ಎಲ್ಲಿ ನೋಡಿದರೂ ಪಂಜಾಬಿ ಡಾಬಾ, ಪಂಜಾಬಿ ನೃತ್ಯ, ಪಂಜಾಬಿ ಸಾಂಪ್ರದಾಯಿಕ ಉಡುಪು ತೊಟ್ಟವರು ಕಾಣಿಸಿಕೊಳ್ಳುತ್ತಿದ್ದರು. ಪಂಜಾಬಿ ಊಟದ ವಾಸನೆಯ ಗಮ್ಮತ್ತೂ ಅಲ್ಲೆಲ್ಲಾ ಹರಡಿತ್ತು.ಒಟ್ಟಿನಲ್ಲಿ ಮಿನಿ ಪಂಜಾಬೊಂದು ಬೆಂಗಳೂರಿನಲ್ಲಿ ಸೃಷ್ಟಿಯಾದಂತಿತ್ತು. ಇದಲ್ಲಾ ಕಂಡುಬಂದಿದ್ದು ಐಟಿಎಂ ಹೋಟೆಲ್ ಮ್ಯಾನೇಜ್ಮೆಂಟ್ ಸಂಸ್ಥೆ ಆಯೋಜಿಸಿದ್ದ `ಕಲಿನರಿ ಫೀಸ್ಟಾ 2012~-~ಮಝೇದಾರ್ ಖುರಾಕ್~ ಎಂಬ ಉತ್ಸವದಲ್ಲಿ.

ಆಹಾರ ವಿಷಯದಲ್ಲಿ ದಿನೇ ದಿನೇ ಹೊಸತನ ಹುಟ್ಟಿಕೊಳ್ಳುತ್ತಲೇ ಇರುತ್ತದೆ. ಅವುಗಳನ್ನು ಪ್ರದರ್ಶಿಸುವುದಕ್ಕೆಂದು ಇತ್ತೀಚೆಗಷ್ಟೆ ಐಟಿಎಂ ಸಂಸ್ಥೆ ತನ್ನ ಕಾಲೇಜು ಆವರಣದಲ್ಲಿ ಆಹಾರ ಮೇಳವನ್ನು ಹಮ್ಮಿಕೊಂಡಿತ್ತು. ನಗರದ ವಿವಿಧೆಡೆಯಿಂದ ಆಹಾರಪ್ರಿಯರು ಇಲ್ಲಿಗೆ ಆಗಮಿಸಿದ್ದರು.

ಪಂಜಾಬಿ ಸಾಂಪ್ರದಾಯಿಕ ಉಡುಗೆ ತೊಟ್ಟ ವಿದ್ಯಾರ್ಥಿಗಳು ಅತಿಥಿಗಳನ್ನು ಸ್ವಾಗತಿಸುವ ಪರಿ ವಿಶೇಷವೆನಿಸಿತ್ತು. ಜೊತೆಗೆ ಮನರಂಜನೆಗೆಂದು ಪಂಜಾಬಿಯ ಡೋಲ್ ಮತ್ತು ನಗಡಾಸ್ ನೃತ್ಯವೂ ಪ್ರದರ್ಶಿತಗೊಂಡಿತು.

ಪಂಜಾಬಿ ಡಾಬಾಗಳನ್ನು ಹೋಲುವ ಗುಡಿಸಲುಗಳಿಂದ, ಪಂಜಾಬಿಯ ಲ್ಯಾಂಟೀನುಗಳಿಂದ ಇಡೀ ಕ್ಯಾಂಪಸ್ ಅಲಂಕೃತಗೊಂಡಿತ್ತು. ಕೇವಲ ಅಲಂಕಾರಕ್ಕಷ್ಟೇ ಪಂಜಾಬಿ ಶೈಲಿ ಮೀಸಲಿರಲಿಲ್ಲ, ತಿನಿಸುಗಳಲ್ಲೂ ಪಂಜಾಬ್ ಶೈಲಿಯೇ ಎದ್ದು ಕಾಣಿಸಿತ್ತು. ಈ ಎಲ್ಲಾ ಸಿದ್ಧತೆಗಳನ್ನು ಕಾಲೇಜು ವಿದ್ಯಾರ್ಥಿಗಳೇ ಮಾಡಿದ್ದು ವಿಶೇಷ.

