ಭಾರತದ ನಂಬರ್ ಒನ್ ರೇಡಿಯೊ ನೆಟ್ವರ್ಕ್ 92.7ಬಿಗ್ ಎಫ್ಎಂ ತಂಬಾಕು ಹಾನಿ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ `ಧಮ್ ಇದ್ರೆ ಧಮ್ ಬಿಡಿ' ಆಂದೋಲನಕ್ಕೆ ಚಾಲನೆ ನೀಡಿದೆ. ಮೂರು ಜನರ ಸಂಘಟಿತ ತಂಡ ಅಸ್ತಿಪಂಜರದ ಚಿತ್ರಗಳಿರುವ ಉಡುಪು ಧರಿಸಿ ಇಡೀ ನಗರದಲ್ಲಿ ಸಂಚರಿಸಿ ಪ್ರಮುಖ ಸ್ಥಳಗಳಿಗೆ ಹೋಗಿ ಬಿಗ್ ಎಫ್ಎಂ ಬ್ರ್ಯಾಂಡ್ ಹೊಂದಿರುವ ಆ್ಯಶ್ ಟ್ರೆ ನೀಡಿ ಧೂಮಪಾನ ಬಿಡುವಂತೆ ಕೋರಿದರು. ಧೂಮಪಾನ ಬಿಟ್ಟವರಿಗೆ ಪ್ರತಿಯಾಗಿ ಲಾಲಿಪಾಪ್ ನೀಡಲಾಯಿತು.

ಕಾರ್ಯಕ್ರಮದ ಎರಡನೇ ಭಾಗ ಗರುಡಮಾಲ್ನಲ್ಲಿ ನಡೆಯಿತು. ಅರ್ಜುನ ಪ್ರಶಸ್ತಿ ವಿಜೇತ, ರಾಷ್ಟ್ರೀಯ ಲಾಂಗ್ಜಂಪ್ ಚಾಂಪಿಯನ್ ರೀತ್ ಅಬ್ರಾಹಂ ಗರುಡಮಾಲ್ನಲ್ಲಿ ದೊಡ್ಡ ಸಿಗರೇಟ್ ಆಕಾರದ ಬ್ಯಾಗ್ ಕತ್ತರಿಸುವ ಮೂಲಕ ಧೂಮಪಾನ ಬಿಡಿ ಎಂಬ ಸಂದೇಶ ರವಾನಿಸಿದರು. `ಉತ್ತಮ ಆರೋಗ್ಯಕ್ಕಾಗಿ, ನಾಳೆಗಾಗಿ ಇಂದೇ ಧೂಮಪಾನ ಬಿಡಿ' ಎಂಬುದು ಕಾರ್ಯಕ್ರಮದ ಸಂದೇಶ.

ಈ ಆಂದೋಲನದ ಕುರಿತು ಮಾತನಾಡಿದ 92.7 ಬಿಗ್ಎಫ್ಎಂ ವಹಿವಾಟು ಮುಖ್ಯಸ್ಥ ಅಶ್ವಿನ್ ಪದ್ಮನಾಭನ್, ತಂಬಾಕು ಸೇವನೆಯಿಂದ ಯುವಜನರ ಅಕಾಲಿಕ ಸಾವು ಹೆಚ್ಚುತ್ತಿದೆ. ಈ ಪ್ರಮಾಣ ಆಘಾತಕಾರಿ ಮಟ್ಟ ತಲುಪಿದೆ. `ವಿಶ್ವ ತಂಬಾಕು ರಹಿತ ದಿನ' ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸಹಕಾರಿ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.