ಬಂಗಾರಪೇಟೆ:ಸ್ಥಳೀಯರ ವಿರೋಧದ ನಡುವೆಯೇ, ಮುಖ್ಯಮಂತ್ರಿ ಗ್ರಾಮೀಣ ರಸ್ತೆ ಅಭಿವೃದ್ಧಿ ಯೋಜನೆಯಡಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಮಾಜಿ ಶಾಸಕ ಎಂ.ನಾರಾಯಣಸ್ವಾಮಿಯವರು ಚಾಲನೆ ನೀಡಿದ ಘಟನೆ ಕಾಮಾಂಡಹಳ್ಳಿಯಲ್ಲಿ ಭಾನುವಾರ ನಡೆದಿದೆ.ಸಂಪರ್ಕ ರಸ್ತೆಯ ಕಾಮಗಾರಿಯೊಂದಕ್ಕೆ ಚಾಲನೆ ನೀಡಲು ಅವರು ಕಾಮಾಂಡಹಳ್ಳಿಗೆ ತೆರಳಿದ್ದರು. ರಸ್ತೆ ಕಾಮಗಾರಿ ಬದಲಾಗಿ ಕುಡಿಯುವ ನೀರನ್ನು ಪೂರೈಸುವ ಕಾಮಗಾರಿಗೆ ಚಾಲನೆ ನೀಡಿ ಎಂದು ಅಲ್ಲಿನ ಜನ ಅವರನ್ನು ಒತ್ತಾಯಿಸಿ ಅಡ್ಡಿಉಂಟು ಮಾಡಿದರು. ಗ್ರಾಮಸ್ಥರಿಗೂ, ಮಾಜಿ ಶಾಸಕರ ಬೆಂಬಲಿಗರಿಗೂ ಬಹಳ ಹೊತ್ತು ವಾಗ್ವಾದ ನಡೆಯಿತು.

ಆದರೂ ಗ್ರಾಮಸ್ಥರು ಸಹಕರಿಸಲಿಲ್ಲ. ಕೊನೆಗೆ ಮಾಜಿ ಶಾಸಕರು ಉದ್ದೇಶಿಸಿದ್ದ ರಸ್ತೆ ಕಾಮಗಾರಿ ಬದಲಾಗಿ ಪಕ್ಕದ ಇನ್ನೊಂದು ರಸ್ಥೆಗೆ ಗುದ್ದಲಿಪೂಜೆ ನಿರ್ವಹಿಸಿ ತಮ್ಮ ಹಠಸಾಧನೆ ಮಾಡಿದರು. ಗ್ರಾಮದ ಉದ್ದೇಶಿಸಿತ ರಸ್ತೆಗೆ ಯಾವುದೇ ಸರ್ವೇ ನಡೆಯದಿದ್ದರೂ, ರಸ್ತೆ ಕಾಮಗಾರಿಗೆ ಅನುಮೋದನೆ ಸಿಗದಿದ್ದರೂ ಮಾಜಿ ಶಾಸಕರು ಕಾಮಗಾರಿಗೆ ಚಾಲನೆ ನೀಡಿದ್ದಾರೆ ಎನ್ನಲಾಗಿದೆ.

ಮೊದಲಿಗೆ ತಾಲ್ಲೂಕಿನ ಕುಪ್ಪನಹಳ್ಳಿಯಲ್ಲಿ ಮಾಜಿ ಶಾಸಕರ ಪ್ರಯತ್ನಕ್ಕೆ ವಿರೋಧ ಪ್ರಕಟಗೊಂಡಿತ್ತು. ತಮ್ಮ ಆಪ್ತರಾದ ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ನಾರಾಯಣಸ್ವಾಮಿಯವರ ಮನೆಗೊಂದು ರಸ್ತೆ ಕಲ್ಪಿಸುವ ಉದ್ದೇಶಕ್ಕೆ ಕುಪ್ಪನಹಳ್ಳಿಯ ಸಂಪರ್ಕ ರಸ್ತೆಯನ್ನು ಮಂಜೂರು ಮಾಡಿದ್ದರು. ಆದರೆ ಅವರ ಪ್ರಯತ್ನಕ್ಕೆ ಅಡ್ಡಿಯಾದ ಸ್ಥಳೀಯ ಮುನಿಯಪ್ಪ ರಸ್ತೆ ಕಾಮಗಾರಿಗೆ ಉದ್ದೇಶಿತ ಜಾಗವು ತಮಗೆ ಸೇರಿದ್ದು.

