ಶನಿವಾರ, ಸೆಪ್ಟೆಂಬರ್ 21, 2019
21 °C

ವಿಶ್ವ ಅಥ್ಲೆಟಿಕ್ಸ್: ಚಿನ್ನ ಗೆದ್ದ ಉಸೇನ್ ಬೋಲ್ಟ್

Published:
Updated:

ಡೇಗು (ದಕ್ಷಿಣ ಕೊರಿಯಾ): 100 ಮೀಟರ್ ಓಟದಲ್ಲಿ ಅನರ್ಹಗೊಂಡು ನಿರಾಸೆಗೆ ಒಳಗಾಗಿದ್ದ ಜಮೈಕಾದ ಉಸೇನ್ ಬೋಲ್ಟ್ 200 ಮೀ.ನಲ್ಲಿ ಚಿನ್ನ ಗೆದ್ದು ತಮ್ಮ ಸಾಮರ್ಥ್ಯ ತೋರಿಸಿದ್ದಾರೆ. 13ನೇ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನ 200 ಮೀ. ಓಟದ ಫೈನಲ್‌ನಲ್ಲಿ ಬೋಲ್ಟ್ ಶನಿವಾರ 19.40 ಸೆಕೆಂಡ್‌ಗಳಲ್ಲಿ ಕ್ರಮಿಸಿದರು. 

200 ಮೀ. ಓಟದಲ್ಲಿ ಇದು ನಾಲ್ಕನೇ ಶ್ರೇಷ್ಠ ಸಾಧನೆ. ಈ ವಿಭಾಗದಲ್ಲಿ ಬೋಲ್ಟ್ (19.19 ಸೆ.) ವಿಶ್ವ ದಾಖಲೆ ಹೊಂದಿದ್ದಾರೆ. ಮತ್ತೊಮ್ಮೆ ಅವರು 19.30 ಸೆಕೆಂಡ್‌ಗಳಲ್ಲಿ ಕ್ರಮಿಸಿದ್ದರು. ಮೈಕಲ್ ಜಾನ್ಸನ್ ಈ ಗುರಿಯನ್ನು ಒಮ್ಮೆ 19.32 ಸೆ.ನಲ್ಲಿ ತಲುಪಿದ್ದರು.`ನಾನೇನು ಸಿಟ್ಟಿನಿಂದ ಓಡಲಿಲ್ಲ. ಆದರೆ 100 ಮೀಟರ್ ಓಟದಲ್ಲಿ ಮಾಡಿದ ತಪ್ಪಿಗಾಗಿ ಜನರ ಕ್ಷಮೆಯಾಚಿಸಿದೆ ~ ಎಂದು ಬೋಲ್ಟ್ ನುಡಿದರು. ಈ ವಿಭಾಗದಲ್ಲಿ ಅಮೆರಿಕದ ವಾಲ್ಟರ್ ಡಿಕ್ಸ್ (19.70 ಸೆ.) ಹಾಗೂ ಫ್ರಾನ್ಸ್‌ನ ಕ್ರಿಸ್ಟೋಫ್ ಲೆಮಿಟ್ರೆ (19.80 ಸೆ.) ನಂತರದ ಸ್ಥಾನ ಪಡೆದರು.

 

Post Comments (+)