ಭಾನುವಾರ, ಜನವರಿ 26, 2020
18 °C

ವಿವಿ ಪರೀಕ್ಷಾ ವೇಳಾಪಟ್ಟಿ ಪ್ರಕಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾ­ಲಯವು ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ನಿಧನದ ಕಾರಣ ಡಿ.11 ರಂದು ಮುಂದೂಡಿದ್ದ ಪರೀಕ್ಷೆಗಳ ಪರಿಷ್ಕೃತ ವೇಳಾಪಟ್ಟಿ ಪ್ರಕಟಿಸಿದೆ.ಡಿ.11 ರಂದು ನಡೆಯಬೇಕಿದ್ದ ಬಿ.ಎ/­­ಬಿ.ಎಸ್‌ಸಿ 1ನೇ   ಸೆಮಿಸ್ಟರಿನ   ಪರೀ­ಕ್ಷೆ­ಗಳು ಶುಕ್ರವಾರ (ಡಿ.13) ಬೆಳಿಗ್ಗೆ 9.30ಕ್ಕೆ, 5ನೇ ಸೆಮಿಸ್ಟರಿನ ಪರೀ­ಕ್ಷೆ­ಗಳು ಮಧ್ಯಾಹ್ನ 2ಕ್ಕೆ  ನಡೆಯಲಿವೆ.ಎಲ್.ಎಲ್.ಬಿ 1 ಮತ್ತು 5ನೇ ಸೆಮಿ­ಸ್ಟರಿನ ಪರೀಕ್ಷೆಗಳು ಡಿ.31 ರಂದು ಬೆಳಿಗ್ಗೆ 9.30ಕ್ಕೆ ಹಾಗೂ 4 ಮತ್ತು  8ನೇ ಸೆಮಿಸ್ಟರಿನ ಪರೀಕ್ಷೆಗಳು ಮಧ್ಯಾಹ್ನ 2ಕ್ಕೆ ನಡೆಯಲಿವೆ ಎಂದು ಪ್ರಕಟಣೆ ತಿಳಿಸಿದೆ. ಮಾಹಿತಿಗೆ  ಕುಲಸ­ಚಿ­ವರ (ಮೌಲ್ಯಮಾಪನ) ಕಚೇರಿ, ಪರೀಕ್ಷಾ ಭವನ, ಜ್ಞಾನಭಾರತಿ ಆವ­ರಣ, ಬೆಂಗಳೂರು ವಿವಿ ಸಂಪರ್ಕಿಸಲು ಕೋರಿದೆ.

ಪ್ರತಿಕ್ರಿಯಿಸಿ (+)