ಗುರುವಾರ , ಜೂನ್ 24, 2021
29 °C

ವಿವಿಗಳಿಗೆ ಉತ್ತೇಜನ ಕೊರತೆ: ಭಾರದ್ವಾಜ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ದೇಶದ ವಿಶ್ವವಿದ್ಯಾಲಯ­ಗಳಿಗೆ ದೊಡ್ಡ ಮಟ್ಟದಲ್ಲಿ ಉತ್ತೇಜನ ನೀಡುತ್ತಿಲ್ಲ. ವಿವಿಗಳಲ್ಲಿ ಸಂಶೋಧನಾ ಹಾಗೂ ಅಭಿವೃದ್ಧಿ ಚಟುವಟಿಕೆಗಳಿಗೆ ಒತ್ತು ನೀಡುತ್ತಿಲ್ಲ’ ಎಂದು ರಾಜ್ಯಪಾಲ ಎಚ್‌.ಆರ್‌.ಭಾರದ್ವಾಜ್‌ ಬೇಸರ ವ್ಯಕ್ತಪಡಿಸಿದರು.ಜಯನಗರ ನ್ಯಾಷನಲ್‌ ಕಾಲೇ­ಜಿನ­ ಎಚ್‌.ಎನ್‌.ಕಲಾಕ್ಷೇತ್ರದಲ್ಲಿ ಭಾನು­­­­ವಾರ ನಡೆದ ‘ವಿಮೆನ್ಸ್‌ ಪೀಸ್‌ ಲೀಗ್‌’ ನ ವಜ್ರಮಹೋತ್ಸವದ ಸಮಾ­ರೋಪ ಸಮಾ­ರಂಭದಲ್ಲಿ ಮಾತ­ನಾಡಿ­ದರು.‘ಅಮೆರಿಕ ಮತ್ತಿತರ ರಾಷ್ಟ್ರಗಳಲ್ಲಿ ವಿಶ್ವವಿದ್ಯಾಲಯಗಳಿಗೆ ಹೆಚ್ಚಿನ ಉತ್ತೇನ ನೀಡಲಾಗುತ್ತಿದೆ. ಹೀಗಾಗಿ ಆ ರಾಷ್ಟ್ರ­ಗಳು­ ತ್ವರಿತಗತಿಯಲ್ಲಿ ಅಭಿವೃದ್ಧಿ

ಸಾಧಿ­ಸು­­ತ್ತಿವೆ’ ಎಂದು ಅವರುಅಭಿ­ಪ್ರಾಯ­ಪಟ್ಟರು.‘2007ರಲ್ಲೇ ಸಂಸತ್‌ನಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು ಮಂಡಿಸಿದ್ದೆ. ಆದರೆ, ಈ ಮಸೂದೆಗೆ ಈ ವರೆಗೆ ಒಪ್ಪಿಗೆ ಸಿಕ್ಕಿಲ್ಲ. ಪೂರ್ವಗ್ರಹ­ಪೀಡಿತ ಮನೋಭಾವದ ಕಾರಣದಿಂದ ಒಪ್ಪಿಗೆ ಸಿಗುವುದು ವಿಳಂಬ ಆಗುತ್ತಿದೆ. ಮಹಿಳೆ­ಯರು ಸಂಸತ್‌ನಲ್ಲಿ ಹೆಚ್ಚಿನ ಸಂಖ್ಯೆ­ಯಲ್ಲಿ ಇದ್ದರೆ ಕಲಾಪ ಸುಗಮ­ವಾಗಿ ಸಾಗುತ್ತದೆ’ ಎಂದು ಅವರು ತಿಳಿಸಿದರು.

ನಿವೃತ್ತ ನ್ಯಾಯಮೂರ್ತಿ ವಿ.­ಜಗನ್ನಾಥ್‌,­ ‘ಆಧುನಿಕ ಕಾಲಘಟ್ಟದಲ್ಲಿ ವಿದ್ಯಾರ್ಥಿಗಳಿಗೆ ವೈಜ್ಞಾನಿಕ ಮನೋ­ಭಾವ ಮೂಡಿಸುವ ಶಿಕ್ಷಣ ನೀಡಬೇಕು’ ಎಂದರು.ಸಂಸ್ಥೆಯ ಅಧ್ಯಕ್ಷೆ ವಿಶಾಲಾಕ್ಷಿ ಎಸ್‌.­ರಾವ್‌­ ಅಧ್ಯಕ್ಷತೆ ವಹಿಸಿ, ‘ಮೌಲ್ಯಾ­­ಧಾ­­ರಿತ ಶಿಕ್ಷಣ ವ್ಯವಸ್ಥೆಯನ್ನು ಇನ್ನಷ್ಟು ಬಲ­ಪ­ಡಿ­ಸುವುದು ಸಂಸ್ಥೆಯ ಗುರಿ’ ಎಂದರು. ಇದೇ ಸಂದರ್ಭದಲ್ಲಿ ಪ್ರಫುಲ್ಲತಾ ಭಾರದ್ವಾಜ್‌ ಅವರು ಸಂಸ್ಥೆಯ ಸ್ಮರಣ ಸಂಚಿಕೆ ‘ನೈದಿಲೆ’­ಯನ್ನು ಬಿಡುಗಡೆ ಮಾಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.