ಹಳೇಬೀಡು: ಮೂರು ದಿನಗಳಿಂದ ಸಮರ್ಪಕವಾಗಿ ವಿದ್ಯುತ್ ಪೂರೈಕೆಯಾ ಗದೆ ಇರುವುದರಿಂದ ಹಲವು ಬೆಳೆಗಳಿಗೆ ಹಾನಿಯಾಗಿದೆ.

ವಿದ್ಯುತ್ ಅಭಾವದ ಜೊತೆಗೆ ಮಳೆ ಇಲ್ಲದೆ ಬಿಸಿಲಿನ ತಾಪ ಹೆಚ್ಚಾಗಿರು ವುದರಿಂದ ಬೆಳೆಗಳು ಬಾಡುತ್ತಿವೆ. ಬೆಳೆಗಳು ಒಣಗುವ ಹಂತ ತಲುಪಿವೆ. ಮಳೆ ಹಾಗೂ ವಿದ್ಯುತ್ ಕ್ಷಾಮದಿಂದ ರೈತವರ್ಗ ಕಣ್ಣೀರಲ್ಲಿ ಕೈತೊಳೆಯು ವಂತಾಗಿದೆ.

`ಸೆಸ್ಕ್ನವರು ಮಾಹಿತಿ ನೀಡದೆ ಬೇಕಾಬಿಟ್ಟಿ ವಿದ್ಯುತ್ ಸರಬರಾಜು ಮಾಡುತ್ತಿರುವುದರಿಂದ ಬೆಳೆಗಳಿಗೆ ನೀರುಣಿಸಲು ದಿನವಿಡಿ ಜಮೀನಿನಲ್ಲಿ ಕಾಯುವಂತಾಗಿದೆ. ಮನೆಗೆ ಬಂದಾಗ ವಿದ್ಯುತ್ ಬಂದರೆ ಪುನಃ ಹೊಲಕ್ಕೆ ಹೋಗುವುದರಲ್ಲಿ ನಾಪತ್ತೆ ಯಾಗುತ್ತದೆ. ದಿನದಲ್ಲಿ ಕನಿಷ್ಠ ಮೂರು ಗಂಟೆಯೂ ಗುಣಮಟ್ಟದ ವಿದ್ಯುತ್ ಸರಬರಾಜಾಗುತ್ತಿಲ್ಲ~ ಎಂಬುದು ರೈತರ ಅಳಲು.

ವಿದ್ಯುತ್ ಕಣ್ಣಾಮುಚ್ಚಾಲೆಯಿಂದ ವಿದ್ಯಾರ್ಥಿಗಳು ರಾತ್ರಿ ಅಭ್ಯಾಸ ಮಾಡಲು ತೊಂದರೆಯಾಗಿದೆ. ಅರ್ಧ ವಾರ್ಷಿಕ ಪರೀಕ್ಷೆ ಸಮಯದಲ್ಲಿಯೂ ವಿದ್ಯುತ್ ತೆಗೆಯುತ್ತಿರುವುದರಿಂದ ಪೋಷಕರು ಹಿಡಿಶಾಪ ಹಾಕುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.