ಶನಿವಾರ, ಜನವರಿ 18, 2020
19 °C

ವಿದ್ಯುತ್ ತಂತಿ ತಗುಲಿ ಇಬ್ಬರು ಮಕ್ಕಳ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆನೇಕಲ್‌:  ವಿದ್ಯುತ್‌ ತಂತಿ ತಗುಲಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ತಾಲ್ಲೂಕಿನ ಅತ್ತಿಬೆಲೆ ಸಮೀಪದ ಬಳಗಾರನಹಳ್ಳಿಯಲ್ಲಿ ನಡೆದಿದೆ.ಮೃತರನ್ನು ಅಸ್ಸಾಂ ಮೂಲದ ಜಿಂಟು­ದಾಸ್‌ (10) ಮತ್ತು ಮಧು­ಸ್ಮಿತ­ದಾಸ್‌ (06) ಎಂದು ಗುರುತಿಸ­ಲಾಗಿದೆ. ಇವರು ಅತ್ತಿಬೆಲೆ ಸಮೀಪದ ಖಾಸಗಿ ಕಾರ್ಖಾನೆಯ ಕಾರ್ಮಿಕ­ರಾಗಿದ್ದ ಅಸ್ಸಾಂ ಮೂಲದ ದೀಪಕ್‌­ದಾಸ್‌ ಮತ್ತು ಪ್ರಣೀತಾದಾಸ್‌ ದಂಪತಿಯ ಮಕ್ಕಳು.ಬಳಗಾರನಹಳ್ಳಿಯ ಶ್ರೀನಿವಾಸರೆಡ್ಡಿ ಬಡಾವಣೆ­ಯಲ್ಲಿ ತೆಂಗಿನ ಗರಿಯೊಂದು ವಿದ್ಯುತ್‌ ತಂತಿಯ ಮೇಲೆ ಬಿದ್ದ ಪರಿ­ಣಾಮ ವಿದ್ಯುತ್‌ ತಂತಿ ತುಂಡಾಗಿ ಬಿದ್ದಿದೆ. ಆಟವಾಡುತ್ತಿದ್ದ ಜಿಂಟು­ದಾಸ್‌, ಮಧುಸ್ಮಿತ ಬಯಲಿನ ಕಡೆ ಬಂದಿದ್ದಾರೆ, ಮಧುಸ್ಮಿತ ತುಂಡಾಗಿ ಬಿದ್ದಿದ್ದ ತಂತಿಯನ್ನು ಮುಟ್ಟಿದ್ದಾಳೆ. ವಿದ್ಯುತ್‌ ಸ್ಪರ್ಶವಾಗಿ ಕಿರುಚಿ­ಕೊಂಡಿ­ದ್ದಾಳೆ. ಇದರಿಂದ ಗಾಬರಿ­ಗೊಂಡ ಜಿಂಟು­ದಾಸ್‌ ತಂಗಿಯನ್ನು ಎಳೆದು­ಕೊಳ್ಳಲು ಹೋದಾಗ  ವಿದ್ಯುತ್‌ ತಗುಲಿ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಅತ್ತಿಬೆಲೆ ಪೊಲೀಸರು ತಿಳಿಸಿದ್ದಾರೆ.ದೀಪಕ್‌­ದಾಸ್‌ ದಂಪತಿ­ಗಿದ್ದ ಇಬ್ಬರು ಮಕ್ಕಳೂ ಮೃತ­ಪಟ್ಟಿದ್ದು ಕುಟುಂಬ ಕಂಗಾ­ಲಾ­ಗಿತ್ತು. ದಂಪತಿಯ ಗೋಳು ಮುಗಿಲು ಮುಟ್ಟಿತ್ತು. ಸ್ಥಳಕ್ಕೆ ಭೇಟಿ ನೀಡಿದ್ದ ಬೆಸ್ಕಾಂನ ಅತ್ತಿಬೆಲೆ ವೃತ್ತದ ಕಾರ್ಯ­ನಿರ್ವಾಹಕ ಎಂಜಿನಿಯರ್ ವಿಜಯ್‌­ಕುಮಾರ್‌ ಅವಘಡದಿಂದ ಮೃತಪಟ್ಟಿ­ರುವ ಮಕ್ಕಳ ಕುಟುಂಬಕ್ಕೆ ತಲಾ ₨ 2ಲಕ್ಷ  ಪರಿಹಾರ ನೀಡಲಾಗುವುದು ಎಂದು ಹೇಳಿದರು.

ಪ್ರತಿಕ್ರಿಯಿಸಿ (+)