ಸೋಮವಾರ, ಏಪ್ರಿಲ್ 12, 2021
29 °C

ವಿದ್ಯಾರ್ಥಿಗಳ ಸಾಮೂಹಿಕ ಗೈರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಳಂದೂರು: ತಾಲ್ಲೂಕಿನ ಕೃಷ್ಣಾಪುರ ಗ್ರಾಮದಲ್ಲಿ ಸರ್ಕಾರಿ ಖರಾಬ್ ಜಾಗವನ್ನು ಶಾಲೆಗೆ ಬಿಟ್ಟುಕೊಡ ಬೇಕು ಎಂದು ಆಗ್ರಹಿಸಿ ಗ್ರಾಮಸ್ಥರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸದೇ ತರಗತಿ ಬಹಿಷ್ಕರಿಸಿದ ಘಟನೆ ಸೋಮವಾರ ಜರುಗಿದೆ.ಗ್ರಾಮದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 1ನೇ ತರಗತಿಯಿಂದ 7ನೇ ತರಗತಿವರೆಗೆ ಒಟ್ಟು 113 ವಿದ್ಯಾರ್ಥಿಗಳು ವ್ಯಾಸಂಗ ಮಾಡು ತ್ತಿದ್ದಾರೆ. ಆದರೆ ಸೋಮವಾರ ತರಗತಿಗೆ ಹಾಜರಾದ ಶಿಕ್ಷಕರು ವಿದ್ಯಾರ್ಥಿಗಳು ಬಾರದೇ ಇದ್ದುದನ್ನು ಗಮನಿಸಿ ವಿಚಾರಿಸಿದಾಗ ತರಗತಿ ಬಹಿಷ್ಕಾರದ ಅಂಶ ಗಮನಕ್ಕೆ ಬಂದಿದೆ.ಸರ್ವೇ ನಂ. 691 ರಲ್ಲಿರುವ 1.11 ಎಕರೆ ಜಮೀನನ್ನು ಸರ್ಕಾರಿ ಖರಾಬ್ ಜಮೀನಾಗಿದೆ. ಈ ಜಾಗವನ್ನು ಶಾಲೆಗೆ ಬಿಟ್ಟುಕೊಡಬೇಕು ಎಂಬುದು ಗ್ರಾಮಸ್ಥರ ಹಲವು ವರ್ಷಗಳ ಬೇಡಿಕೆಯಾಗಿತ್ತು. ಈ ಬಗ್ಗೆ ತಹಶೀಲ್ದಾರ್,  ಉಪವಿಭಾಗಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿಯನ್ನೂ ಮಾಡಲಾಗಿತ್ತು.ಆದರೆ ಸರ್ಕಾರದಿಂದ ಕೇವಲ 8 ಗುಂಟೆ ಜಮೀನು ಮಾತ್ರ ಶಾಲೆಗೆ ಬಿಡಲಾಗ್ದ್ದಿದು, ಇನ್ನುಳಿದ ಜಮೀನು ಖಾಸಗಿ ವ್ಯಕ್ತಿಯೊಬ್ಬರು ಅನುಭವಿಸಿಕೊಂಡು ಬರುತ್ತಿದ್ದಾರೆ. ಇದೂ ಸಹ ಶಾಲೆಗೆ ಸೇರಬೇಕು ಎಂಬುದು ಇಲ್ಲಿನ ವಾಸಿಗಳ ಬೇಡಿಕೆ.ಹಾಗಾಗಿ ಜಮೀನಿನ ವಿಚಾರ ತೀರ್ಮಾನವಾಗು ವವರೆಗೂ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುವುದಿಲ್ಲ ಎಂದು ಗ್ರಾಮದ ಮುಖಂಡರು ತಿಳಿಸಿದ್ದಾರೆ.ಶಾಲೆಗೆ ವಿದ್ಯಾರ್ಥಿಗಳು ಸಾಮೂಹಿಕವಾಗಿ ಗೈರು ಹಾಜರಾದ ಹಿನ್ನೆಲೆಯಲ್ಲಿ ಇಲ್ಲಿನ ಶಿಕ್ಷಕರು ಸುಮ್ಮನೇ ಕುಳಿತೇ ಕಾಲ ಕಳೆಯುವ ಸ್ಥಿತಿ ನಿರ್ಮಾಣವಾಗಿತ್ತು.ಅಂಗನವಾಡಿಯಲ್ಲೂ ಕಾಣ ಸಿಗದ ಚಿಣ್ಣರು: ಇದೇ ಶಾಲೆಯ ಆವರಣದಲ್ಲೇ ಅಂಗನವಾಡಿ ಕೇಂದ್ರವಿದೆ, ಇಲ್ಲಿ 19 ಮಕ್ಕಳು ಬರುತ್ತಾರೆ. ಇದಲ್ಲದೆ ಖಾಸಗಿ ಕಟ್ಟಡದಲ್ಲೂ ಅಂಗನವಾಡಿ ಕೇಂದ್ರ ನಡೆಯುತ್ತದೆ. ಇಲ್ಲೂ ಸಹ 15 ಮಕ್ಕಳು ಬರುತ್ತಾರೆ. ಆದರೆ ಸೋಮವಾರ ಮಾತ್ರ ಇಲ್ಲಿಗೂ ಸಹ ಯಾರೊಬ್ಬರೂ ಬಂದಿರಲಿಲ್ಲ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.