ತುರುವೇಕೆರೆ: ಭಾರತೀಯ ಜೀವ ವಿಮಾ ನಿಗಮದ ಜೀವನ್ ಮಧುರ್ ಮೈಕ್ರೋ ವಿಮಾ ಯೋಜನೆಯಡಿ ಹಣ ತೊಡಗಿಸಿದ್ದ ತಾಲ್ಲೂಕಿನ ಸುಮಾರು 8 ಸಾವಿರ ಗ್ರಾಮೀಣ ಹೂಡಿಕೆದಾರರ ಕೋಟ್ಯಂತರ ರೂಪಾಯಿ ಹಣವನ್ನು ಮಧ್ಯವರ್ತಿ ಸಂಸ್ಥೆ ಗುಳುಂ ಮಾಡಿದೆ.
ಪಾಲಿಸಿದಾರರು ಸತ್ತರಷ್ಟೇ ದುಡ್ಡು ಎಂಬ ಸಂದಿಗ್ಧ ಪರಿಸ್ಥಿತಿಗೆ ಸಿಲುಕಿರುವ ಘಟನೆ ಬೆಳಕಿಗೆ ಬಂದಿದೆ.

2006ರಲ್ಲಿ ಕೇಂದ್ರ ಸರ್ಕಾರ ಗ್ರಾಮೀಣ ಪ್ರದೇಶದ ಬಡ ಜನರಿಗೆ ಸಣ್ಣ ಉಳಿತಾಯದ ಮೂಲಕ ವಿಮೆ ಸೌಲಭ್ಯ ಕಲ್ಪಿಸುವ ಮೈಕ್ರೋ ವಿಮಾ ಯೋಜನೆ ಜಾರಿಗೆ ತಂದಿತ್ತು.ಆಕಸ್ಮಿಕ ಮರಣ, ಅಪಘಾತ, ಅಂಗವೈಕಲ್ಯದ ಸಂದರ್ಭದಲ್ಲಿ ಬಡವರ ನೆರವಿಗೆ ಬರಲೆಂದೇ ಈ ಯೋಜನೆಯನ್ನು ವಿಶೇಷವಾಗಿ ರೂಪಿಸಲಾಗಿತ್ತು. ತಾಲ್ಲೂಕಿನಲ್ಲಿ `ಸಮನ್ವಯ' ಎಂಬ ಸರ್ಕಾರೇತರ ಸಂಸ್ಥೆ ನೂರಾರು ಪ್ರತಿನಿಧಿಗಳ ಮೂಲಕ ಈ ವಿಮೆಯ ಮಾರಾಟ ಮಾಡಿತ್ತು. ಬಹುತೇಕ ಅಂಗನವಾಡಿ ಕಾರ್ಯಕರ್ತೆಯರು ಶೇ 3ರ ಲಾಭಾಂಶದ ಆಧಾರದ ಮೇಲೆ ಈ ವಿಮಾ ಪಾಲಿಸಿಯ ಮಾರಾಟಕ್ಕೆ ಮುಂದಾಗಿದ್ದರು.

ಪಾಲಿಸಿದಾರರು ಪ್ರತಿ ತಿಂಗಳು ನಿರ್ದಿಷ್ಟ ಕಂತನ್ನು ತಮ್ಮ ಪ್ರತಿನಿಧಿಗೆ ತಲುಪಿಸಬೇಕು. ಪ್ರತಿನಿಧಿಗಳು ಇದನ್ನು ಸಮನ್ವಯ ಕೇಂದ್ರಕ್ಕೆ ಕಟ್ಟಬೇಕು. ಸಮನ್ವಯ ಕೇಂದ್ರ ಒಟ್ಟಾರೆ ಸಂಗ್ರಹವನ್ನು ಬೆಂಗಳೂರಿನ ಮೈಕ್ರೋ ವಿಮಾ ವಿಭಾಗದ ಕಚೇರಿಗೆ ಪಾವತಿಸಬೇಕು. ಕಳೆದ ವಾರ ಪಾಲಿಸಿದಾರರೊಬ್ಬರು ದುಡ್ಡು ವಾಪಸ್ ಪಡೆಯಲು ಹೋದಾಗ ಮಧ್ಯವರ್ತಿ ಸಂಸ್ಥೆ ಜೀವ ವಿಮಾ ನಿಗಮಕ್ಕೆ ಹಣವನ್ನೇ ಪಾವತಿಸದಿರುವ ಅಂಶ ಬೆಳಕಿಗೆ ಬಂದಿದೆ.

ಮಧ್ಯವರ್ತಿ ಸಂಸ್ಥೆಯ ಮಾಲೀಕ ಮೋಹನ್ ಮತ್ತು ವ್ಯವಸ್ಥಾಪಕರಾದ ರಾಜು, ಹರೀಶ್, ಪರಮೇಶ್ ಕಚೇರಿಗೆ ಬೀಗ ಹಾಕಿ ಜಾಗ ಖಾಲಿ ಮಾಡಿದ್ದಾರೆ. ಕೋಟ್ಯಂತರ ರೂಪಾಯಿ ಕಳೆದುಕೊಂಡ ಪಾಲಿಸಿದಾರರು ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾರೆ. ಪ್ರತಿ ಪಾಲಿಸಿದಾರ ಪಾವತಿಸಿರುವ ಹಣ ಸರಾಸರಿ ತಿಂಗಳಿಗೆ ರೂ. 200 ಎಂದರೂ 8000 ಪಾಲಿಸಿದಾರರು ವರ್ಷಕ್ಕೆ ರೂ. 1.92 ಕೋಟಿ ಪಾವತಿಸಿರುತ್ತಾರೆ. ವಿಮಾ ನಿಗಮಕ್ಕೆ ಎರಡು ವರ್ಷಗಳ ಕಂತು ಸಂದಾಯವಾಗಿಲ್ಲವೆಂದರೂ ಪಾಲಿಸಿದಾರರಿಗೆ ರೂ. 3.84 ಕೋಟಿ ವಂಚನೆ ಆದಂತಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.