ಶನಿವಾರ, ಜನವರಿ 18, 2020
19 °C

'ವಿ.ವಿ ಅಂಕಪಟ್ಟಿ ಹಗರಣ ಲೋಕಾಯುಕ್ತಕ್ಕೆ ವಹಿಸಿ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸುವರ್ಣ ಸೌಧ (ಬೆಳಗಾವಿ): ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ ಮಾಫಿಯಾ­ಗಳು ಪ್ರಭಾವಶಾಲಿಯಾಗಿ ಬೆಳೆದಿದ್ದು ಇದನ್ನು ತಡೆಯಲು ಸೂಕ್ತ ಕ್ರಮ ಕೈಗೊಳ್ಳಬೇಕಾದ ಅಗತ್ಯವಿದೆ ಎಂದು ವಿಧಾನಪರಿಷತ್ತಿನಲ್ಲಿ ಆಗ್ರಹಿಸಿದ ವಿರೋಧ ಪಕ್ಷದ ನಾಯಕ ಡಿ.ವಿ. ಸದಾನಂದಗೌಡ, ಬೆಂಗಳೂರಿನ ಎರಡು ಕಾಲೇಜುಗಳಲ್ಲಿ ಬೆಳಕಿಗೆ ಬಂದ ಅಂಕಪಟ್ಟಿ ಹಗರಣಗಳನ್ನು ಲೋಕಾಯುಕ್ತ­ಕ್ಕೆ ವಹಿಸಬೇಕು ಎಂದು ಒತ್ತಾಯಿಸಿದರು.ರಾಜೀವ ಗಾಂಧಿ ಆರೋಗ್ಯ ವಿವಿ ತಿದ್ದುಪಡಿ ಮಸೂದೆ ಕುರಿತು ಮಾತ­ನಾಡಿದ ಅವರು,  ಬೆಂಗಳೂರಿನ ಭೂ ಮಾಫಿಯಾದಂತೆ ವಿವಿಗಳಲ್ಲಿ ಅಂಕಪಟ್ಟಿ ಮಾಫಿಯಾ ಬೆಳೆದು ನಿಂತಿದೆ, ಆರೋಗ್ಯ ವಿವಿಗೆ ಸಂಬಂಧಿಸಿ ಬೆಂಗಳೂರಿನ ಎರಡು ಕಾಲೇಜುಗಳಲ್ಲಿ ಫೇಲಾದ ವಿದ್ಯಾರ್ಥಿನಿ­ಯರನ್ನು ಪಾಸ್ ಮಾಡಿರುವುದು ಬೆಳಕಿಗೆ ಬಂದಿದೆ.

ಧಾರವಾಡದ ಕರ್ನಾಟಕ ವಿವಿಯಲ್ಲಿ ಹಣಕಾಸಿನ ಅವ್ಯವಹಾರ ನಡೆದಿರುವುದು ಲೆಕ್ಕ ಪರಿಶೋಧನಾ ಸಮಿತಿಯ ವರದಿಯಲ್ಲಿ ಬಹಿರಂಗವಾಗಿದೆ ಎಂದು ಹೇಳಿದರು. ಅಂಕಪಟ್ಟಿ ಹಗರಣಗಳಿಗೆ ಕುಲಪತಿಗಳು ಮತ್ತು ಕುಲಸಚಿವರನ್ನು ನೇರ ಹೊಣೆ ಮಾಡಬೇಕು, ಅವರನ್ನು ಶಿಕ್ಷೆಗೆ ಗುರಿಪಡಿಸಬೇಕು ಎಂದು ಆಗ್ರಹಿಸಿದರು.

ಪ್ರತಿಕ್ರಿಯಿಸಿ (+)