ಶನಿವಾರ, ಮಾರ್ಚ್ 6, 2021
20 °C

ವಿಶ್ವ ಟ್ವೆಂಟಿ–20: ವಿಂಡೀಸ್ ತಂಡದಲ್ಲಿ ಸುನಿಲ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಶ್ವ ಟ್ವೆಂಟಿ–20: ವಿಂಡೀಸ್ ತಂಡದಲ್ಲಿ ಸುನಿಲ್

ನವದೆಹಲಿ (ಪಿಟಿಐ);  ವಿಶ್ವ ಟ್ವೆಂಟಿ–20 ಕ್ರಿಕೆಟ್ ಟೂರ್ನಿಯಲ್ಲಿ ಆಡುವ ವೆಸ್ಟ್‌ ಇಂಡೀಸ್ ತಂಡದಲ್ಲಿ  ಸ್ಪಿನ್ನರ್ ಸುನಿಲ್ ನಾರಾಯಣ್ ಅವರಿಗೆ ಸ್ಥಾನ ನೀಡಲಾಗಿದೆ.ಹೋದ ನವೆಂಬರ್‌ನಲ್ಲಿ ಅವರು ಅನು ಮಾನಾಸ್ಪದ ಬೌಲಿಂಗ್ ಶೈಲಿಯ ಆರೋಪದಲ್ಲಿ ಅಮಾನತಿಗೆ ಒಳಗಾಗಿದ್ದರು. ವಿಂಡೀಸ್ ತಂಡವು ಶ್ರೀಲಂಕಾ ಪ್ರವಾಸ ಮಾಡಿದ್ದ ಸಂದರ್ಭದಲ್ಲಿ ಅಂಪೈರ್‌ಗಳು ಅವರ ಬೌಲಿಂಗ್ ಶೈಲಿಯು ನಿಯಮಬಾಹಿರ ಎಂದು ದೂರು ನೀಡಿದ್ದರು.2015ರ ಏಕದಿನ ವಿಶ್ವಕಪ್ ಟೂರ್ನಿಯ ಸಂದರ್ಭದಲ್ಲಿಯೂ ಆಫ್‌ ಸ್ಪಿನ್ನರ್ ಸುನಿಲ್ ನಾರಾಯಣ್ ವಿವಾದ ಕ್ಕೊಳಗಾಗಿದ್ದರು. ಅವರನ್ನು ತಂಡದಿಂದ ಕೈಬಿಡಲಾಗಿತ್ತು. ಆದರೆ, ಶನಿವಾರ ವಿಂಡೀಸ್ ಕ್ರಿಕೆಟ್ ಮಂಡಳಿಯು ಪ್ರಕಟಿಸಿರುವ 15 ಆಟಗಾರರ ತಂಡದಲ್ಲಿ ಅವರನ್ನು ಸೇರ್ಪಡೆ ಮಾಡಲಾಗಿದೆ.ಡರೇನ್ ಸಾಮಿ ತಂಡದ ನಾಯಕತ್ವ ವಹಿಸುವರು. ಕ್ರಿಸ್ ಗೇಲ್, ಕೀರನ್ ಪೋಲಾರ್ಡ್, ಡ್ವೇನ್ ಬ್ರಾವೊ ತಂಡದಲ್ಲಿದ್ದಾರೆ. 2012ರಲ್ಲಿ ವಿಶ್ವ ಟ್ವೆಂಟಿ–20 ಚಾಂಪಿಯನ್ ಆಗಿದ್ದ ತಂಡದಲ್ಲಿದ್ದ 12 ಆಟಗಾರರು ಈ ಬಾರಿಯೂ ಇದ್ದಾರೆ. ಟೂರ್ನಿಯಲ್ಲಿ ವಿಂಡೀಸ್ ತಂಡವು ಮೊದಲ ಗುಂಪಿನಲ್ಲಿ ಆಡಲಿದೆ. ಈ ಬಾರಿ ಟೂರ್ನಿಯ ಆತಿಥ್ಯವನ್ನು ಭಾರತವು ವಹಿಸಲಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.