ಮೆಲ್ಬರ್ನ್ (ಪಿಟಿಐ) : ನಿಲ್ದಾಣದಿಂದ ಹಾರಾಟ ಆರಂಭಿಸಿದ ವಿಮಾನದ ಡಾಷ್ ಬೋರ್ಡ್ ಮೇಲೆ ಹಾವೊಂದು ಕಾಣಿಸಿಕೊಂಡ ಕಾರಣ ಪೈಲಟ್ ವಿಮಾನವನ್ನು ತುರ್ತು ಭೂಸ್ಪರ್ಶ ಮಾಡಿದ ಘಟನೆ ಆಸ್ಟ್ರೇಲಿಯಾದಲ್ಲಿ ನಡೆದಿದೆ.

ಡಾರ್ವಿನ್ನಿಂದ ಉತ್ತರ ಕೇಂದ್ರಾಡಳಿತದ ಪಟ್ಟಣವೊಂದಕ್ಕೆ ಹೊರಟಿದ್ದ ವಿಮಾನ ಹಾರಾಟ ಆರಂಭಿಸಿ ಸುಮಾರು ಇಪ್ಪತ್ತು ನಿಮಿಷಗಳ ನಂತರ ಡ್ಯಾಷ್ ಬೋರ್ಡ್ನಿಂದ ಹಾವೊಂದು ಹೊರ ಬರಲು ಯತ್ನಿಸುತ್ತಿತ್ತು.

ಇದನ್ನು ಕಂಡ ಪೈಲಟ್ ಬ್ಲೆನ್ನೆರ್ ಹಸ್ಸೆಟ್ಟೆ ಗಾಬರಿಯಿಂದ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡಿದ. ಆದರೆ ಮಾಹಿತಿ ನೀಡಿ ಮಾತನಾಡುವ ಬಟನ್ (ಗುಂಡಿ) ಮೇಲೆ ಹಾವು ಹರಿದಾಡುತ್ತಿತ್ತು. ಹಾಗಾಗಿ ಪೈಲಟ್ ನಿಯಂತ್ರಣ ಕೊಠಡಿಗೆ ಸರಿಯಾಗಿ ಮಾಹಿತಿ ನೀಡಲು ಸಾಧ್ಯವಾಗಲಿಲ್ಲ.

ನಂತರ ಪೈಲಟ್ ವಿಮಾನವನ್ನು ತುರ್ತು ಭೂಸ್ಪರ್ಶ ಮಾಡಿದ. ತಾಂತ್ರಿಕ ಸಿಬ್ಬಂದಿ ಮತ್ತು ಹಾವು ಹಿಡಿಯುವ ವ್ಯಕ್ತಿಯನ್ನು ಕರೆಸಿ ವಿಮಾನದಲ್ಲಿ ತಪಾಸಣೆ ಮಾಡಲಾಯಿತಾದರೂ ಹಾವು ಕಾಣಿಸಿಕೊಳ್ಳಲಿಲ್ಲ. ಹಾವು ಪತ್ತೆಯಾಗುವವರೆಗೆ ವಿಮಾನ ಹಾರಾಟವನ್ನು ತಡೆಹಿಡಿಯಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.