ವಿದ್ಯುತ್ ಕಡಿತ: ಸಿಂಧ್ಯ ಖಂಡನೆ

7

ವಿದ್ಯುತ್ ಕಡಿತ: ಸಿಂಧ್ಯ ಖಂಡನೆ

Published:
Updated:

ಬೆಂಗಳೂರು: ಸರ್ಕಾರ ಗ್ರಾಮಾಂತರ ಪ್ರದೇಶಗಳಲ್ಲಿ 9ಗಂಟೆಗಳ ಕಾಲ ವಿದ್ಯುತ್ ಕಡಿತಗೊಳಿಸಿರುವುದನ್ನು ಜೆಡಿಎಸ್ ರಾಜ್ಯ ಘಟಕದ ಕಾರ್ಯಾಧ್ಯಕ್ಷ ಪಿ.ಜಿ.ಆರ್ ಸಿಂಧ್ಯ ಖಂಡಿಸಿದ್ದಾರೆ.

 

ಸರ್ಕಾರದ ಈ ಕ್ರಮ ರೈತ ವಿರೋಧಿ ಧೋರಣೆಯಾಗಿದೆ. ವಿದ್ಯುತ್ ಕಡಿತಗೊಂಡರೆ ರೈತರ ಬೆಳೆ ನಾಶವಾಗುತ್ತದೆ. 9ಗಂಟೆಗೆ ಬದಲಾಗಿ 2ಗಂಟೆಗಳ ಕಾಲ ವಿದ್ಯುತ್ ಕಡಿತ ಮಾಡುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಬೆಂಗಳೂರು ಸುತ್ತಲಿನ ಪ್ರದೇಶಗಳಾದ ಕನಕಪುರ, ರಾಮನಗರ ಮತ್ತು ಚನ್ನಪಟ್ಟಣ ತಾಲ್ಲೂಕು ಕೇಂದ್ರಗಳು ಕೂಡ ಕೃಷಿ ಹಾಗೂ ಕೈಗಾರಿಕೆಯ ಪ್ರದೇಶಗಳಾಗಿದ್ದು, ಈ ಪ್ರದೇಶಗಳಲ್ಲಿ ಲೋಡ್ ಶೆಡ್ಡಿಂಗ್ ಮಾಡದಂತೆ ಮುಖ್ಯಮಂತ್ರಿಗಳನ್ನು ಒತ್ತಾಯಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry