ವಿದ್ಯುತ್ ಸಮಸ್ಯೆ ಪರಿಹರಿಸಲು ಆಗ್ರಹ
ಕಮಲಾಪುರ: ಗ್ರಾಮೀಣ ಪ್ರದೇಶದಲ್ಲಿ ದಿನಕ್ಕೆ ಸರಿಯಾಗಿ 10 ಗಂಟೆಯೂ ವಿದ್ಯುತ್ ಪೂರೈಸುತ್ತಿಲ್ಲವೆಂದು ದೂರಿ, ರೈತರಿಗೆ ರಾತ್ರಿಯಲ್ಲಿ ವಿದ್ಯುತ್ ಪೂರೈಸದೆ ಹಗಲು ಪೂರೈಸಲು ಆಗ್ರಹಿಸಿ ಜೆಸ್ಕಾಂ ಕಚೇರಿ ಎದುರು ಬುಧವಾರ ತಾಲ್ಲೂಕು ಪಂಚಾಯಿತಿ ಸದಸ್ಯ ಅಮೃತ ಗೌರೆ ನೇತೃತ್ವದಲ್ಲಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ಗ್ರಾಮೀಣ ಪ್ರದೇಶದಲ್ಲಿ ವಿದ್ಯಾರ್ಥಿಗಳಿಗೆ ಮತ್ತು ರೈತರಿಗೆ ಬೇಕಾದ ಸಮಯಕ್ಕೆ ವಿದ್ಯುತ್ ನೀಡಲಾಗುತ್ತಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಮನವಿ ಸ್ವಿಕರಿಸಿದ ಜೆಸ್ಕಾಂ ಅಧಿಕಾರಿ ರಾಜೇಶ ಹಿಪ್ಪರಗಿ, `ಇದು ನಮ್ಮ ನಿಮ್ಮ ಸಮಸ್ಯೆಯಲ್ಲ. ರಾಜ್ಯದಲ್ಲಿ ಮಳೆಯ ಅಭಾವದಿಂದ ಉಂಟಾಗಿರುವ ಸಮಸ್ಯೆ. ಸರ್ಕಾರದ ಆದೇಶದಂತೆ 3 ಫೇಸ್ ಹಗಲು ನಾಲ್ಕು ಗಂಟೆ, ರಾತ್ರಿಯಲ್ಲಿ ಎರಡು ಗಂಟೆ, ಸಿಂಗಲ್ ಫೇಸ್ ದಿನಕ್ಕೆ 6 ಗಂಟೆ ನೀಡುತ್ತೇವೆ~ ಎಂದು ಸಮಜಾಯಿಷಿ ನೀಡಿದರು.
ಗ್ರಾಮ ಪಂಚಾಯಿತಿ ಸದಸ್ಯ ದಾಸಿಮಯ, ಪುಂಡಲೀಕರಾವ ಚಿರಡೆ, ಯೋಗಪ್ಪ ಮಾಸ್ಟರ್, ಗುರುಸಿದ್ದಪ್ಪ ಮಾಡಗಿ, ರಬಿಯಾ ಬೇಗಂ, ವಿಜಯಲಕ್ಷ್ಮಿ ನಾಗೂರ, ಸುತ್ತಲಿನ ಹಳ್ಳಿಯ ರೈತರು ಪಾಲ್ಗೊಂಡಿದ್ದರು. ಕಮಲಾಪುರ ಸಬ್ ಇನ್ಸ್ಪೆಕ್ಟರ್ ಪಿ. ಬಿ. ಶಾಂತಿನಾಥ ಹಾಗೂ ಸಿಬ್ಬಂದಿ ಸೇರಿ ಬಂದೋಬಸ್ತ್ ಮಾಡಿದ್ದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.