ಬುಧವಾರ, ಮೇ 25, 2022
23 °C
ಪಂಚರಂಗಿ

ವಿದ್ಯಾ ಜೊತೆಗೂಡಿದ ದಿಯಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಟಿ ಹಾಗೂ ನಿರ್ಮಾಪಕಿ ದಿಯಾ ಮಿರ್ಜಾ ಅವರು ತಮ್ಮದೇ ಬ್ಯಾನರ್‌ನಲ್ಲಿ ಸಿದ್ಧಗೊಳ್ಳುತ್ತಿರುವ ಚಿತ್ರಗಳಲ್ಲಿ ಮುಳುಗಿದ್ದಾರೆ. ಈ ನಡುವೆಯೇ ಅವರ ಮುಂದಿನ ಚಿತ್ರದಲ್ಲಿ `ಕಹಾನಿ' ನಟಿ ವಿದ್ಯಾ ಬಾಲನ್ ಅವರ ಜತೆ ನಟಿಸುತ್ತಿರುವ ಕುರಿತು ಅವರು ಅತೀವ ಸಂತಸ ವ್ಯಕ್ತಪಡಿಸಿದ್ದಾರೆ.`ಬಾರ್ನ್ ಫ್ರೀ ಎಂಟರ್‌ಟೈನ್‌ಮೆಂಟ್' ಎಂಬ ನಿರ್ಮಾಣ ಸಂಸ್ಥೆಯನ್ನು ತಮ್ಮ ಗೆಳೆಯ ಸಾಹಿಲ್ ಸಂಘ ಅವರ ಜತೆಗೂಡಿ ಹುಟ್ಟುಹಾಕಿರುವ ದಿಯಾ `ಲವ್ ಬ್ರೇಕ್ಸ್‌ಅಪ್ ಜಿಂದಗಿ' ಚಿತ್ರ ನಿರ್ಮಿಸುವುದರ ಮೂಲಕ ನಿರ್ಮಾಪಕಿಯಾಗಿ ಬದಲಾದರು.

`ವಿದ್ಯಾ ಅವರೊಂದಿಗೆ ನಟಿಸುತ್ತಿರುವುದಕ್ಕೆ ಆನಂದವಾಗುತ್ತಿದೆ.

ಆಕೆ ಒಬ್ಬ ಉತ್ತಮ ಸ್ನೇಹಿತೆ ಮಾತ್ರವಲ್ಲ, ಅದ್ಭುತ ಸಾಮರ್ಥ್ಯವುಳ್ಳವರು. ಅವರ ಜತೆಗಿರಲು ಸಲೀಸು. ಹಾಗೆಯೇ ಕ್ಯಾಮೆರಾ ಎದುರು ನಿಂತರೆ ಅವರೊಬ್ಬ ದೈತ್ಯ ನಟಿ' ಎಂದು ವಿದ್ಯಾ ಕುರಿತು ದಿಯಾ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಕೇವಲ ವಿದ್ಯಾ ಕುರಿತು ಮಾತ್ರವಲ್ಲದೆ ಹುಮಾ ಖುರೇಷಿ ಹಾಗೂ ರಿಚಾ ಚಡ್ಡಾ ಅವರೂ ಅದ್ಭುತ ನಟಿಯರು ಎಂದು ದಿಯಾ ಬಣ್ಣಿಸಿದ್ದಾರೆ.ತಮ್ಮ ನಿರ್ಮಾಣದಲ್ಲಿ ತಯಾರಾಗುತ್ತಿರುವ ಚಿತ್ರಗಳು ಇನ್ನೂ ಆರಂಭಿಕ ಹಂತದಲ್ಲಿರುವುದಾಗಿ ಹೇಳಿರುವ ದಿಯಾ, ಅಕ್ಟೋಬರ್ ತಿಂಗಳಿಂದ ಯೋಜನೆ ಆರಂಭಗೊಳ್ಳಲಿದೆ ಎಂದು ತಿಳಿಸಿದ್ದಾರೆ. ಮನುಷ್ಯರ ನಡುವಿನ ಸಂಬಂಧಗಳ ಕುರಿತು ಹೆಣೆಯಲಾಗಿರುವ ಮೂರು ಸಿನಿಮಾಗಳು ಮುಂದಿನ ವರ್ಷದ ಮಧ್ಯದಲ್ಲಿ ಬಿಡುಗಡೆಯಾಗುವ ವಿಶ್ವಾಸವನ್ನು ದಿಯಾ ವ್ಯಕ್ತಪಡಿಸಿದ್ದಾರೆ.ಮಾನವಾಸಕ್ತಿ ಇರುವ ಈ ಚಿತ್ರಗಳ ಚಿತ್ರಕಥೆ ಬರೆಯುತ್ತಿರುವವರಿಗೆ ಚಿತ್ರಕಥೆಯ ಮೇಲೆ ಕೆಲಸ ಮಾಡಲು ಒಂದರಿಂದ ಒಂದೂವರೆ ವರ್ಷಗಳ ಕಾಲಾವಕಾಶ ನೀಡಲಾಗಿದೆ. ಈಗಿನ ಚಿತ್ರಗಳು ತರಾತುರಿಯಲ್ಲಿ ಸಿದ್ಧಗೊಳ್ಳುತ್ತಿವೆ. ಆದರೆ ನಾವು ಹಾಗೆ ಮಾಡದೆ ಬಹಳ ಎಚ್ಚರವಹಿಸಿ, ಕಥೆಯ ಮೇಲೆ ಸಾಕಷ್ಟು ಕೆಲಸ ಮಾಡುತ್ತಿದ್ದೇವೆ.

ಹೇಳುವ ಕಥೆಯನ್ನು ವಿಭಿನ್ನ ರೀತಿಯಲ್ಲಿ ಹೇಳುವ ಪ್ರಯತ್ನ ನಡೆಸಲಾಗಿದೆ' ಎಂದಿರುವ ದಿಯಾ ತಮ್ಮ ಚಿತ್ರಗಳಲ್ಲಿ ತಾನು ನಾಯಕಿಯಾಗಿ ನಟಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.