ಗುರುವಾರ , ಜೂನ್ 17, 2021
29 °C

ವಿದ್ಯುತ್‌ಗೆ 23.8 ಕೋಟಿ ವೆಚ್ಚ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: 2009-10 ಮತ್ತು 2010-11ನೇ ಸಾಲಿನಲ್ಲಿ ರಾಜ್ಯ ಸರ್ಕಾರ ವಿವಿಧ ಮೂಲಗಳಿಂದ ವಿದ್ಯುತ್ ಖರೀದಿಗಾಗಿ 23,872.48 ಕೋಟಿ ರೂಪಾಯಿ ವೆಚ್ಚ ಮಾಡಿದೆ.ಎರಡೂ ವರ್ಷಗಳಲ್ಲಿ ಒಟ್ಟು 90,997 ದಶಲಕ್ಷ ಯೂನಿಟ್ ವಿದ್ಯುತ್ ಖರೀದಿಸಲಾಗಿದೆ. ಈ ಉದ್ದೇಶಕ್ಕಾಗಿ ಇಷ್ಟೊಂದು ದೊಡ್ಡ ಪ್ರಮಾಣದ ಹಣವನ್ನು ವಿನಿಯೋಗಿಸಲಾಗಿದೆ. ವಿಧಾನ ಪರಿಷತ್‌ನಲ್ಲಿ ಸೋಮವಾರ ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿ ಸದಸ್ಯ ಅಶ್ವತ್ಥನಾರಾಯಣ ಅವರ ಪ್ರಶ್ನೆಗೆ ನೀಡಿರುವ ಉತ್ತರದಲ್ಲಿ ಇಂಧನ ಸಚಿವೆ ಶೋಭಾ ಕರಂದ್ಲಾಜೆ ಈ ವಿವರ ಒದಗಿಸಿದ್ದಾರೆ.2009-10ರಲ್ಲಿ ಸರ್ಕಾರಿ ಮೂಲಗಳಿಂದ 35,790 ದಶಲಕ್ಷ ಯೂನಿಟ್, ಖಾಸಗಿ ವಲಯದ ಬೃಹತ್ ಸ್ವತಂತ್ರ ವಿದ್ಯುತ್ ಉತ್ಪಾದಕರು ಮತ್ತು ಅಸಂಪ್ರದಾಯಿಕ ಉತ್ಪಾದನಾ ಘಟಕಗಳಿಂದ 5,929 ದಶಲಕ್ಷ ಯೂನಿಟ್, ಇತರೆ ಮೂಲಗಳಿಂದ 1,570 ದಶಲಕ್ಷ ಯೂನಿಟ್ ಸೇರಿದಂತೆ ಒಟ್ಟು 43,289 ದಶಲಕ್ಷ ಯೂನಿಟ್ ವಿದ್ಯುತ್ ಖರೀದಿಸಲಾಗಿದೆ. ಇದಕ್ಕಾಗಿ ಒಟ್ಟು 10,205.15 ಕೋಟಿ ವೆಚ್ಚ ಮಾಡಲಾಗಿದೆ.2010-11ರಲ್ಲಿ ಸರ್ಕಾರಿ ಮೂಲಗಳಿಂದ 32,546 ದಶಲಕ್ಷ ಯೂನಿಟ್, ಖಾಸಗಿ ವಲಯದ ಬೃಹತ್ ಸ್ವತಂತ್ರ ವಿದ್ಯುತ್ ಉತ್ಪಾದಕರು ಮತ್ತು ಅಸಂಪ್ರದಾಯಿಕ ಉತ್ಪಾದನಾ ಘಟಕಗಳಿಂದ 8,058 ದಶಲಕ್ಷ ಯೂನಿಟ್, ಇತರೆ ಮೂಲಗಳಿಂದ 7,104 ದಶಲಕ್ಷ ಯೂನಿಟ್ ಸೇರಿ ಒಟ್ಟು 47,708 ದಶಲಕ್ಷ ಯೂನಿಟ್ ವಿದ್ಯುತ್ ಖರೀದಿ ನಡೆದಿದೆ. ಒಟ್ಟು ರೂ 13,667.33 ಕೋಟಿ ವೆಚ್ಚ ಮಾಡಲಾಗಿದೆ ಎಂದು ಇಂಧನ ಸಚಿವೆ ಉತ್ತರದಲ್ಲಿ ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.