ರಾಮನಗರ: ಶಾಲೆಗಳು ಆರಂಭವಾಗಿ ತಿಂಗಳು ಕಳೆದರೂ ಕೆಲ ತರಗತಿಗಳ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕ ವಿತರಿಸುವಲ್ಲಿ ಸರ್ಕಾರ ವಿಫಲವಾಗಿದೆ. ಇದರಿಂದ ಹಲವು ತರಗತಿಗಳ ವಿದ್ಯಾರ್ಥಿಗಳು ಪಠ್ಯ ಪುಸ್ತಕಗಳೇ ಇಲ್ಲದೆ ತಿಂಗಳಿನಿಂದ ಶಾಲೆಯಲ್ಲಿ ವ್ಯಾಸಂಗ ಮಾಡುವಂತಾಗಿದೆ.

ಅದರಲ್ಲಿಯೂ ಆರು ಮತ್ತು ಒಂಬತ್ತನೇ ತರಗತಿ ಇಂಗ್ಲಿಷ್ ಮಾಧ್ಯಮದ ವಿದ್ಯಾರ್ಥಿಗಳು ಪ್ರಮುಖವಾಗಿ ಪಠ್ಯ ಪುಸ್ತಕದ ಕೊರತೆ ಎದುರಿಸುತ್ತಿದ್ದಾರೆ. ಪಠ್ಯ ಸರಬರಾಜು ಆಗದ ಕಾರಣಕ್ಕೆ ಈ ವಿದ್ಯಾರ್ಥಿಗಳಿಗೆ ಶಾಲೆಗಳಲ್ಲಿ ಪಠ್ಯದ ಪಾಠದ ಬದಲಿಗೆ ಸೇತುಬಂಧ ಕಾರ್ಯಕ್ರಮವೇ ಮುಂದುವರೆದಿದೆ.

ಜಿಲ್ಲೆಯಲ್ಲಿ 6ನೇ ತರಗತಿಯ ಇಂಗ್ಲಿಷ್ ಮಾಧ್ಯಮ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಮತ್ತು ಹಿಂದಿ ಭಾಷಾ ಪುಸ್ತಕಗಳು ಮಾತ್ರ ಪೂರೈಕೆಯಾಗಿವೆ. ಉಳಿದಂತೆ ಕನ್ನಡ, ಸಮಾಜ ವಿಜ್ಞಾನ, ವಿಜ್ಞಾನ ಹಾಗೂ ಗಣಿತ (ಕೋರ್-1 ಮತ್ತು 2) ಪುಸ್ತಕಗಳು ಪೂರೈಕೆಯಾಗಿಲ್ಲ. ಅದೇ ರೀತಿ 9ನೇ ತರಗತಿಯ ಸಮಾಜ ವಿಜ್ಞಾನ ಪುಸ್ತಕಗಳು ಪೂರೈಕೆಯಾಗಿಲ್ಲ. ಪುಸ್ತಕಗಳೇ ಇಲ್ಲದೆ ಪಾಠ ಪ್ರವಚನ ಮಾಡುವುದಾದರೂ ಹೇಗೆ ಎಂದು ರಾಮನಗರದ ಪಟೇಲ್ ಶಾಲೆಯ ಸಂಸ್ಥಾಪಕ ಕಾರ್ಯದರ್ಶಿ ರಾಜು `ಪ್ರಜಾವಾಣಿ' ಬಳಿ ಅಸಮಾಧಾನ ವ್ಯಕ್ತಪಡಿಸಿದರು.

ಪ್ರಸಕ್ತ ಶೈಕ್ಷಣಿಕ ಸಾಲಿನಿಂದ 1, 2, 6 ಹಾಗೂ 9ನೇ ತರಗತಿ ಪಠ್ಯವನ್ನು ಸರ್ಕಾರ ಬದಲಿಸಿದೆ. ಆದರೆ ಹೊಸ ಪಠ್ಯಕ್ರಮದ ಪುಸ್ತಕಗಳನ್ನು ಸರಿಯಾದ ಸಂದರ್ಭದಲ್ಲಿ ಸರಬರಾಜು ಮಾಡದೆ ಸರ್ಕಾರ ವಿದ್ಯಾರ್ಥಿ ಜೀವನದಲ್ಲಿ ಚಲ್ಲಾಟವಾಡುತ್ತಿದೆ ಎಂದು ಅವರು ದೂರಿದರು.

