1. ಸುಪ್ರಸಿದ್ಧ ಹಿಂದು-ಖುಷ್ ಪರ್ವತಸ್ತೋಮದ ಒಂದು ದೃಶ್ಯ ಚಿತ್ರ-1 ರಲ್ಲಿದೆ. ಈ ಕೆಳಗಿನ ಪಟ್ಟಿಯ ಯಾವ ರಾಷ್ಟ್ರದಲ್ಲಿ ಈ ಪರ್ವತ ಪಂಕ್ತಿಯನ್ನು ನೇರ ನೋಡಬಹುದು?
ಅ. ಇರಾನ್
ಬ. ಆಫ್ಘಾನಿಸ್ಥಾನ್
ಕ. ಬಂಗ್ಲಾದೇಶ್
ಡ. ಇರಾಕ್

2. `ಕೃತಕ ಉಪಗ್ರಹ~ವೊಂದರ ಚಿತ್ರ ಇಲ್ಲಿದೆ (ಚಿತ್ರ-2). ಇಲ್ಲಿ ಹೆಸರಿಸಿರುವ ನಿರ್ಮಿತಿಗಳಲ್ಲಿ ಯಾವುವು ಕೃತಕ ಉಪಗ್ರಹಗಳಲ್ಲ-ಗುರುತಿಸಬಲ್ಲಿರಾ?
ಅ. ಹಬಲ್ ದೂರದರ್ಶಕ
ಬ. ಕೆಪ್ಲರ್ ಮಿಶನ್
ಕ. ಕಾಸಿನೀ ಮಿಶನ್
ಡ. ಚಂದ್ರ ಕ್ಷ-ಕಿರಣ ಲ್ಯಾಬ್
ಇ. ನ್ಯೂ ಹೊರೈಜನ್ಸ್

3. ವಿಶಾಲ ಕಣಿವೆಯೊಂದರಲ್ಲಿ ಪ್ರವಹಿಸುತ್ತಿರುವ ಸುಂದರ ದೃಶ್ಯ ಚಿತ್ರ-3 ರಲ್ಲಿದೆ. ಇಲ್ಲಿ ಹೆಸರಿಸಿರುವ `ನದಿ-ಖಂಡ~ ಸರಿಹೊಂದಿಸಿ:
1. ಥೇಮ್ಸ ಅ. ಉತ್ತರಅಮೆರಿಕ
2. ಪರಾನಾ ಬ. ಆಸ್ಟ್ರೇಲಿಯ
3. ಸಟ್ಲೆಜ್ ಕ. ದಕ್ಷಿಣ ಅಮೆರಿಕ
4. ಮಿಸಿಸಿಪ್ಪೀ ಡ. ಉತ್ತರ ಅಮೆರಿಕ
5. ಕೊಲರೇಡೋ ಇ. ಯೂರೋಪ್
6. ಡಾರ್ಲಿಂಗ್ ಈ. ಏಷಿಯ

4. ಚಿತ್ರ-4 ರಲ್ಲಿರುವ ಪ್ರಾಣಿಯನ್ನು ನೋಡಿ. ಈ ಸಾಗರಾಶ್ರಿತ ಪ್ರಾಣಿ ಯಾವುದು ಗೊತ್ತೇ?
ಅ. ಸಮುದ್ರ ಸಿಂಹ
ಬ. ಸೀಲ್
ಕ. ವಾಲ್ರಸ್
ಡ. ನೀರು ನಾಯಿ

5. ಭೂಮಿಗೆ ಅತ್ಯಂತ ಹತ್ತಿರದ ನಕ್ಷತ್ರ `ಸೂರ್ಯ~ ಚಿತ್ರ-5 ರಲ್ಲಿದೆ. ಹಗಲಿನಾಗಸದ ಅತ್ಯಂತ ಉಜ್ವಲ ನಕ್ಷತ್ರ ಸೂರ್ಯ. ಹಾಗಾದರೆ ಇರುಳಿನಾಗಸದ ಗರಿಷ್ಠ-ಕಾಂತಿಯ ನಕ್ಷತ್ರ ಯಾವುದು ಗೊತ್ತೇ?
ಅ. ರೀಗಲ್
ಬ. ಕ್ಯಾನೋಪಸ್
ಕ. ಸಿರಿಯಸ್
ಡ. ವೇಗಾ

6. ಪೂರ್ವಮಾನವ ಪ್ರಭೇದವೊಂದು ಚಿತ್ರ-6 ರಲ್ಲಿದೆ. ಆಧುನಿಕ ಮನುಷ್ಯರಾದ ನಮ್ಮ ಮತ್ತು ಎಲ್ಲ ಪೂರ್ವಮಾನವ ಪ್ರಭೇದಗಳನ್ನೊಳಗೊಂಡ ವಿಶಿಷ್ಟ ವರ್ಗದ ಹೆಸರೇನು?
ಅ. ಸ್ತನಿ ವರ್ಗ
ಬ. ಪ್ರೈಮೇಟ್ಸ್
ಕ. ಬೈಪೆಡ್ಸ್
ಡ. ಹೋಮಿನಿಡ್ಸ್

