ವಿಟ್ಲ: ಇಲ್ಲಿಯ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ನೂತನ ಕಟ್ಟಡ ನಿರ್ಮಾಣಕ್ಕೆ ಒತ್ತಾಯಿಸಿ ಎಬಿವಿಪಿ ವಿಟ್ಲ ತಾಲ್ಲೂಕು ವತಿಯಿಂದ ಇಲ್ಲಿನ ಖಾಸಗಿ ಬಸ್ ನಿಲ್ದಾಣ ಬಳಿ ಸೋಮವಾರ ಪ್ರತಿಭಟನೆ ನಡೆಯಿತು.

ಎಬಿವಿಪಿ ಜಿಲ್ಲಾ ಸಂಚಾಲಕ ನವೀನ್ ರಾಜ್ ಬೆದ್ರೋಡಿ ಮಾತನಾಡಿ ವಿಟ್ಲದಲ್ಲಿ ಸ್ವಂತ ಕಟ್ಟಡ ನಿರ್ಮಾಣಕ್ಕೆ 4 ಎಕರೆ ನಿವೇಶನ ಮಂಜೂರಾಗಿದ್ದು, ನೂತನ ಐ.ಟಿ.ಐ ಕಟ್ಟಡಕ್ಕೆ ಐಆರ್ಡಿಪಿ ನಬಾರ್ಡ್ ಯೋಜನೆಯಡಿ ಮೂರು ಕೋಟಿ ರೂಪಾಯಿ ಅನುದಾನ ಮಂಜೂರಾಗಿದೆ. ಆದರೆ ಇದು ಗ್ರಾಮೀಣ ಪ್ರದೇಶಕ್ಕೆ ಸೀಮಿತವಾಗಿದ್ದರಿಂದ ಅದು ಉಡುಪಿ, ಮತ್ತು ಮಂಗಳೂರಿಗೆ ವರ್ಗಾವಣೆವಾಗಿದೆ. ಹೀಗಾಗಿ ಇಲ್ಲಿಯ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ ಎಂದರು.

ಬಳಿಕ ಪ್ರತಿಭಟನಾಕಾರರು ವಿಟ್ಲದ ನಾಡಕಚೇರಿಗೆ ತೆರಳಿ ಉಪ ತಹಶೀಲ್ದಾರರ ಮುಖಾಂತರ ಮುಖ್ಯಮಂತ್ರಿಗೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಮನವಿ ಸಲ್ಲಿಸಿದರು.

ಎಬಿವಿಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ರವಿ ಮಾಣಿಲ, ನಗರ ಕಾರ್ಯದರ್ಶಿ ಯತೀಶ್ ಎಚ್., ವಿನಯ ಆಲಂಗಾರು, ಕಾಲೇಜು ಪ್ರಮುಖ್ ರಾಜೇಶ್ ಆಚಾರ್ಯ, ಕಾರ್ಯದರ್ಶಿ ಕಿರಣ್ರಾಜ್ ಎಂ..ಸಿ, ನಾಗೇಶ್, ದಿವ್ಯ, ಪುಷ್ಪ ದೀಪಿಕಾ, ಗುಲಾಬಿ, ಅಶೋಕ್ ಮತ್ತಿತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.