ಬೇಡಿಕೆ ಮತ್ತು ಹಣ ಪಾವತಿಸಿ 6 ತಿಂಗಳಾಗಿದೆ: 1 ಮತ್ತು 2ನೇ ತರಗತಿಯ ಬಹುತೇಕ ಪಠ್ಯ ಪುಸ್ತಗಳು ಪೂರೈಕೆಯಾಗಿವೆ. ಆದರೆ 6 ಮತ್ತು 9ನೇ ತರಗತಿ ಪುಸ್ತಕಗಳ ಸರಬರಾಜು ವಿಳಂಬವಾಗುತ್ತಿದೆ. ಶಾಲೆಯಲ್ಲಿ 6ನೇ ತರಗತಿಗೆ ಎಲ್ಲ ವಿಷಯ ಪುಸ್ತಕಗಳ ತಲಾ 60 ಪ್ರತಿಗಳು ಹಾಗೂ 9ನೇ ತರಗತಿಗೆ ಎಲ್ಲ ವಿಷಯಗಳ 23 ಪ್ರತಿಗಳು ಬೇಕು ಎಂದು ಜನವರಿಯಲ್ಲಿಯೇ ಬೇಡಿಕೆ ಪಟ್ಟಿ ಕೊಟ್ಟು, ನಿರ್ದಿಷ್ಟ ಮೊತ್ತದ ಹಣವನ್ನು ಡಿ.ಡಿ ರೂಪದಲ್ಲಿ ಪಾವತಿಸಲಾಗಿದೆ. ಹಣ ಪಡೆದ ಸರ್ಕಾರ ಆರು ತಿಂಗಳಾದರೂ ಪಠ್ಯವನ್ನು ಮಾತ್ರ ಒದಗಿಸಿಲ್ಲ. ಇದರಿಂದ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ತೊಡಕಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಅಲ್ಲದೆ ಇಲ್ಲಿವರೆಗೆ ಸರಬರಾಜು ಆಗಿರುವ ಇತರ ತರಗತಿಗಳ ಪಠ್ಯಪುಸ್ತಕದಲ್ಲಿ ಮುದ್ರಣ ದೋಷಗಳೂ ಆಗಿವೆ. ಕೆಲ ಪುಸ್ತಕಗಳಲ್ಲಿ ಕೆಲವು ಪುಠಗಳೇ ಮುದ್ರಣವಾಗಿಲ್ಲ. ಅಲ್ಲದೆ ಇನ್ನೂ ಕೆಲ ಪುಸ್ತಕಗಳು ಹರಿದ ಸ್ಥಿತಿಯಲ್ಲಿ ಲಭ್ಯವಾಗಿವೆ. ಇಂತಹ ಪುಸ್ತಕಗಳನ್ನು ವಿದ್ಯಾರ್ಥಿಗಳಿಗೆ ವ್ಯಾಸಂಗಕ್ಕಾಗಿ ಕೊಡುವುದಾದರೂ ಹೇಗೆ ಎಂದು ಅವರು ಕಿಡಿಕಾರಿದರು.

ರಾಮನಗರದ ಶಾಸಕರೂ ಆಗಿರುವ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರು ಈ ಕುರಿತು ಧ್ವನಿಯೆತ್ತಬೇಕು. ವಿದ್ಯಾರ್ಥಿಗಳಿಗೆ ಆಗುತ್ತಿರುವ ಅನ್ಯಾಯ ಸರಿಪಡಿಸಲು ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದು ಅವರು ಒತ್ತಾಯಿಸಿದರು.

ಬೇಕಿರುವ ಪಠ್ಯ ಪುಸ್ತಗಳು: ಸಾರ್ವಜನಿಕ ಶಿಕ್ಷಣ ಇಲಾಖೆಯ ಜಿಲ್ಲಾ ಉಪ ನಿರ್ದೇಶಕರ ಕಚೇರಿಯ ಮಾಹಿತಿಯ ಪ್ರಕಾರ 6ನೇ ತರಗತಿಯ ಪ್ರಥಮ ಭಾಷೆ ಕನ್ನಡ ವಿಷಯದಲ್ಲಿ 10,765 ಪುಸ್ತಕ, ಇಂಗ್ಲಿಷ್ 11,561 (ಉಚಿತ ವಿತರಣೆ) ಹಾಗೂ ಕನ್ನಡ 3637, ಇಂಗ್ಲಿಷ್ 4363 (ಅನುದಾನ ರಹಿತ ಶಾಲೆಗಳಿಗೆ) ಪುಸ್ತಕಗಳು ಮಾರಾಟದ ಮೂಲಕ ವಿತರಣೆಯಾಗಬೇಕು. ಅವಿನ್ನೂ ಜಿಲ್ಲೆಗೆ ಬಂದಿಲ್ಲ. ಅದೇ ರೀತಿಯ ಮಾರಾಟದ ಮೂಲಕ ವಿತರಣೆಯಾಗಬೇಕಿರುವ 6ನೇ ತರಗತಿಯ ಸಮಾಜ ವಿಜ್ಞಾನ, ವಿಜ್ಞಾನ, ಗಣಿತ ವಿಷಯಗಳ 4,364, ದೈಹಿಕ ಶಿಕ್ಷಣ 3,114 ಪುಸ್ತಕಗಳ ಸರಬರಾಜು ಆಗಬೇಕು.