ತಮ್ಮ ಹೊಲಕ್ಕೆ ಹೋಗಿಬರಲು ಮೀಸಲಿಟ್ಟ ದಾರಿಯಾಗಿದೆ. ಖಾಸಗಿ ಜಾಗದಲ್ಲಿ ರಸ್ತೆ ನಿರ್ಮಿಸಲು ಬಿಡುವುದಿಲ್ಲ ಎಂದು ಬಹಿರಂಗವಾಗಿ ಮಾಜಿ ಶಾಸಕರನ್ನು ಎದುರಿಸಿದ್ದರು.
ತಾಲ್ಲೂಕಿನ ರೆಡ್ಡಿಹಳ್ಳಿಯಲ್ಲಿ ಮಾಜಿ ಶಾಸಕರು ಗುಂಪುಗಾರಿಕೆ, ಸ್ವಜನ ಪಕ್ಷಪಾತ, ಕ್ಷುಲ್ಲಕ ರಾಜಕಾರಣ ನಡೆಸಿದ್ದಾರೆಂದು ಆರೋಪಿಸಿ ಅಲ್ಲಿನ ರಸ್ತೆ ಕಾಮಗಾರಿ ಚಾಲನೆಗೆ ಗ್ರಾಮಸ್ಥರು ಅಡ್ಡಿಪಡಿಸಿದ್ದರು. ಗ್ರಾಮದವರೇ ಸಾಕಷ್ಟು ಜನ ಅನುಭವಿ ಗುತ್ತಿಗೆದಾರರಿರುವಾಗ ಹೊರಗಿನವರಾದ ಮಾಜಿ ಶಾಸಕರ ಆಪ್ತರಾದ ಜೋತೇನಹಳ್ಳಿ ರಾಮಪ್ಪನವರ ಮಗ ವಿಜಿ ಅವರಿಗೆ ಕಾಮಗಾರಿಯನ್ನು ಗುತ್ತಿಗೆ ನೀಡಲಾಗಿದೆ.

ಗ್ರಾಮದ ಚುನಾಯಿತ ಪ್ರತಿನಿಧಿಗಳಿಗೆ ಕಾಮಗಾರಿ ಚಾಲನೆ ಕುರಿತು ಮಾಹಿತಿ ನೀಡದೇ ಗುಂಪುಗಾರಿಕೆ ನಡೆಸಿದ್ದಾರೆ ಎಂದು ಆರೋಪಿಸಲಾಗಿತ್ತು.ಇನ್ನೊಂದು ಗ್ರಾಮ ಕಾವರನಹಳ್ಳಿಯಲ್ಲಿ ಸುಸ್ಥಿತಿಯಲ್ಲಿದ್ದ ಕಲ್ಲುಚಪ್ಪಡಿ ರಸ್ತೆಯನ್ನು ಜೆಸಿಬಿಯಿಂದ ಕೀಳಿಸಿ ಅದರ ಮೇಲೊಂದು ಸಂಪರ್ಕ ರಸ್ತೆ ನಿರ್ಮಿಸಲು ಉದ್ದೇಶಿಸಿದ್ದ ಕಾಮಗಾರಿಗೆ ಅಡ್ಡಿಯುಂಟಾಗಿತ್ತು.
ಬಹಳಷ್ಟು ಕಾಮಗಾರಿಗಳ ಸರ್ವೇ ನಡೆದಿಲ್ಲ, ಕಾಮಗಾರಿಗೆ ಹಣ ನಿಗದಿಗೊಳಿಸಿರುವುದು ವೈಜ್ಞಾನಿಕವಾಗಿಲ್ಲ, ಗುತ್ತಿಗೆ ನೀಡುವಲ್ಲಿ ನಿಯಮ ಗಾಳಿಗೆ ತೂರಲಾಗಿದೆ, ಕಾಮಗಾರಿ ಚಾಲನಾ ಕ್ರಿಯೆಗೆ ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ, ಕಾಮಗಾರಿ ವಿವರಗಳನ್ನು ಪ್ರಕಟಿಸಿಲ್ಲ ಎಂಬ ಗಂಭೀರ ಆರೋಪಗಳು ಕೇಳಿ ಬರುತ್ತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.