ದೊರಕಿಸಿ ಕೊಡುವಲ್ಲಿ ಇಂತಹ ವಸ್ತು ಪ್ರದರ್ಶನ ಗಳು ಅನಿವಾರ್ಯವಾಗಿದ್ದು, ವೈಜ್ಞಾ ನಿಕ ರಂಗದ ಇತ್ತೀಚಿನ ಬದಲಾವ ಣೆಗಳತ್ತ ಎಲ್ಲರೂ ಗಮನವಹಿಸಬೇಕು ಶಿಕ್ಷಕರಲ್ಲಿ ಆಸಕ್ತಿ ಇದ್ದರೆ ಇದು ಸುಲಭ ಸಾಧ್ಯ ಎಂದು ಪಟಗಾರ ಹೇಳಿದರು."

ಕಾರ್ಯಕ್ರಮದ ವೇದಿಕೆಯಲ್ಲಿ ಶಿರಸಿ ಶೈಕ್ಷಣಿಕ ಜಿಲ್ಲೆಯ ಶಿಕ್ಷಕರ ಸಂಘದ ಅಧ್ಯಕ್ಷ ದಿನೇಶ ನಾಯ್ಕ, ಹಳಿ ಯಾಳ ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಟಿ.ಡಿ.ಮಡಿ ವಾಳ, ಕ್ಷೇತ್ರ ಸಮನ್ವಯಾಧಿಕಾರಿ ರೆಹಮಾನ್, ಜೋಯಿಡಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಯಶವಂತ ನಾಯ್ಕ ಉಪಸ್ಥಿತರಿದ್ದರು.
ವಸ್ತು ಪ್ರದರ್ಶನ ಮಳಿಗೆಗಳ ಉದ್ಘಾಟನೆಯನ್ನು ತಾಲ್ಲೂಕು ಕ.ಸಾ.ಪ ಅಧ್ಯಕ್ಷ ಬಿ.ಎನ್.ವಾಸರೆ ನೆರವೇರಿಸಿ ದರು. ಬಿಆರ್ಪಿ ಆಶಾ ದೇಶಭಂಡಾರಿ ಕಾರ್ಯಕ್ರಮ ನಿರೂಪಿಸಿದರು. ಹಳಿಯಾಳ ಕ್ಷೇತ್ರ ಸಮನ್ವಯಾಧಿಕಾರಿ ವೈ.ಜಿ.ಕುರಿ ವಂದಿಸಿದರು.ನಿರ್ಣಾಯಕರಾಗಿ ಶಿಕ್ಷಕರಾದ ಮಾನೆ ಹಾಗೂ ದೀಪಾ ಪಟಗಾರ ಆಗಮಿಸಿದ್ದರು.

ಅಹವಾಲು ಸ್ವೀಕಾರ ನಾಳೆ
ಶಿರಸಿ: ಸಂಸದ ಅನಂತಕುಮಾರ ಹೆಗಡೆ ಆ 1ರ ಬೆಳಿಗ್ಗೆ 11ರಿಂದ 1ಗಂಟೆಯ ತನಕ ಇಲ್ಲಿನ ಲೋಕೋಪಯೋಗಿ ಪರಿವೀಕ್ಷಣಾ ಗೃಹದಲ್ಲಿ ಸಾರ್ವಜನಿಕ ಅಹ ವಾಲು ಸ್ವೀಕರಿಸುವರು ಎಂದು ಸಂಸದರ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ.

ಬ್ಯಾಂಕಾಕ್ಗೆ ಐಸೂರು
ಸಿದ್ದಾಪುರ: ಥೈಲ್ಯಾಂಡ್ನ ಬ್ಯಾಂಕಾಕ್ನಲ್ಲಿ ಆಗಸ್ಟ್ 4ರಂದು ನಡೆಯಲಿರುವ ಅಂತರರಾಷ್ಟ್ರೀಯ ಸಾಂಸ್ಕೃತಿಕ ಹಬ್ಬದಲ್ಲಿ ತಾಲ್ಲೂಕಿನ ಹಿರಿಯ ವಕೀಲ ಎನ್. ಡಿ.ನಾಯ್ಕ ಐಸೂರು ಭಾಗವಹಿ ಸಲಿದ್ದಾರೆ. ಇಂಡೊ- ಥೈಲ್ಯಾಂಡ್ ಮತ್ತು ಥೈಲ್ಯಾಂಡ್ ಕನ್ನಡಿಗರ ಆಶ್ರಯ ದಲ್ಲಿ ಆಯೋಜಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.