ನವದೆಹಲಿ (ಪಿಟಿಐ): ರೊಂಜನ್ ಸೋಧಿ ಭಾರತದ ಶೂಟಿಂಗ್ನಲ್ಲಿ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಯುಎಇಯ ಅಲ್ಐನ್ನಲ್ಲಿ ನಡೆದ ವಿಶ್ವಕಪ್ ಶೂಟಿಂಗ್ನ ಡಬಲ್ ಟ್ರ್ಯಾಪ್ ವಿಭಾಗದಲ್ಲಿ ಅವರು ಬಂಗಾರ ಜಯಿಸಿದರು.

ಸೋಧಿ ಕಳೆದ ವರ್ಷವೂ ವಿಶ್ವಕಪ್ನಲ್ಲಿ ಚಿನ್ನ ಗೆದ್ದಿದ್ದರು. ಈ ಬಾರಿಯೂ ಅದನ್ನು ತಮ್ಮಲ್ಲೇ ಉಳಿಸಿಕೊಂಡಿದ್ದಾರೆ. ಇಂತಹ ಸಾಧನೆ ಮಾಡಿದ ಭಾರತದ ಮೊದಲ ಶೂಟರ್ ಎಂಬ ಗೌರವ ಸೋಧಿ ಪಾಲಾಗಿದೆ. ಮಂಗಳವಾರ ನಡೆದ ಫೈನಲ್ನಲ್ಲಿ ಸೋಧಿ ಚೀನಾದ ಹು ಬಿನ್ಯುವಾನ್ ವಿರುದ್ಧ ಗೆಲುವು ಪಡೆದರು.

ಫೈನಲ್ನಲ್ಲಿ ಇಬ್ಬರೂ (187/200) ಸಮಬಲ ಸಾಧಿಸಿದರು. ಆದರೆ `ಟೈ ಶೂಟ್~ನಲ್ಲಿ ಸೋಧಿ ಜಯ ಪಡೆದರು. ಭಾರತದ ಶೂಟರ್ ಅರ್ಹತಾ ಹಂತದಲ್ಲಿ ಬಿನ್ಯುವಾನ್ ಬಳಿಕ ಎರಡನೇ ಸ್ಥಾನದಲ್ಲಿದ್ದರು. ಫೈನಲ್ನಲ್ಲಿ ಪ್ರಭಾವಿ ಪ್ರದರ್ಶನ ನೀಡಿದರು.

`ವಿಶ್ವಕಪ್ನಲ್ಲಿ ಚಿನ್ನ ಗೆಲ್ಲಲು ಸಾಧ್ಯವಾಗಿರುವುದು ಸಂತಸ ಉಂಟುಮಾಡಿದೆ. ನನಗೆ ಪ್ರಬಲ ಪೈಪೋಟಿ ಎದುರಾಗಿತ್ತು. ಇಂತಹ ಪ್ರದರ್ಶನವನ್ನು ಮುಂದುವರಿಸುವ ವಿಶ್ವಾಸ ನನ್ನದು~ ಎಂದು ಸೋಧಿ ಪ್ರತಿಕ್ರಿಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.