ಶುಕ್ರವಾರ, ಮೇ 7, 2021
26 °C

ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಡಿಕೇರಿ: ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.ಪ್ರಥಮ ದರ್ಜೆ ಸಹಾಯಕರು ಪ.ಜಾತಿ (ಬ್ಯಾಕ್ ಲಾಗ್-1, 2ಎ-1, 2ಬಿ-13, ಕಲ್ಯಾಣ ಸಂಘಟಿಕರು-ಪ.ಪಂ(1), ವಾಹನ ಚಾಲಕರು-ಸಾಮಾನ್ಯ(1), ಮಿಲಿಟರಿ ಬಾಲಕರ ವಿದ್ಯಾರ್ಥಿ ನಿಲಯದ ಅಧೀಕ್ಷಕರು ಸಾಮಾನ್ಯ(1) ಹುದ್ದೆಗಳ ಭರ್ತಿಗಾಗಿ ಅರ್ಹ ಮಾಜಿ ಸೈನಿಕರಿಂದ ನಿಗದಿತ ಅರ್ಜಿ ನಮೂನೆ(1)ರಲ್ಲಿ ಅರ್ಜಿಯನ್ನು ದ್ವಿಪ್ರತಿಯಲ್ಲಿ ಆಹ್ವಾನಿಸಲಾಗಿದೆ.ಅರ್ಹತೆಗಳು: ಎಲ್ಲಾ ಹುದ್ದೆಗಳನ್ನು ಮಾಜಿ ಸೈನಿಕರಿಗೆ ಕಾಯ್ದಿರಿಸಲಾಗಿದೆ. ಎಸ್.ಎಸ್.ಎಲ್.ಸಿ. ಅಥವಾ ತತ್ಸಮಾನ ಪರೀಕ್ಷೆಗಳಲ್ಲಿ ಕನ್ನಡ ಭಾಷೆಯನ್ನು ಒಂದು ವಿಷಯವನ್ನಾಗಿ ತೆಗೆದುಕೊಂಡು ತೇರ್ಗಡೆಯಾಗಿರಬೇಕು (ವಾಹನ ಚಾಲಕರನ್ನು ಹೊರತುಪಡಿಸಿ). ವಾಹನ ಚಾಲಕರಿಗೆ ಕನ್ನಡ ಓದಲು ಮತ್ತು ಬರೆಯಲು ಬರಬೇಕು. ವಾಹನ ಚಾಲನಾ ಪರವಾನಿಗೆ (ಭಾರಿ ಮತ್ತು ಲಘು ವಾಹನ) ಇರಬೇಕು.ವಯೋಮಿತಿ: ಕರ್ನಾಟಕ ನಾಗರಿಕ ಸೇವಾ (ಸಾಮಾನ್ಯ ನೇಮಕಾತಿ) ನಿಯಮಗಳು 1977 ಮತ್ತು ಆಗಾಗ ನೀಡಲಾದ ತಿದ್ದುಪಡಿಗಳನ್ವಯ ಗರಿಷ್ಠ ವಯೋಮಿತಿಗೆ ಸಶಸ್ತ್ರ ಪಡೆಗಳಲ್ಲಿ ಸಲ್ಲಿಸಿದ ಸೇವಾವಧಿಗೆ ಮೂರು ವರ್ಷಗಳು ಸೇರಿದಂತೆ 2011ರ ಜೂನ್ 1 ಕ್ಕೆ 52 ವರ್ಷ ವಯಸ್ಸು ಮೀರಿರಬಾರದು.ಅರ್ಜಿಗಳನ್ನು ಅಧ್ಯಕ್ಷರು, ಇಲಾಖಾ ನೇಮಕಾತಿ ಸಮಿತಿ, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಕಾರ್ಯಪ್ಪ ಭವನ ನಂ.58, ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ರಸ್ತೆ, ಬೆಂಗಳೂರು-25 ಈ ವಿಳಾಸಕ್ಕೆ ಕಳುಹಿಸಬೇಕು.ಮಾಹಿತಿಗಾಗಿ ಜಂಟಿ ನಿರ್ದೇಶಕರು, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಇವರನ್ನು ಸಂಪರ್ಕಿಸಿ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.