ಅಲ್ಲದೆ 9ನೇ ತರಗತಿ ಸಮಾಜ ವಿಜ್ಞಾನ 11,033, 10ನೇ ತರಗತಿಯ ಹಿಂದಿ ವಿಷಯದ 4,525, 4ನೇ ತರಗತಿಯ ಇಂಗ್ಲಿಷ್ 10,381, 3ನೇ ತರಗತಿಯ ನಲಿ ಕಲಿಯ ಪರಿಸರ ಅಧ್ಯಯನ ವಿಷಯದ 8,177 ಹಾಗೂ ನಲಿ ಕಲಿ ಕನ್ನಡ 6,147 ಪುಸ್ತಕಗಳು ಜಿಲ್ಲೆಗೆ ಸರಬರಾಜು ಆಗಬೇಕಿವೆ ಎಂದು ಕಚೇರಿಯ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಉಪ ನಿರ್ದೇಶಕರ ಪ್ರತಿಕ್ರಿಯೆ: ಜಿಲ್ಲೆಯಲ್ಲಿ ಶೇ 80ರಷ್ಟು ಪಠ್ಯ ಪುಸ್ತಕಗಳು ಪೂರೈಕೆಯಾಗಿವೆ. ಇನ್ನೂ ಶೇ 20ರಷ್ಟು ಮಾತ್ರ ಪೂರೈಕೆ ಆಗಬೇಕಿವೆ. ಈ ಪುಸ್ತಕಗಳು ವಾರದಲ್ಲಿ ಜಿಲ್ಲೆಗೆ ತಲುಪಲಿದ್ದು, ವಿತರಣೆಯ ವ್ಯವಸ್ಥೆ ಮಾಡಲಾಗುವುದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಜಿಲ್ಲಾ ಉಪ ನಿರ್ದೇಶಕ ಪ್ರಹ್ಲಾದ್ ಗೌಡ `ಪ್ರಜಾವಾಣಿ'ಗೆ ಪ್ರತಿಯಿಸಿದರು.

ಉಚಿತವಾಗಿ ವಿತರಿಸುವ ಪುಸ್ತಕಗಳಲ್ಲಿ 1ನೇ ತರಗತಿಯ ಗಣಿತ, 3ನೇ ತರಗತಿಯ ಪರಿಸರ ಅಧ್ಯಯನ, 4ನೇ ತರಗತಿಯ ಇಂಗ್ಲಿಷ್, 5ನೇ ತರಗತಿಯ ಕನ್ನಡ ಪುಸ್ತಕಗಳು ಇನ್ನೂ ಪೂರೈೆ ಆಗಬೇಕಿವೆ. ಅಲ್ಲದೆ ಮಾರಾಟದ ಮೂಲಕ ವಿತರಣೆ ಆಗುವ (ಅನುದಾನ ರಹಿತ ಶಾಲೆಗಳಿಗೆ) ಪುಸ್ತಗಳಲ್ಲಿ 1ನೇ ತರಗತಿ ಇಂಗ್ಲಿಷ್, 2ನೇ ತರಗತಿ ಪರಿಸರ ಅಧ್ಯಯನ, 4ನೇ ತರಗತಿ ಪರಿಸರ ಅಧ್ಯಯನ, 6ನೇ ತರಗತಿ ಗಣಿತ, ವಿಜ್ಞಾನ, ಸಮಾಜ ವಿಜ್ಞಾನ, 9ನೇ ತರಗತಿಯ ಸಮಾಜ ವಿಜ್ಞಾನ ಪುಸ್ತಕಗಳ ಸರಬರಾಜು ಆಗಬೇಕಿವೆ ಎಂದು ಮಾಹಿತಿ ನೀಡಿದರು.

ಪುಸ್ತಕಗಳ ವಿತರಕರು ಮತ್ತು ಪ್ರಕಾಶಕರ ಜತೆ ನಿಟಕ ಸಂಪರ್ಕ ಹೊಂದಲಾಗಿದೆ. ನಾಲ್ಕರಿಂದ ಐದು ದಿನದಲ್ಲಿ ಎಲ್ಲ ಪುಸ್ತಕಗಳು ಬರಲಿವೆ ಎಂಬ ನಿರೀಕ್ಷೆ ಇದೆ. ಹೊಸ ಪಠ್ಯಕ್ರಮದ ಪುಸ್ತಕಗಳಾದ್ದರಿಂದ ತಡವಾಗಿರಬಹುದು ಎಂದು ಅವರು ವಿವರಿಸಿದರು. ಶಾಲೆ ಆರಂಭದ ದಿನದಿಂದ 15 ದಿನ ಸೇತುಬಂಧ ಕಾರ್ಯಕ್ರಮದ ಮೂಲಕ ಹಿಂದಿನ ತರಗತಿಗಳ ವಿಷಯದ ಪುನರಾವರ್ತನೆ ಮಾಡುವಂತೆ ಸೂಚಿಸಲಾಗಿದೆ. ಶೀಘ್ರದಲ್ಲಿಯೇ ಎಲ್ಲ ಪುಸ್ತಕಗಳು ಲಭ್ಯವಾಗುವುದರಿಂದ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಯಾವುದೇ ತೊಂದರೆ ಆಗುವುದಿಲ್ಲ ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.