ನವದೆಹಲಿ (ಪಿಟಿಐ): ಭಾರತದಲ್ಲಿ ಪ್ರತಿ ಗಂಟೆಗೆ 15 ಜನರು ಆತ್ಮಹತ್ಯೆಗೆ ಶರಣಾಗುತ್ತಾರೆ. ಅವರಲ್ಲಿ ಬಹುತೇಕ ಜನರು ಅಂದರೆ ಶೇ 69.2ರಷ್ಟು ವಿವಾಹಿತರು. 30.8ರಷ್ಟು ಮಾತ್ರ ಅವಿವಾಹಿತರು ಎಂದು ಸರ್ಕಾರದ ಅಂಕಿ ಸಂಖ್ಯೆಗಳು ತಿಳಿಸಿವೆ.

ಗಮನೀಯ ಅಂಶವೆಂದರೆ, ಪ್ರತಿ ಐವರಲ್ಲಿ ಒಬ್ಬರು ಗೃಹಿಣಿ ಇರುತ್ತಾರೆ. ಸಾಮಾಜಿಕ ಹಾಗೂ ಆರ್ಥಿಕ ಕಾರಣಗಳಿಂದಾಗಿ ಪುರಷರು ತಮ್ಮ ಜೀವನ ಕೊನೆಗೊಳಿಸುತ್ತಾರೆ. ಮಹಿಳೆಯರು ದಾರುಣ ಅಂತ್ಯ ಕಾಣಲು ಭಾವನಾತ್ಮಕ ಹಾಗೂ ವೈಯಕ್ತಿಕ ಕಾರಣಗಳಿರುತ್ತವೆ ಎಂದು ಗುರುವಾರ ವರದಿ ಬಿಡುಗಡೆ ಮಾಡಿದ ಗೃಹ ಸಚಿವ ಪಿ.ಚಿದಂಬರಂ ತಿಳಿಸಿದ್ದಾರೆ.

ಸಾವಿಗೆ ಮೊರೆ ಹೋಗುವವರಲ್ಲಿ ಶೇ 41.1ರಷ್ಟು ಜನರು ಸ್ವಯಂ ಉದ್ಯೋಗಿಗಳಾಗಿದ್ದಾರೆ. ಶೇ 7.5ರಷ್ಟು ಜನ ನಿರುದ್ಯೋಗಿಗಳು ಜೀವನದಿಂದ ವಿಮುಖರಾಗಿದ್ದಾರೆ. 2010ರ ಸಾಲಿನಲ್ಲಿ ಇಡೀ ದೇಶದಾದ್ಯಂತ ಒಂದು ಲಕ್ಷಕ್ಕೂ ಮೀರಿ, (1,34,599)ಜನರು ತಮ್ಮ ಬದುಕನ್ನು ಕೊನೆಗಾಣಿಸಿಕೊಂಡಿದ್ದಾರೆ.

ಶೇ 70.5ರಷ್ಟು ವಿವಾಹಿತ ಪುರುಷರಾಗಿದ್ದರೆ, ಶೇ 67ರಷ್ಟು ವಿವಾಹಿತೆಯರಾಗಿದ್ದಾರೆ. ರಾಷ್ಟ್ರೀಯ ಅಪರಾಧ ದಾಖಲು ದಳ ಈ ಅಂಕಿ ಅಂಶಗಳನ್ನು ವರದಿಯ ರೂಪದಲ್ಲಿ ಬಿಡುಗಡೆ ಮಾಡಿದೆ. ಕೇರಳ, ತಮಿಳುನಾಡು, ಕರ್ನಾಟಕ ಹಾಗೂ ಮಹಾರಾಷ್ಟ್ರ, ಆಂಧ್ರ ಪ್ರದೇಶಗಳಲ್ಲಿ ಶೇ 65.8ರಷ್ಟು ಜನರು ಹಿರಿಯ ನಾಗರಿಕರಾಗಿದ್ದಾರೆ. ಶೇ44.7ರಷ್ಟು ಆತ್ಮಹತ್ಯೆಗಳಿಗೆ `ಕೌಟುಂಬಿಕ ಕಾರಣ~ ಹಾಗೂ `ಅನಾರೋಗ್ಯ~ಗಳೇ ಕಾರಣಗಳಾಗಿವೆ.

ಆಸ್ತಿ ವಿವಾದಕ್ಕಾಗಿ ಹಾಗೂ ಆಪ್ತರ ನಿಧನಕ್ಕೆ ಹತಾಶರಾಗಿ ಬದುಕಿಗೆ ಕೊನೆ ಹೇಳುವವರ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡು ಬಂದಿದೆ. ಕ್ರಮವಾಗಿ ಶೇ 48ರಷ್ಟು ಹಾಗೂ ಶೇ 28.9ರಷ್ಟು ಜನರು ಈ ಸಾಲಿನಲ್ಲಿ ತಮ್ಮ ಜೀವನ ಪಯಣವನ್ನು ಕೊನೆಗಳಿಸಿದ್ದಾರೆ.

ಸಮಗ್ರವಾಗಿ ಗಮನಿಸಿದ್ದಲ್ಲಿ ಪುರುಷ ಹಾಗೂ ಸ್ತ್ರೀಯರ ಅನುಪಾತವು 2009ರಲ್ಲಿ 65:35ರಷ್ಟಿದೆ. 14ರ ವಯೋಮಿತಿಯೊಳಗಿನ ಬಾಲಕ ಹಾಗೂ ಬಾಲಕಿಯರ ಅನುಪಾತವು 52:48ರಷ್ಟಿದೆ ಎಂದು ವರದಿಯ ಉಲ್ಲೇಖಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.