ಬೆಂಗಳೂರು: ಕಾವೇರಿ ನದಿ ನೀರಿನ ವಿವಾದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಶಿವನಸಮುದ್ರ ಮತ್ತು ಮೆಟ್ಟೂರಿನ ಕೆಳ ಭಾಗದಲ್ಲಿ ಅಣೆಕಟ್ಟು ನಿರ್ಮಾಣ, ಎರಡೂ ರಾಜ್ಯಗಳ ತಜ್ಞರನ್ನು ಒಳಗೊಂಡ ಮಧ್ಯಸ್ಥಿಕೆ ಸಮಿತಿ ರಚನೆ ಸೇರಿದಂತೆ ರಾಜ್ಯ ಸರ್ಕಾರವು ಮೂರು ಸಲಹೆಗಳನ್ನು ತಮಿಳುನಾಡಿನ ಮುಂದಿಟ್ಟಿದೆ.

ಸುಪ್ರೀಂ ಕೋರ್ಟ್ ಸಲಹೆಯಂತೆ ರಾಜ್ಯದ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಮತ್ತು ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ನಡುವೆ ಗುರುವಾರ ಇಲ್ಲಿ ನಡೆದ ಮಾತುಕತೆ ಸಂದರ್ಭದಲ್ಲಿ ರಾಜ್ಯ ಸರ್ಕಾರ ಈ ಪ್ರಸ್ತಾವನೆ ಮಾಡಿದೆ.

ಕಾವೇರಿ ನೀರಿನ ವಿವಾದ ಸ್ವಾತಂತ್ರ್ಯ ಪೂರ್ವದಿಂದಲೂ ಕಗ್ಗಂಟಾಗಿ ಉಳಿದಿದೆ. ವಿವಾದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಎರಡೂ ರಾಜ್ಯಗಳು ಮುಂದಾಗಬೇಕು ಎಂದು ಮಾತುಕತೆ ಸಂದರ್ಭದಲ್ಲಿ ಸಲಹೆ ಮಾಡಲಾಯಿತು. ಆದರೆ ಜಯಲಲಿತಾ ಅವರು ಇದಕ್ಕೆ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ ಎಂದು ಸಭೆ ಬಳಿಕ ಶೆಟ್ಟರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

`ಮಳೆ ಕೊರತೆಯಿಂದ ಕರ್ನಾಟಕ, ತಮಿಳುನಾಡು ರಾಜ್ಯಗಳು ಸದ್ಯ ಸಂಕಷ್ಟದ ಸ್ಥಿತಿಯಲ್ಲಿವೆ. ಇದರಿಂದ ಹೊರಬರಲು ಮಾರ್ಗೋಪಾಯ ಹುಡುಕಬೇಕಿದೆ. ಎರಡೂ ರಾಜ್ಯಗಳು ಸಹಮತದಿಂದ 4-5 ವರ್ಷಗಳಲ್ಲಿ ಶಿವನಸಮುದ್ರ ಮತ್ತು ಮೆಟ್ಟೂರಿನ ಕೆಳ ಭಾಗದಲ್ಲಿ ಅಣೆಕಟ್ಟುಗಳನ್ನು ನಿರ್ಮಿಸಿ ನೀರಿನ ಸಂಗ್ರಹ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವುದು ಒಳ್ಳೆಯದು ಎಂದು ಕರ್ನಾಟಕ ಸಲಹೆ ಮಾಡಿದೆ' ಎಂದು ಅವರು ಹೇಳಿದರು.

ಒಳ್ಳೆಯ ಮಳೆಯಾಗಿ ಹೆಚ್ಚಿನ ಪ್ರಮಾಣದಲ್ಲಿ ನೀರು ಲಭ್ಯವಾದಾಗ ಅದನ್ನು ಅಣೆಕಟ್ಟುಗಳಲ್ಲಿ ಶೇಖರಿಸಿ, ಮಳೆ ಕಡಿಮೆಯಾದ ಸಂದರ್ಭಗಳಲ್ಲಿ ಬಳಸಿಕೊಳ್ಳುವುದು ಸೂಕ್ತ. ಇದರಿಂದ ಎರಡೂ ರಾಜ್ಯಗಳಿಗೆ ಅನುಕೂಲ ಆಗುತ್ತದೆ. ವಿದ್ಯುತ್ ಉತ್ಪಾದನೆಗೂ ಸಹಾಯವಾಗಲಿದೆ ಎಂದು ಅವರಿಗೆ ಮನವರಿಕೆ ಮಾಡಿಕೊಟ್ಟಿರುವುದಾಗಿ ತಿಳಿಸಿದರು.