ಕಾರ್ಯಕ್ರಮದಲ್ಲಿ ಕಡಿಮೆಯೆಂದರೂ 52 ಬಗೆಯ ತಿಂಡಿ ತಿನಿಸುಗಳು ತಯಾರಾಗಿದ್ದವು. ದಹಿ ಪಾಪಡಿ ಚಾಟ್ನಿಂದ ಹಿಡಿದು ಮಿಸ್ಸಿ ರೋಟಿ, ರಬ್ದಿ, ಹೆಸರು ಬೇಳೆ ಹಲ್ವಾ ಎಲ್ಲವೂ ಅಲ್ಲಿತ್ತು. ಆಹಾರ ಪ್ರಿಯರಿಗಂತೂ ಇಲ್ಲಿ ಅನೇಕ ಆಯ್ಕೆಗಳು ತೆರೆದುಕೊಂಡಿತ್ತು.

ಬಾಣಸಿಗರು ತಯಾರಿಸಿದ ಆಹಾರಗಳನ್ನು ವಿದ್ಯಾರ್ಥಿಗಳು ಸ್ಟಾಲ್ಗಳಲ್ಲಿ ಮಾರುತ್ತಿದ್ದರು. ಒಟ್ಟಿನಲ್ಲಿ ಕಲಿನರಿ ಫೀಸ್ಟಾ ಅಲ್ಲಿಗೆ ಬಂದ ಆಹಾರಪ್ರಿಯರ ಬಾಯಿ ರುಚಿಯನ್ನು ತೃಪ್ತಿಗೊಳಿಸಿದ್ದರಲ್ಲಿ ಸಂಶಯವಿಲ್ಲ.

ತಾಜ್ ವಿವಂತಾ, ಒಬೆರಾಯ್, ಇಸ್ತಾ, ಐಟಿಸಿ ಹೋಟೆಲ್, ಸಿಟ್ರಸ್ ಹೋಟೆಲ್, ಲೆಮನ್ ಟ್ರೀ ಹೋಟೆಲ್, ನೋವೊಟೆಲ್, ಕ್ರೌನ್ ಪ್ಲಾಝಾ ಹೋಟೆಲಿನ ಶೆಫ್ಗಳೆಲ್ಲಾ ಇಲ್ಲಿ ಹಾಜರಿದ್ದರು. ಐಟಿಎಂ ವಿದ್ಯಾರ್ಥಿಗಳ ಪ್ರಯತ್ನವನ್ನು ಶ್ಲಾಘಿಸಿದರು.

ಇಷ್ಟೇ ಅಲ್ಲ, ಆಹಾರ ಮೇಳದ ಜೊತೆಗೆ ಮೆಹೆಂದಿ, ಪಾಟರಿ, ಬಳೆ ಮಾರುವುದು, ಮ್ಯಾಜಿಕ್ ಶೋ, ಡಿಸ್ಕೊ ಜಾಕಿಯಿಂಗ್, ಭಂಗ್ರಾ ಕಾರ್ಯಕ್ರಮ ಕೂಡ ನಡೆಸಿಕೊಡಲಾಯಿತು. ಮೇಳಕ್ಕೆ ಭೇಟಿ ಕೊಟ್ಟವರ ನಿರೀಕ್ಷೆಯಂತೂ ಇಲ್ಲಿ ನಿಜಗೊಂಡಿತ್ತು.

ವಿದ್ಯಾರ್ಥಿಗಳಿಗೆ ಈ ಆಹಾರ ಮೇಳ ವಿವಿಧ ರೀತಿಯಿಂದ ಅನುಕೂಲವಾಯಿತು. ಈ ಆಹಾರ ಮೇಳಕ್ಕಾಗಿ ವಿದ್ಯಾರ್ಥಿಗಳು ಸತತ ಎರಡು ತಿಂಗಳಿನಿಂದ ಸಿದ್ಧತೆ ನಡೆಸಿಕೊಂಡಿದ್ದಾರೆ.

ಅವರಿಗೆ ಮಾರ್ಕೆಟಿಂಗ್, ಇವೆಂಟ್ ಮ್ಯಾನೇಜ್ ಮೆಂಟ್, ಫುಡ್ ಪ್ರೊಡಕ್ಷನ್ ಎಲ್ಲದರ ಬಗ್ಗೆಯೂ ಸ್ಪಷ್ಟ ಚಿತ್ರಣವನ್ನು ಈ ಸಮಾರಂಭ ನೀಡಿತು ಎಂದು ವಿದ್ಯಾರ್ಥಿಗಳ ಪ್ರಯತ್ನವನ್ನು ಪ್ರಶಂಸಿಸಿದರು ಪ್ರಿನ್ಸಿಪಾಲರಾದ ಆಂಟನಿ ಮಹೇಂದ್ರನ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.