ಆಲಮಟ್ಟಿ: ಮಗ ಮಾಡಿದ ತಪ್ಪಿಗೆ ತಾಯಿಗೆ ಅಮಾನವೀಯ ಶಿಕ್ಷೆ ನೀಡಿರುವ ಘಟನೆ ಇಲ್ಲಿಗೆ ಸಮೀಪದ ಗಣಿ ಪುನರ್ವಸತಿ ಕೇಂದ್ರದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

`ಮುತ್ತಪ್ಪ ಕುರಿ ಹಾಗೂ ಆತನ ಮನೆಯವರಾದ ನಿಂಗಪ್ಪ ಕುರಿ, ಹನುಮಂತಪ್ಪ ಕುರಿ, ಸೋಮನಿಂಗಪ್ಪ ಕುರಿ, ಶೇಖಪ್ಪ ಕುರಿ, ನಾಗವ್ವ ಕುರಿ, ಕಾಶಿಬಾಯಿ ಹಾಗೂ ತಂಗೆವ್ವ ಸೇರಿಕೊಂಡು ನನ್ನನ್ನು ವಿವಸ್ತ್ರಗೊಳಿಸಿ ಕಂಬಕ್ಕೆ ಕಟ್ಟಿಹಾಕಿ ಹಲ್ಲೆ ನಡೆಸಿದ್ದಾರೆ~ ಎಂದು ಶಿವಬಾಯಿ ರುದ್ರಪ್ಪ ಪೂಜಾರಿ (45) ಪೊಲೀಸರಿಗೆ ದೂರು ನೀಡಿದ್ದಾರೆ.

`ನನ್ನ ಮಗ ಅನ್ಯ ಜಾತಿಯ ಹುಡುಗಿಯೊಬ್ಬಳನ್ನು ಕರೆದುಕೊಂಡು ಓಡಿ ಹೋಗಿದ್ದಾನೆ ಎಂದು ಆರೋಪಿಸಿ ಹುಡುಗಿಯ ಪಾಲಕರು ನಮ್ಮ ಮನೆಯ ಮೇಲೆ ದಾಳಿ ನಡೆಸಿದ್ದಾರೆ. ಮನೆಯಲ್ಲಿದ್ದ ನನ್ನನ್ನು ಹೊರಗೆಳೆದು ತಂದು ಅರೆ ಬೆತ್ತಲೆಗೊಳಿಸಿ ಕಂಬಕ್ಕೆ ಕಟ್ಟಿ ಹೊಡೆದಿದ್ದಾರೆ~ ಎಂದು ನಿಡಗುಂದಿ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ಅವರು ತಿಳಿಸಿದ್ದಾರೆ.

ಶಿವಬಾಯಿ ಪೂಜಾರಿ ಮಗ ತಮ್ಮ ಮಗಳನ್ನು ಅಪಹರಿಸಿದ್ದಾನೆ ಎಂದು ಕುರಿ ಎಂಬುವವರು ಈ ಹಿಂದೆಯೇ ಪೊಲೀಸರಿಗೆ ದೂರು ನೀಡಿದ್ದಾರೆ. ನವೆಂಬರ್ 6ರಂದೇ ಈ ಘಟನೆ ನಡೆದಿದ್ದು, ಭಾನುವಾರ ಪ್ರಕರಣ ದಾಖಲಾಗಿದೆ. ಬಸವನ ಬಾಗೇವಾಡಿ ಡಿ.ವೈ.ಎಸ್.ಪಿ. ಬಾಲಬಂಡಿ, ಪಿಎಸೈ ಆನಂದ ವಾಘಮೋಡೆ ಮೊದಲಾದವರು ಸೋಮವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ವಿಜಾಪುರ ವರದಿ:`ಈ ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸಲಾಗುತ್ತಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು~ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಜಯ್ ಹಿಲೋರಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.