7. ಲೋಹ ನಿಕ್ಷೇಪದ ಚೂರೊಂದು ಚಿತ್ರ-7 ರಲ್ಲಿದೆ. ಈ ಕೆಳಗಿನ ಪಟ್ಟಿಯಲ್ಲಿ ಯಾವುವು ಲೋಹಗಳಲ್ಲ?
ಅ. ಟಂಗ್ಸ್ಟನ್
ಬ. ಸೋಡಿಯಂ
ಕ. ರಂಜಕ
ಡ. ಸತು
ಇ. ಗಂಧಕ
ಈ. ಹಾಲ್ಮಿಯಂ

8. ಚಿತ್ರ-8 ರಲ್ಲಿರುವ ಸುಂದರ ಹಕ್ಕಿಯನ್ನು ಗುರುತಿಸಬಲ್ಲಿರಾ?
ಅ. ಗೀಜಗ ಹಕ್ಕಿ
ಬ. ಝೇಂಕಾರದ ಹಕ್ಕಿ
ಕ. ಕುಂಜ ಹಕ್ಕಿ
ಡ. ಸ್ವರ್ಗ ಪಕ್ಷಿ

9. ಕಡಲಲ್ಲಿ ಈಜುತ್ತಿರುವ ತಿಮಿಂಗಿಲ ಜೋಡಿಯೊಂದು ಚಿತ್ರ-9 ರಲ್ಲಿದೆ. ಇವುಗಳಲ್ಲಿ ಯಾವುದು ತಿಮಿಂಗಿಲ ವಿಧ ಅಲ್ಲ-ಪತ್ತೆಹಚ್ಚಬಲ್ಲಿರಾ?
ಅ. ಓರ್ಕಾ
ಬ. ಬೆಲ್ಯೂಗಾ
ಕ. ಈಲ್
ಡ. ನಾರ್ವಾಲ್

10. `ಕಣವೇಗೋತ್ಕರ್ಷಕ~ದಲ್ಲಿ ಪರಮಾಣುಗಳನ್ನು ಡಿಕ್ಕಿಹಾಕಿಸಿ ಛಿದ್ರಗೊಳಿಸಿದಾಗ ಚಿಮ್ಮುವ ಪರಮಾಣು ಕಣಗಳ ಚಿತ್ರ-ವಿಚಿತ್ರ ಚಲನಾ ಪಥಗಳ ಚಿತ್ರಣವೊಂದು ಇಲ್ಲಿದೆ. ಈ ಕೆಳಗಿನ ಪಟ್ಟಿಯಲ್ಲಿ ಯಾವುದು ಪರಮಾಣುವಿನೊಳಗಿನ ಕಣ ಅಲ್ಲ?
ಅ. ಪಾಸಿಟ್ರಾನ್
ಬ. ಮೇಸಾನ್
ಕ. ಗ್ಲೂವಾನ್
ಡ. ಹೇಡ್ರಾನ್
ಇ. ಫ್ರಿಯಾನ್

11. ನಮ್ಮ ಸೌರವ್ಯೆಹದ್ದೇ ಗ್ರಹವೊಂದು ಭೂ ಗಾತ್ರಕ್ಕೆ ಹೋಲಿಸಿದಂತೆ ಚಿತ್ರ-11 ರಲ್ಲಿದೆ.
ಅ. ಈ ಗ್ರಹ ಯಾವುದು?
ಬ. ನಿಮ್ಮ ತೀರ್ಮಾನಕ್ಕೆ ಆಧಾರ ಏನು?

12. ನಕ್ಷತ್ರಗಳದು ಭಿನ್ನ ಭಿನ್ನ ವರ್ಣ (ಚಿತ್ರ-12) ಅದು ನಿಮಗೂ ಗೊತ್ತಲ್ಲ? ನಕ್ಷತ್ರಗಳ ಬಣ್ಣಗಳು ಯಾವ ಅಂಶವನ್ನು ಅವಲಂಬಿಸಿವೆ?
ಅ. ನಕ್ಷತ್ರದ ಗಾತ್ರ
ಬ. ನಕ್ಷತ್ರದ ದ್ರವ್ಯರಾಶಿ
ಕ. ನಕ್ಷತ್ರದ ಮೇಲ್ಮೈ ಉಷ್ಣತೆ
ಡ. ನಕ್ಷತ್ರದ ವಯಸ್ಸು

ಉತ್ತರಗಳು
1. ಬ-ಆಫ್ಘಾನಿಸ್ಥಾನ
2. ಕ ಮತ್ತು ಇ (ಇವು ವ್ಯೋಮನೌಕೆಗಳು)
3. 1-ಇ; 2-ಕ; 3-ಈ; 4-ಅ; 5-ಡ; 6-ಬ.
4. ಬ-ಸೀಲ್
5. ಕ-ಸಿರಿಯಸ್
6. ಡ-ಹೋಮಿನಿಡ್ಸ್
7. ಕ ಮತ್ತು ಇ
8. ಡ-ಸ್ವರ್ಗಪಕ್ಷಿ
9. ಕ-ಈಲ್
10. ಇ-ಫ್ರಿಯಾನ್
11. ಅ-ನೆಪ್ಚೂನ್; ಬ-ನೀಲವರ್ಣ
12. ಕ-ಮೇಲ್ಮೈ ಉಷ್ಣತೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.