`ಕೇಂದ್ರ ಜಲ ಆಯೋಗ ಹಾಗೂ ಎರಡೂ ರಾಜ್ಯಗಳ ಪ್ರತಿನಿಧಿಗಳನ್ನು ಒಳಗೊಂಡ ತಜ್ಞರ ಸಮಿತಿ ರಚಿಸಿ, ಇದರ ಸಾಧಕ-ಬಾಧಕಗಳ ಬಗ್ಗೆ ವರದಿ ತರಿಸಿಕೊಳ್ಳೋಣ. ಬಳಿಕ ಕ್ರಿಯಾ ಯೋಜನೆಯನ್ನು ರೂಪಿಸಿ ಕಾಲಮಿತಿಯಲ್ಲಿ ಈ ಯೋಜನೆಯನ್ನು ಅನುಷ್ಠಾನಗೊಳಿಸೋಣ' ಎಂದು ಜಯಲಲಿತಾ ಅವರಿಗೆ ತಿಳಿಸಿದ್ದಾಗಿ ಹೇಳಿದರು.

ಎರಡೂ ರಾಜ್ಯಗಳ ಪ್ರತಿನಿಧಿಗಳನ್ನು ಒಳಗೊಂಡ ತಜ್ಞರ ಮಧ್ಯಸ್ಥಿಕೆ ಸಮಿತಿಯನ್ನು ರಚಿಸಿ ಸಂಕಷ್ಟ ಸೂತ್ರ ರೂಪಿಸುವುದು, ಎರಡೂ ರಾಜ್ಯಗಳ ಕಾವೇರಿ ಜಲಾನಯನ ಪ್ರದೇಶದಲ್ಲಿ ಕೃಷಿ ಪದ್ಧತಿಯಲ್ಲಿ ಸುಧಾರಣೆ, ಆಧುನಿಕ ತಂತ್ರಜ್ಞಾನ ಬಳಕೆ, ಕಡಿಮೆ ನೀರು ಬಳಕೆ ಬಗ್ಗೆ ಮಾರ್ಗದರ್ಶನ ನೀಡಲು ತಜ್ಞರ ಸಮಿತಿ ರಚಿಸುವ ಕುರಿತು ಸಲಹೆ ಮಾಡಿದ್ದಾಗಿಯೂ ಶೆಟ್ಟರ್ ತಿಳಿಸಿದರು.

`ತಜ್ಞರ ಸಮಿತಿಯಲ್ಲಿ ಉಭಯ ರಾಜ್ಯಗಳ ರೈತ ಪ್ರತಿನಿಧಿಗಳೂ ಇರಲಿ. ಅಲ್ಲದೇ ಕೇಂದ್ರ ಸರ್ಕಾರದ ನೆರವನ್ನೂ ಪಡೆದುಕೊಂಡು ಸೂಕ್ತ ಪರಿಹಾರ ಕಂಡುಕೊಳ್ಳೋಣ ಎಂದು ಮನವರಿಕೆ ಮಾಡುವ ಪ್ರಯತ್ನ ರಾಜ್ಯದ ಕಡೆಯಿಂದ ನಡೆಯಿತು' ಎಂದು ಅವರು ಹೇಳಿದರು.

ಹಟಮಾರಿ ಜಯಾ
`ನಮ್ಮಲ್ಲಿ ನೀರು ಇಲ್ಲದೆ ಇರುವಾಗ ತಮಿಳುನಾಡಿಗೆ ನೀರು ಬಿಡಲು ಹೇಗೆ ಸಾಧ್ಯ? ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರ ಹಟಮಾರಿ ಧೋರಣೆ ಶೋಭೆ ತರುವುದಿಲ್ಲ. ಅವರ ಬೇಡಿಕೆ ಅವೈಜ್ಞಾನಿಕ. ಅವರ ಬಿಗಿ ನಿಲುವು ಒಕ್ಕೂಟ ವ್ಯವಸ್ಥೆಗೆ ಧಕ್ಕೆ ಉಂಟು ಮಾಡಲಿದೆ'.
-ಎಚ್.ಡಿ.ಕುಮಾರಸ್ವಾಮಿ, ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.