ಶನಿವಾರ, ಮೇ 8, 2021
22 °C

ವಿಮೆ ವಂಚನೆ: ಭಾರತೀಯರೂ ಭಾಗಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನ್ಯೂಯಾರ್ಕ್ (ಪಿಟಿಐ): ಒಂಬತ್ತು ಮಂದಿ ಭಾರತೀಯರೂ ಸೇರಿದಂತೆ 91 ವೈದ್ಯರು ಸಾರ್ವಜನಿಕ ವಿಮಾ ಕಂಪೆನಿಗೆ ಸುಳ್ಳು ದಾಖಲೆ ಒದಗಿಸಿ 295 ದಶಲಕ್ಷ ಡಾಲರ್ ಹಣ ವಂಚಿಸಿರುವ ಪ್ರಕರಣ ಅಮೆರಿಕದಲ್ಲಿ ನಡೆದಿದೆ.ಆರೋಗ್ಯ ಸಂರಕ್ಷಣೆಯ ಯೋಜನೆಗಳಿಗೆ ವಂಚಿಸಲು ಅಗತ್ಯವಿರುವ ಸುಳ್ಳು ದಾಖಲೆಗಳನ್ನು ಒದಗಿಸಿರುವ, ಹಾಗೂ ಸಾರ್ವಜನಿಕ ಹಣದ ದುರ್ಬಳಕೆಯ ಸಂಚಿನಲ್ಲಿ ಪಾಲ್ಗೊಂಡ ಆರೋಪವನ್ನು ಈ ವೈದ್ಯರ ಮೇಲೆ ಹೊರಿಸಲಾಗಿದೆ.`ಮೆಡಿಕೇರ್ ವಂಚನೆ ತಡೆ ಪಡೆ~ಯು 8 ನಗರಗಳಲ್ಲಿ ಹಮ್ಮಿಕೊಂಡಿದ್ದ ದಾಳಿಗಳಲ್ಲಿ 91 ಜನ ವೈದ್ಯರನ್ನು ದೋಷಿಗಳೆಂದು ಪರಿಗಣಿಸಿದೆ ಎಂದು ಅಮೆರಿಕದ ನ್ಯಾಯಾಂಗ ಇಲಾಖೆ ತಿಳಿಸಿದೆ.ಷಿಕಾಗೊದಲ್ಲಿ ವೈದ್ಯಕೀಯ ಸೇವೆ ನೀಡುತ್ತಿದ್ದ ನೀಲೇಶ್ ಪಟೇಲ್ ಎಂಬುವವರ ಮೇಲೆ 15 ಆರೋಪಗಳನ್ನು ಹೊರಿಸಲಾಗಿದೆ.ಬೆನ್ನು ನೋವಿನ ಶಮನಕ್ಕೆ ಚಿಕಿತ್ಸೆ ನೀಡುವ ವೈದ್ಯಕೀಯ ಹಾಗೂ ದೈಹಿಕ ಚಿಕಿತ್ಸೆ ತಜ್ಞರು ವಂಚನೆಯಲ್ಲಿ ಅತಿಹೆಚ್ಚು ಆರೋಪಗಳನ್ನು ಹೊತ್ತಿರುವ ವೈದ್ಯರಾಗಿದ್ದಾರೆ.ಮಾನಸಿಕ ಆರೋಗ್ಯ, ಫಿಸಿಯೊ ಥೆರಪಿ, ಸೈಕೊ ಥೆರಪಿ ಮುಂತಾದವುಗಳನ್ನು ನೀಡುವ ನೆಪದಲ್ಲಿ ಸುಳ್ಳು ದಾಖಲೆಗಳನ್ನು ಒದಗಿಸಲಾಗಿದೆ ಎಂದು ವಂಚನೆ ನಿಗ್ರಹ ಪಡೆ ತಿಳಿಸಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.