ಹಾಸನ: ನಗರದ ಮಕ್ಕಳ ಪಾಲನೆ, ಪೋಷಣೆ ಕೇಂದ್ರದಲ್ಲಿ ಆಶ್ರಯ ಪಡೆದಿದ್ದ ಇಬ್ಬರು ವಿಶೇಷ ಮಕ್ಕಳನ್ನು ವಿದೇಶಿ ದಂಪತಿ ಜೋಡಿ ದತ್ತು ಪಡೆದಿದೆ. ಹುಟ್ಟುವಾಗಲೇ ಸೀಳು ತುಟಿ ಹಾಗೂ ದೈಹಿಕ ನ್ಯೂನತೆ ಹೊಂದಿದ್ದ ಕಾರಣಕ್ಕೆ ಪೂರ್ವಿಕ್ ಎಂಬ ಮಗುವನ್ನು ಹೆತ್ತವರು ನಗರದ ತವರು ಚಾರಿಟಬಲ್ ಟ್ರಸ್ಟ್ಗೆ ಒಪ್ಪಿಸಿದ್ದರು.

ಹಾಗೆಯೇ ‘ಹೆಪಟೈಟಿಸ್ ಬಿ’ನಿಂದ ಬಳಲುತ್ತಿದ್ದ ಹೆಣ್ಣು ಮಗು ಗೌತಮಿಯನ್ನು ಹಸುಳೆಯಾಗಿದ್ದಾಗಲೇ ಸಾರ್ವಜನಿಕ ಸ್ಥಳದಲ್ಲಿ ಬಿಸಾಡಲಾಗಿತ್ತು. ಹೀಗೆ ಹೆತ್ತವರಿಗೆ ಬೇಡವಾದ ಮಕ್ಕಳನ್ನು ಟ್ರಸ್ಟ್ ಸದಸ್ಯರು ಒಂದೂವರೆ ವರ್ಷದಿಂದ ಆರೈಕೆ ಮಾಡಿದ್ದರು. ಇವೆರಡು ಮಕ್ಕಳು ವಿದೇಶಿ ದಂಪತಿಯ ಮಡಿಲು ಸೇರಿವೆ.

ಫಿನ್ಲ್ಯಾಂಡ್ನಲ್ಲಿ ನೆಲೆಸಿರುವ ಅನಿವಾಸಿ ಭಾರತೀಯ ರೂಬೆನಾ ಮತ್ತು ಈವಾ ಮರಿಯಾ ದಂಪತಿ ಗೌತಮಿಯನ್ನು ದತ್ತು ಪಡೆದರೆ, ಅಮೆರಿಕಾದ ಸೌತ್ ಕೆರೋಲಿನಾದಲ್ಲಿ ಪ್ರಾಧ್ಯಾಪಕರಾಗಿರುವ ಜೋಸ್ವಾ ಬ್ರೂಕ್ ಮತ್ತು ಕೆಲ್ಲಿ ಟೇಲರ್ ದಂಪತಿ ಪೂರ್ವಿಕ್ನನ್ನು ದತ್ತು ಪಡೆದರು. ಫಿನ್ಲೆಂಡ್ ದಂಪತಿಗೆ 10 ವರ್ಷದ ಮಗ ಹಾಗೂ ಅಮೆರಿಕ ದಂಪತಿಗೆ ಎರಡು ವರ್ಷದ ಹೆಣ್ಣು ಮಗುವಿದೆ.

‘ಮಕ್ಕಳು ಮನೆಯ ಹೊಸ ಸದಸ್ಯರಾಗಿ ಬಂದಿರುವುದಕ್ಕೆ ಖುಷಿಯಾಗಿದೆ. ಇವರಿಗೆ ಹೊಸ ಬದುಕು, ಭವಿಷ್ಯ ಕೊಡುತ್ತೇವೆ’ ಎಂದು ವಿದೇಶಿ ಪೋಷಕರು ಹೇಳಿದರು. ಅದರಲ್ಲೂ ಬ್ರೂಕ್ ದಂಪತಿ ದತ್ತು ಮಗನನ್ನು ಎಂಜಿನಿಯರ್ ಮಾಡುವ ಕನಸು ಕಟ್ಟಿಕೊಂಡಿದ್ದಾರೆ. ಸಾಕಿ, ಸಲುಹಿದ ಟ್ರಸ್ಟ್ ಸಿಬ್ಬಂದಿ ಮಕ್ಕಳು ದೂರ ಹೋಗುತ್ತಿರುವುದನ್ನು ನೋಡಿ ಕಣ್ಣೀರಿಟ್ಟ ದೃಶ್ಯ ಮನಕರಗುವಂತಿತ್ತು.

‘ಆನ್ಲೈನ್ ಮೂಲಕ ವಿದೇಶಿ ದಂಪತಿ ಅರ್ಜಿ ಸಲ್ಲಿಸಿದರು. ನಿಯಮದ ಪ್ರಕಾರವೇ ಮಗುವನ್ನು ದತ್ತು ನೀಡಲಾಗಿದೆ. ಎರಡು ಮಕ್ಕಳು ದೈಹಿಕ ನ್ಯೂನತೆಯಿಂದ ಬಳಲುತ್ತಿವೆ. ಇಂತಹ ಮಕ್ಕಳನ್ನು ದತ್ತು ಪಡೆದು ಭವಿಷ್ಯ ರೂಪಿಸಲು ಹೊರಟಿರುವ ಪೋಷಕರು ಇತರರಿಗೆ ಮಾದರಿ ಆಗಿದ್ದಾರೆ’ ಎಂದು ತವರು ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಡಾ.ಫಾಲಾಕ್ಷ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.