ಬೆಂಗಳೂರು: `ಇಂದಿನ ಆಧುನಿಕ ಯುಗದಲ್ಲಿ ವಿಜ್ಞಾನ ಮತ್ತು ಧರ್ಮವು ಅನೇಕ ಗೊಂದಲಮಯ ವಾತಾವರಣವನ್ನು ಸೃಷ್ಟಿಸಿದೆ~ ಎಂದು ಸುಪ್ರೀಂ ಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಎಂ.ಎನ್.ವೆಂಕಟಾಚಲಯ್ಯ ಹೇಳಿದರು.

ಬುಧವಾರ ನಗರದ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ ಮತ್ತು ತುಮಕೂರು ವಿಶ್ವವಿದ್ಯಾಲಯವು ಪರಿಷತ್ನ ಸಮ್ಮೇಳನ ಸಭಾಂಗಣದಲ್ಲಿ ಏರ್ಪಡಿಸಿದ್ದ `ವಿಜ್ಞಾನದ ತತ್ವಶಾಸ್ತ್ರ~ ಎಂಬ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು, `ಐನ್ಸ್ಟೈನ್ ತತ್ವಶಾಸ್ತ್ರ ಮತ್ತು ನ್ಯೂಟನ್ನ ವಿಜ್ಞಾನದ ಆವಿಷ್ಕಾರದ ಬಗ್ಗೆ ಆಧುನಿಕ ದಿನದಲ್ಲಿ ಹೆಚ್ಚು ಪ್ರಭಾವ ಬೀರಿದೆ~ ಎಂದು ಹೇಳಿದರು.

`ಧರ್ಮದ ವಿಚಾರದಿಂದ ಹೋದಾಗ ವೈಜ್ಞಾನಿಕ ಸತ್ಯ ಕಂಡು ಬರುವುದಿಲ್ಲ. ಕಂಡು ಬಂದರೂ ಅದನ್ನು ತಿರಸ್ಕರಿಸಬಹುದು. ಆದರೆ ಅದರಲ್ಲಿ ಈಗ ಸೂರ್ಯ ಹುಟ್ಟಿರುವುದೇ ಮನುಷ್ಯನಿಗೆ ಬೆಳಕು ನೀಡಲು, ಔಷಧಿಗಳು, ಪ್ರಾಣಿಗಳು, ಹುಟ್ಟಿರುವುದೇ ಮನುಷ್ಯನಿಗೆ ಸಹಾಯಕವಾಗಲಿ~ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ತುಮಕೂರು ರಾಮಕೃಷ್ಣ ಮಿಷನ್ನಿನ ವೀರೇಶಾನಂದ ಸ್ವಾಮೀಜಿ, ತುಮಕೂರು ವಿಶ್ವವಿದ್ಯಾಲಯ ಕುಲಪತಿ ಡಾ.ಎಸ್. ಸಿ.ಶರ್ಮ ಮತ್ತು ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಕೆ.ಎಂ.ಕಾವೇರಪ್ಪ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.